AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ಹೆಬ್ಬಾವು ಬೇಟೆಯಾಡಿ ಅದರ ಮಾಂಸವನ್ನು ಬೇಯಿಸಿ ತಿಂದ ಇಬ್ಬರ ಬಂಧನ

ಕೇರಳದ ಪಣಪುಳದಲ್ಲಿ ಹೆಬ್ಬಾವನ್ನು ಕೊಂದು ಅದರ ಮಾಂಸವನ್ನು ಬೇಯಿಸಿದ ಆರೋಪದ ಮೇಲೆ ಪ್ರಮೋದ್ ಮತ್ತು ಬಿನೀಶ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆರೋಪಿಗಳಾದ ಪ್ರಮೋದ್ ಮತ್ತು ಬಿನೀಶ್ ಇಬ್ಬರೂ ಬುಧವಾರ ಸಂಜೆ ತಮ್ಮ ಮನೆಗಳ ಸಮೀಪದ ರಬ್ಬರ್ ತೋಟದಲ್ಲಿ ಹೆಬ್ಬಾವನ್ನು ಬೇಟೆಯಾಡಿ, ನಂತರ ಪ್ರಮೋದ್ ಅವರ ಮನೆಯಲ್ಲಿ ಅದರ ಮಾಂಸದಿಂದ ಕರಿ ತಯಾರಸಿದ್ದರು.

ಕೇರಳ: ಹೆಬ್ಬಾವು ಬೇಟೆಯಾಡಿ ಅದರ ಮಾಂಸವನ್ನು ಬೇಯಿಸಿ ತಿಂದ ಇಬ್ಬರ ಬಂಧನ
ಹೆಬ್ಬಾವು ಬೇಯಿಸಿ ತಿಂದ ಆರೋಪಿಗಳುImage Credit source: India Today
ನಯನಾ ರಾಜೀವ್
|

Updated on: Sep 12, 2025 | 7:50 AM

Share

ತಿರುವನಂತಪುರಂ, ಸೆಪ್ಟೆಂಬರ್ 11: ಹೆಬ್ಬಾವನ್ನು ಬೇಟೆಯಾಡಿ ಅದರ ಮಾಂಸವನ್ನು ಬೇಯಿಸಿ ತಿಂದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಕೇರಳದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಪ್ರಮೋದ್ ಮತ್ತು ಬಿನೀಶ್ ಇಬ್ಬರೂ ಬುಧವಾರ ಸಂಜೆ ತಮ್ಮ ಮನೆಗಳ ಸಮೀಪದ ರಬ್ಬರ್ ತೋಟದಲ್ಲಿ ಹೆಬ್ಬಾವು(Python) ಬೇಟೆಯಾಡಿ, ನಂತರ ಪ್ರಮೋದ್ ಅವರ ಮನೆಯಲ್ಲಿ ಅದರ ಮಾಂಸದಿಂದ ಕರಿ ತಯಾರಸಿದ್ದರು.

ಖಚಿತ ಮಾಹಿತಿ ಮೇರೆಗೆ ಥಳಿಪರಂಬ ರೇಂಜ್ ಆಫೀಸರ್ ಸುರೇಶ್ ಪಿ ಮತ್ತು ಅವರ ತಂಡವು ಮನೆಯ ಮೇಲೆ ದಾಳಿ ನಡೆಸಿ, ಹಾವಿನ ಭಾಗಗಳು ಮತ್ತು ಬೇಯಿಸಿದ ಖಾದ್ಯವನ್ನು ವಶಪಡಿಸಿಕೊಂಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಹಾವಿಗೆ ಸಂಬಂಧಿಸಿದ ಅಧ್ಯಯನದ ವರದಿಯೊಂದು ಬಹಿರಂಗಗೊಂಡಿತ್ತು. ಅದರಲ್ಲಿ ಸಂಶೋಧಕರು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ʼಚಿಕನ್ ಮಟನ್ ಗಳಿಗಿಂತ ಹೆಬ್ಬಾವಿನ ಮಾಂಸವೇ ಉತ್ತಮ ಎಂದು ಹೇಳಿದ್ದರು, ಭವಿಷ್ಯದಲ್ಲಿ ಮುಂದೊಂದು ದಿನ ಹೆಬ್ಬಾವಿನ ಮಾಂಸವೇ ಪ್ರಂಚದ ಮುಖ್ಯ ಮಾಂಸವಾಗಲಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:  ರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಈ ಸುದ್ದಿಯನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಉತ್ತಮ ಮಾಂಸಹಾರವನ್ನು ಸೇವನೆ ಮಾಡಲು ಹಾಗೂ ಪ್ರಾಣಿಗಳ ಕೊಲ್ಲುವಿಕೆಯಿಂದ ಉಂಟಾಗುವ ಪರಿಸರ ಹಾನಿಯನ್ನು ತಡೆಗಟ್ಟಲು ಆಹಾರದ ಅಲಭ್ಯತೆಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ವಿಜ್ಞಾನಿಗಳು ಈ ಹೊಸ ಆವಿಷ್ಕಾರವನ್ನು ಮಾಡಿದ್ದು, ಚಿಕನ್, ಮಟನ್ ಇತ್ಯಾದಿ ಮಾಂಸಗಳಿಗಿಂತ ಹೆಬ್ಬಾವಿನ ಮಾಂಸವು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿ ಹಾಗೂ ಹೆಬ್ಬಾವಿನ ಮಾಂಸವು ಮಾನವರಿಗೆ ಮಾತ್ರವಲ್ಲದೆ ಪರಿಸರಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಪ್ರಪಂಚದಾದ್ಯಂತ ಮಾಂಸಹಾರಿಗಳು ಚಿಕನ್ ಮತ್ತು ಮಟನ್ ಗಳನ್ನೇ ಹೆಚ್ಚು ಸೇವನೆ ಮಾಡುತ್ತಾರೆ. ಆದರೆ ಕುರಿ, ಕೋಳಿ ಇತ್ಯಾದಿ ಮಾಂಸಗಳಿಗಿಂತ ಹೆಬ್ಬಾವಿನ ಮಾಂಸವನ್ನು ಸೇವನೆ ಮಾಡುವುದು ಉತ್ತಮ ಎಂದು ಸಂಶೋಧಕರು ಹೇಳಿದ್ದಾರೆ.

ಕೋಳಿ, ಕುರಿ, ಮೇಕೆ, ಹಂದಿ ಇತ್ಯಾದಿಗಳ ಸಾಕಾಣಿಕೆಗೆ ಹೆಚ್ಚಿನ ಬಂಡವಾಳದ ಅವಶ್ಯಕತೆಯೂ ಇದೆ. ಅಷ್ಟೇ ಅಲ್ಲದೆ ಫಾರ್ಮ್ ಗಳಲ್ಲಿ ಇವುಗಳು ಬೇಗ ಬೆಳೆಯಬೇಕು ಎಂಬ ಕಾರಣಕ್ಕೆ ಅವುಗಳಿಗೆ ಕೆಮಿಕಲ್ ಕೂಡಾ ಇಂಜೆಕ್ಟ್ ಮಾಡಲಾಗುತ್ತದೆ. ಇಂತಹ ಮಾಂಸವು ನಮ್ಮ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಇದಕ್ಕೆ ಪೂರಕವಾಗಿ ಹೆಬ್ಬಾವಿನ ಮಾಂಸವು ಉತ್ತಮವಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ