Relationship Tips : ಮ್ಯಾರೇಜ್ ಲೈಫ್ ಖುಷಿಯಾಗಿರಬೇಕಾದ್ರೆ ಸಂಗಾತಿಯ ಮುಂದೆ ಈ ರೀತಿ ವರ್ತಿಸಲೇಬೇಡಿ

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪತಿ ಪತ್ನಿಯ ನಡುವಿನ ಸಣ್ಣ ಪುಟ್ಟ ಜಗಳ ಗಳು ಡೈವೋರ್ಸ್ ಹಂತಕ್ಕೆ ತಲುಪಿದೆ. ಇಲ್ಲಿ ಪ್ರೀತಿ, ಕಾಳಜಿ, ವಿಶ್ವಾಸ, ಗೌರವ ಎನ್ನುವುದು ಬಹಳ ಮುಖ್ಯ ಎನ್ನುವುದನ್ನು ಮರೆತ್ತಿದ್ದಾರೆ. ಹೌದು ಈ ಸಂಬಂಧದಲ್ಲಿ ವಿಚಾರದಲ್ಲಿ ವ್ಯಕ್ತಿಗಳಿಬ್ಬರೂ ಮಾಡುವ ಸಣ್ಣ ಪುಟ್ಟ ತಪ್ಪುಗಳು ದೊಡ್ಡದಾಗಿ ಬಿಡುತ್ತದೆ. ಸಂಬಂಧದಲ್ಲಿ ಎಷ್ಟು ಜಾಗರೂಕರಾಗಿ ವರ್ತಿಸಿದರೂ ಸಾಲದು. ಸಂಗಾತಿಯ ಜೊತೆಗೆ ಈ ರೀತಿಯಾಗಿ ಅಪ್ಪಿತಪ್ಪಿಯೂ ವರ್ತಿಸಲೇ ಬೇಡಿ, ಇದರಿಂದ ಸಂಬಂಧವೇ ಮುರಿದು ಬೀಳಬಹುದು.

Relationship Tips : ಮ್ಯಾರೇಜ್ ಲೈಫ್ ಖುಷಿಯಾಗಿರಬೇಕಾದ್ರೆ ಸಂಗಾತಿಯ ಮುಂದೆ ಈ ರೀತಿ ವರ್ತಿಸಲೇಬೇಡಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2024 | 5:29 PM

ಯಾವ ಸಂಸಾರದಲ್ಲಿ ಜಗಳಗಳು ಇರಲ್ಲ ಹೇಳಿ, ಗಲಾಟೆ, ಮುನಿಸು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸಿ ಸಂಬಂಧವನ್ನು ಗಟ್ಟಿಯಾಗಿಸುತ್ತವೆ. ಆದರೆ ಕೆಲವೊಮ್ಮೆ ವ್ಯಕ್ತಿಯ ಸಣ್ಣ ಸಣ್ಣ ತಪ್ಪುಗಳು, ಎಡವಟ್ಟುಗಳು ಸಂಬಂಧವನ್ನು ದೂರವಾಗಿಸುತ್ತದೆ. ಎಷ್ಟೋ ಈ ಬಾರಿ ಈ ಬಗ್ಗೆ ಯೋಚಿಸುವುದೇ ಇಲ್ಲ. ಕೆಲವರಿಗೆ ಸಂಗಾತಿಯ ಕೆಲ ವರ್ತನೆಗಳು ಉಸಿರುಗಟ್ಟಿಸಬಹುದು. ಒಮ್ಮೆ ಈ ಭಾವನೆಯೂ ಮನಸ್ಸಿನಲ್ಲಿ ಬಂದರೆ ಸಾಕು ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಗುತ್ತದೆ. ಆದರೆ ಇದನ್ನರಿತು ತಪ್ಪುಗಳನ್ನು ತಿದ್ದಿ ನಡೆದುಕೊಂಡರೆ ಗಂಡ ಹೆಂಡಿರ ನಡುವೆ ಬಾಂಧವ್ಯವು ಗಟ್ಟಿಯಾಗಿರಲು ಸಾಧ್ಯ.

  • ಸಂಗಾತಿಯನ್ನು ಭಾವನೆಗಳಿಂದ ಅಥವಾ ಮಾತಿನಿಂದ ಟ್ಟಿಹಾಕುವುದು ಒಳ್ಳೆಯದಲ್ಲ. ನಿಮ್ಮ ಪತ್ನಿ ಅಥವಾ ಪತಿಯು ಏನೇ ಮಾಡಲು ಹೊರಟರೂ ತಡೆದು ನಿಲ್ಲಿಸುವುದು. ಇದು ನಿಮ್ಮ ಜೊತೆಗೆ ಬದುಕುವ ವ್ಯಕ್ತಿಗೆ ಹಿಂಸೆ ಅನಿಸಬಹುದು, ಇದನ್ನೇ ಕಾರಣವಾಗಿಟ್ಟುಕೊಂಡು ದಾಂಪತ್ಯದಿಂದ ಹೊರ ಬರುವ ಸಾಧ್ಯತೆಯೇ ಹೆಚ್ಚು.
  • ಸಂಬಂಧದಲ್ಲಿ ಯಾವತ್ತಿಗೂ ಹಳೆಯ ಪ್ರೇಮಿಯ ಬಗ್ಗೆ ಅಥವಾ ಹಳೆಯ ಸಂಬಂಧದ ಬಗ್ಗೆ ಮಾತನಾಡಲೇಬೇಡಿ. ಇಬ್ಬರೂ ಒಂದೇ ಸೂರಿನಲ್ಲಿ ಬದುಕುತ್ತಿರುವ ಕಾರಣ, ಹಳೆಯ ಸಂಬಂಧಗಳನ್ನು ಕೆದಕುವುದು ಒಳ್ಳೆಯದಲ್ಲ. ಇದರಿಂದ ಗಂಡ ಹೆಂಡಿರ ಉತ್ತಮ ಸಂಬಂಧವು ಹಾಳಾಗುತ್ತದೆ.
  • ಅನಗತ್ಯ ವಿಚಾರಗಳನ್ನು ಪದೇ ಪದೇ ಮಾತನಾಡುವುದು ನಿಮ್ಮ ಸಂಗಾತಿಗೆ ಇಷ್ಟವಾಗದೇ ಇರಬಹುದು. ಈ ವಿಚಾರ ಗೊತ್ತಿದ್ದರೂ ಆ ವಿಷಯಗಳನ್ನೇ ಇಬ್ಬರೇ ಇರುವಾಗ ಪ್ರಸ್ತಾಪಿಸುವುದು ಖಂಡಿತವು ಒಳ್ಳೆಯದಲ್ಲ. ಇದರಿಂದ ಇಬ್ಬರೂ ಮೂಡ್ ಹಾಳಾಗುತ್ತದೆ.
  • ಸಂಗಾತಿಯನ್ನು ಅನುಮಾನ ದೃಷ್ಟಿಯಿಂದ ನೋಡುವುದು ಕೂಡ ಸಂಬಂಧವು ಹಾಳಾಗುವುದಕ್ಕೆ ಮುಖ್ಯ ಕಾರಣ. ಪತಿಯನ್ನು ಪತ್ನಿಯೂ, ಪತ್ನಿಯನ್ನು ಪತಿಯು ಪ್ರೀತಿಸುತ್ತಿರುವುದು ತಿಳಿದರೂ ಕೂಡ ಅವರ ಮೇಲೆ ಸಂಶಯ ಪಡುವುದು ಸರಿಯಲ್ಲ. ಸಂಗಾತಿಯ ಮೊಬೈಲ್ ಚೆಕ್ ಮಾಡುವುದು, ಅವರ ನಡೆ ನುಡಿಯ ಬಗ್ಗೆ ಪ್ರಶ್ನಿಸುವುದು. ಇದರಿಂದ ಇಬ್ಬರ ಮನಸ್ಥಿತಿಯನ್ನು ಹಾಳು ಮಾಡುತ್ತದೆ.
  • ಸಂಗಾತಿಯ ಮೇಲೆ ಕೋಪ ಮಾಡಿಕೊಳ್ಳುವುದು, ಮುನಿಸಿಕೊಳ್ಳುವುದು ಸಹಜ. ಆದರೆ ಸಿಟ್ಟಿನಿಂದ ಬಾಯಿಗೆ ಬಂದಂತೆ ಬೈಯಬೇಡಿ. ಈ ವೇಳೆ ಮಾತು ಎಲ್ಲೇ ಮೀರಿ ಹೋಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಸಂಗಾತಿಯ ಮೇಲೆ ಕೋಪ ಬಂದಾಗ ಆದಷ್ಟು ಶಾಂತರೀತಿಯಲ್ಲಿಯೇ ವರ್ತಿಸಿ, ಇಲ್ಲವಾದರೆ ಮೌನವಹಿಸಿ ಬಿಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ