ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ
ಏಷ್ಯಾದ ಅನೇಕ ದೇಶಗಳಲ್ಲಿ ಕೋಳಿಗಳು, ಹಂದಿಗಳು ಮತ್ತು ಜಾನುವಾರುಗಳಂತಹ ಸಾಂಪ್ರದಾಯಿಕ ಜಾನುವಾರುಗಳಿಗೆ ಹೋಲಿಸಿದರೆ ಆಹಾರವಾಗಿ ಹಾವಿನ ಮಾಂಸದ ತೂಕವೇ ಮೇಲುಗೈ ಸಾಧಿಸಿದೆ. ಸಾಕಣೆ ಮಾಡಲಾದ ಹೆಬ್ಬಾವುಗಳಿಗೆ ಸರಿಯಾಗಿ ಆಹಾರ ನೀಡದಿದ್ದರೂ ಅವು ವೇಗವಾಗಿ ಬೆಳೆಯುತ್ತವಂತೆ. ಇನ್ನು ದೀರ್ಘಕಾಲದವರೆಗೆ ಆಹಾರ ಪೂರೈಕೆ ಸರಪಳಿಗೆ ಅಡ್ಡಿಯುಂಟಾದಾಗ ಹಾವಿನ ಮಾಂಸವು ಸುಸ್ಥಿರ ಆಹಾರ ಮೂಲವನ್ನು ಒದಗಿಸಬಲ್ಲದು ಎಂದು ತಿಳಿದುಬಂದಿದೆ.

ನಮ್ಮಲ್ಲಿ ಬಹುತೇಕ ಶಾಕಾಹಾರಿಗಳಿಗೆ Snake gourd ಅಂದರೆ ಹಾವಿನಂತೆ ಬಳಕುವ ಉದ್ದುದ್ದ ಪಡವಲಕಾಯಿಯ ಸುಂದರ ಚಿತ್ರಣ ಮೂಡುತ್ತದೆ! ಈ ಪಡವಲಕಾಯಿಯನ್ನು ಪವಿತ್ರವಾದುದು ಎಂದೂ ಪರಿಗಣಿಸುತ್ತಾರೆ. ನಾಗ ಷಷ್ಠಿ ಜೊತೆ ಹಾವಿನಂತೆ ತಳಕು ಹಾಕಿಕೊಳ್ಳುವ ಈ ತರಕಾರಿಯನ್ನು ಕೆಲವರು ತಿನ್ನುವುದಿಲ್ಲ. ಆದರೆ ಅದರ ರುಚಿ ಹತ್ತಿಸಿಕೊಂಡವರು ಪಡವಲಕಾಯಿಯನ್ನು ಬಿಡುವ ಮಾತೇ ಇಲ್ಲ. ಇದು ಶಾಕಾಹಾರಿಗಳ ಆಹಾರ ಕ್ರಮವಾಗಿದ್ದರೆ ಮತ್ತೊಂದು ವರ್ಗದ ಜನರಿದ್ದಾರೆ – ಅವರೇ ಮಾಂಸಾಹಾರಿಗಳು. ಅವರು ನಿಜವಾಗಿಯೂ ಈ snake ಅನ್ನುವುದನ್ನು garden ನಲ್ಲಿ ಬೆಳೆಸುತ್ತಾರೆ. ಅವರಿಗೆ snake garden ಜೀವನದ ದೊಡ್ಡ ಭಾಗವಾಗಿದೆ. ಅಂದರೆ ಹಾವುಗಳನ್ನು ದೊಡ್ಡ ದೊಡ್ಡ ಗಾರ್ಡನ್ ಗಳಲ್ಲಿ ಬೆಳೆಸುವ ಕೃಷಿ ಮಾಡುತ್ತಾರೆ. ಮಾಂಸಾಹಾರಿಗಳ ಆಹಾರದ ಭಾಗವಾಗಿ ಹಾವುಗಳನ್ನು ಸಾಕುತ್ತಾರೆ. ಅದರ ಮಾಂಸವನ್ನು ತಿನ್ನುತ್ತಾರೆ. ಅಂದರೆ ಇತ್ತೀಚೆಗೆ ಮಾಂಸಾಹಾರಿಗಳ ಮಾಂಸದ ಅವಶ್ಯಕತೆಯನ್ನು ಹಾವುಗಳು ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತಿವೆ! ಹಾವುಗಳನ್ನು ಸಾಕುವ ಉದ್ಯಮ ಯಾವ ಮಟ್ಟಕ್ಕೆ ಬೆಳೆದು ನಿಂತಿದೆಯೆಂದರೆ ಒಟ್ಟಾರೆ ಮಾಂಸಾಹಾರಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಾವಿನ ಮಾಂಸ ಸುಸ್ಥಿರವಾದ ಮೂಲವಾಗಿದೆ. ಅಂದಹಾಗೆ ಇತ್ತೀಚಿನ ಎಣಿಕೆಯ ಪ್ರಕಾರ 3789 ಹಾವು ಪ್ರಭೇದಗಳಿವೆ. ಇದು ಹಲ್ಲಿಗಳ ನಂತರ ಸರೀಸೃಪಗಳ ಜಾತಿಯಲ್ಲಿ ಎರಡನೇ ದೊಡ್ಡ ಗುಂಪಾಗಿದೆ. ದಿನಾ ಚೀನಾ, ಇಂಡೋನೇಷ್ಯಾ, ಮಲೇಷಿಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಕನಿಷ್ಠ ಲಕ್ಷಾಂತರ ಹೆಬ್ಬಾವುಗಳನ್ನು ಕೊಲ್ಲಲಾಗುತ್ತಿದೆ. ಇದು ಮಾಂಸಾಹಾರಕ್ಕಾಗಿ ಅಷ್ಟೇ ಅಲ್ಲ; ಫ್ಯಾಶನ್ ವಸ್ತುಗಳ ತಯಾರಿಕೆಗಾಗಿಯೂ ಇವುಗಳನ್ನು ಬೆಳೆಸಿ, ಕೊಲ್ಲಲಾಗುತ್ತದೆ. ಇಲ್ಲಿ ಮಾಂಸಾಹಾರಕ್ಕಾಗಿ ಹೆಬ್ಬಾವುಗಳ ಸಾಕಣೆ ವಿಷಯದ ಬಗ್ಗೆ ಸವಿಸ್ತಾರವಾಗಿ ಹೇಳಲಾಗಿದೆ. ಏಕೆಂದರೆ ಹೆಬ್ಬಾವು ಸಾಕಣೆಯು ಸುಸ್ಥಿರವಾಗಿ ಹೆಚ್ಚು...
Published On - 5:32 pm, Tue, 11 June 24