ಪ್ರೀ ವೆಡ್ಡಿಂಗ್ ಶೂಟಿಂಗ್ ಮುಗಿಸಿ ಬಾರದ ಲೋಕಕ್ಕೆ ತೆರಳಿದ ಜೋಡಿ, ಆಗಿದ್ದೇನು?
ಮದುವೆ ಹೊಸ್ತಿಲಲ್ಲಿ ಇದ್ದ ವಧು-ವರ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ದಾಸನಾಳ ಸಮೀಪದ ನಡೆದ ಅಪಘಾತದಲ್ಲಿ ವಧು- ವರ ಜೋಡಿ ಸಾವನ್ನಪ್ಪಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಪಂಪಾವನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮುಗಿಸಿದ್ದ ಜೋಡಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಇರಕಲ್ ಗಡದ ಕರಿಯಪ್ಪ (26), ಕವಿತಾ ಪವಾಡೆಪ್ಪ ಮಡಿವಾಳ(19) ಮೃತ ಜೋಡಿ.
ಕೊಪ್ಪಳ, (ಡಿಸೆಂಬರ್ 08): ಮದುವೆ ಹೊಸ್ತಿಲಲ್ಲಿ ಇದ್ದ ವಧು-ವರ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ದಾಸನಾಳ ಸಮೀಪದ ನಡೆದ ಅಪಘಾತದಲ್ಲಿ ವಧು- ವರ ಜೋಡಿ ಸಾವನ್ನಪ್ಪಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಪಂಪಾವನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮುಗಿಸಿದ್ದ ಜೋಡಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಇರಕಲ್ ಗಡದ ಕರಿಯಪ್ಪ (26), ಕವಿತಾ ಪವಾಡೆಪ್ಪ ಮಡಿವಾಳ(19) ಮೃತ ಜೋಡಿ. ಕವಿತಾ, ಕಾರಟಗಿ ತಾಲೂಕಿನ ಮುಷ್ಠೂರು ಗ್ರಾಮದ ನಿವಾಸಿಯಾಗಿದ್ದರು. ಮುಷ್ಠೂರು ಗ್ರಾಮಕ್ಕೆ ಕವಿತಾಳನ್ನು ಬಿಟ್ಟು ಬರಲು ಕರಿಯಪ್ಪ ಬೈಕ್ ನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಡಿಸೆಂಬರ್ 20-21 ರಂದು ಮದುವೆ ನಿಶ್ಚಯವಾಗಿತ್ತು .ನೂರಾರು ಕನಸು ಕಂಡಿದ್ದ ಜೋಡಿಗೆ ಯಮನಂತೆ ಬಂದು ಲಾರಿ ಪ್ರಾಣತೆಗೆದಿದ್ದು, ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

