AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care Tips : ತ್ವಚೆಯ ಹೊಳಪು ಹೆಚ್ಚಾಗಲು ಸಾಸಿವೆ ಎಣ್ಣೆ ಹೀಗೆ ಬಳಸಿ, ಆದ್ರೆ ಈ ಟಿಪ್ಸ್ ಪಾಲಿಸಿ

ಹೆಣ್ಣು ಮಕ್ಕಳಿಗೆ ತ್ವಚೆಯ ವಿಪರೀತ ಕಾಳಜಿ. ತ್ವಚೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾದರೂ ಸಾಕು, ಚಿಂತಿಸುತ್ತ ಕೂರುತ್ತಾರೆ. ಸೌಂದರ್ಯ ವರ್ಧಕಗಳ ಖರೀದಿಯತ್ತ ಗಮನ ಹರಿಸುತ್ತಾರೆ. ಆದರೆ ತ್ವಚೆಗೆ ಸಾಸಿವೆ ಎಣ್ಣೆಯನ್ನು ಹಚ್ಚುವ ಮುನ್ನ ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಅಡ್ಡಪರಿಣಾಮಗಳಿಂದ ಮುಖವನ್ನು ರಕ್ಷಿಸಿಕೊಳ್ಳಬಹುದು

Skin Care Tips : ತ್ವಚೆಯ ಹೊಳಪು ಹೆಚ್ಚಾಗಲು ಸಾಸಿವೆ ಎಣ್ಣೆ ಹೀಗೆ ಬಳಸಿ, ಆದ್ರೆ ಈ ಟಿಪ್ಸ್ ಪಾಲಿಸಿ
ಸಾಯಿನಂದಾ
| Edited By: |

Updated on: Jun 11, 2024 | 2:13 PM

Share

ಸೌಂದರ್ಯ ಎಂದ ಕೂಡಲೇ ಮೊದಲು ನೆನಪಾಗುವುದೇ ಹೆಣ್ಣು ಮಕ್ಕಳು. ಹೀಗಾಗಿ ತ್ವಚೆಗೆ ನಾನಾ ರೀತಿಯ ಉತ್ಪನ್ನಗಳನ್ನು ಬಳಸಿ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಕೆಲವರು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಲು ಸಾಸಿವೆ ಎಣ್ಣೆಯನ್ನು ಬಳಸುತ್ತಿರಬಹುದು. ಈ ಎಣ್ಣೆ ಬಳಸುತ್ತಿದ್ದರೆ ಕೆಲವು ವಿಚಾರಗಳ ಬಗ್ಗೆ ಗಮನವಹಿಸದಿದ್ದರೆ ಚರ್ಮದ ಸಮಸ್ಯೆಗಳು ಹೆಚ್ಚಾಗಬಹುದು.

ಸಾಸಿವೆ ಎಣ್ಣೆ ತ್ವಚೆಗೆ ಹೀಗೂ ಬಳಸಬಹುದು

  • ಒಂದು ಚಮಚ ಸಾಸಿವೆ ಎಣ್ಣೆಗೆ ಒಂದು ಚಮಚ ತೆಂಗಿನ ಎಣ್ಣೆ ಸೇರಿಸಿ ರಾತ್ರಿ ಮಲಗುವ ಮುನ್ನ ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿ, ತಣ್ಣನೆಯ ನೀರಿನಲ್ಲಿ ಮುಖ ತೊಳೆದರೆ ತ್ವಚೆಯ ಹೊಳಪು ಹೆಚ್ಚಾಗುತ್ತದೆ.
  • ಒಂದು ಚಮಚ ಸಾಸಿವೆ ಎಣ್ಣೆಯಿಂದ ಮುಖಕ್ಕೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡುವುದರಿಂದ ಕಪ್ಪಾದ ಜಾಗವಿದ್ದರೆ ಅಥವಾ ಮೊಡವೆ ಕಲೆಯೂ ನಿವಾರಣೆಯಾಗುತ್ತದೆ.
  • ಒಂದು ಚಮಚ ಸಾಸಿವೆ ಎಣ್ಣೆಗೆ ಅರಶಿನ ಪುಡಿ, ಕೇಸರಿ, ಶ್ರೀಗಂಧ, ಕಡಲೆಹಿಟ್ಟು ಬೆರೆಸಿ, ವಾರಕ್ಕೆರಡು ಬಾರಿ ಹಚ್ಚಿ ಮಸಾಜ್ ಮಾಡುವುದರಿಂದ ಸತ್ತ ಜೀವಕೋಶಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ.
  • ಸಾಸಿವೆ ಎಣ್ಣೆಗೆ ಲಿಂಬೆರಸ ಹಾಗೂ ಮೊಸರು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ, ಇದರಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣವು ಮೊಡವೆಗಳು ಮೂಡದಂತೆ ತಡೆಯುತ್ತದೆ.

ಇದನ್ನೂ ಓದಿ: ಹಲ್ಲುಗಳು ಹಳದಿಗಟ್ಟಿದ್ದರೆ ಫಳಫಳ ಹೊಳೆಯುವಂತೆ ಮಾಡುವುದು ಹೇಗೆ? ಇಲ್ಲಿದೆ ಮನೆಮದ್ದು

ಸಾಸಿವೆ ಎಣ್ಣೆಯನ್ನು ತ್ವಚೆಗೆ ಅನ್ವಯಿಸುವ ಮುನ್ನ ಈ ಟಿಪ್ಸ್ ಪಾಲಿಸಿ

  • ಸಾಸಿವೆ ಎಣ್ಣೆಯನ್ನು ಬಳಸುವ ಮೊದಲು, ಚರ್ಮದ ಮೇಲೆ ಪ್ಯಾಚ್ ಟೆಸ್ಟ್ ಮಾಡುವುದನ್ನುಡುವುದನ್ನು ಮರೆಯದಿರಿ.
  • ಸಾಸಿವೆ ಎಣ್ಣೆಯನ್ನು ನೇರವಾಗಿ ತ್ವಚೆಗೆ ಅನ್ವಯಿಸುವ ಸಾಹಸಕ್ಕೆ ಕೈ ಹಾಕಬೇಡಿ. ಮೊದಲು ಈ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಬಿಸಿ ಮಾಡಿದ ಎಣ್ಣೆಯನ್ನು ಬಳಸುವುದರಿಂದ ಇದರಲ್ಲಿರುವ ಸತ್ವವು ಚರ್ಮಕ್ಕೆ ಸುಲಭವಾಗಿ ಹೀರಲ್ಪಡುತ್ತವೆ.
  • ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಸಾಸಿವೆ ಎಣ್ಣೆಯನ್ನು ಬಳಸಬೇಡಿ. ಇದರ ಬಳಕೆಯು ಚರ್ಮವನ್ನು ಹೆಚ್ಚು ಎಣ್ಣೆಯುಕ್ತವಾಗಿಸಿ, ಮೊಡವೆ ಸಮಸ್ಯೆ ಕಾಣಿಸಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು