AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖದೀಮರಿಗಿಲ್ಲ ಪೊಲೀಸರ ಭಯ: ಠಾಣೆ ಸುತ್ತಮುತ್ತನೇ ದರೋಡೆ

ಖದೀಮರಿಗಿಲ್ಲ ಪೊಲೀಸರ ಭಯ: ಠಾಣೆ ಸುತ್ತಮುತ್ತನೇ ದರೋಡೆ

ರಮೇಶ್ ಬಿ. ಜವಳಗೇರಾ
|

Updated on: Dec 08, 2025 | 6:17 PM

Share

ಬೆಂಗಳೂರು ನಗರ ಜಿಲ್ಲೆ ಆನೇಕಲ್​ ತಾಲೂಕಿನ ಸೂರ್ಯನಗರ ಪೊಲೀಸ್​​​​​​ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಮನೆ, ಕ್ಲಿನಿಕ್​ಗಳ ಬೀಗ ಮುರಿದು ನಗದು, ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಧನುಷ್​ ಎಂಬುವರ ಮನೆ ಬೀಗ ಮುರಿದು 50 ಸಾವಿರ ನಗದು, 80 ಗ್ರಾಂ ಚಿನ್ನಾಭರಣ, 1 ವಜ್ರದ ಉಂಗುರ, ಬೆಳ್ಳಿ ಆಭರಣ ಸೇರಿ ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಎಗರಿಸಿಕೊಂಡು ಹೋಗಿದ್ದಾರೆ. ಇನ್ನು ಸಂಗಮೇಶ್ವರ ಪಾಲಿ ಕ್ಲಿನಿಕ್​ನಲ್ಲಿದ್ದ 5 ಲಕ್ಷ ನಗದು, 10 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆ ಸಂಬಂಧ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಆನೇಕಲ್, (ಡಿಸೆಂಬರ್ 08): ಬೆಂಗಳೂರು ನಗರ ಜಿಲ್ಲೆ ಆನೇಕಲ್​ ತಾಲೂಕಿನ ಸೂರ್ಯನಗರ ಪೊಲೀಸ್​​​​​​ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಮನೆ, ಕ್ಲಿನಿಕ್​ಗಳ ಬೀಗ ಮುರಿದು ನಗದು, ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಧನುಷ್​ ಎಂಬುವರ ಮನೆ ಬೀಗ ಮುರಿದು 50 ಸಾವಿರ ನಗದು, 80 ಗ್ರಾಂ ಚಿನ್ನಾಭರಣ, 1 ವಜ್ರದ ಉಂಗುರ, ಬೆಳ್ಳಿ ಆಭರಣ ಸೇರಿ ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಎಗರಿಸಿಕೊಂಡು ಹೋಗಿದ್ದಾರೆ. ಇನ್ನು ಸಂಗಮೇಶ್ವರ ಪಾಲಿ ಕ್ಲಿನಿಕ್​ನಲ್ಲಿದ್ದ 5 ಲಕ್ಷ ನಗದು, 10 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆ ಸಂಬಂಧ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.