ಬಿಗ್ ಬಾಸ್ ಉದ್ದಕ್ಕೂ ಸೈಲೆಂಟ್ ಆಗಿದ್ದೇಕೆ? ಉತ್ತರಿಸಿದ ಅಭಿಷೇಕ್
ಬಿಗ್ ಬಾಸ್ ಮನೆಯಿಂದ ಅಭಿಷೇಕ್ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರು ಹೊರ ಬಂದಾಗ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳಲ್ಲಿ ಅವರು ಸೈಲೆಂಟ್ ಆಗಿ ಇದ್ದಿದ್ದು ಏಕೆ ಎಂಬ ಪ್ರಶ್ನೆಯೂ ಒಂದು. ಇದಕ್ಕೆ ಅವರೇ ಉತ್ತರ ನೀಡಿದ್ದಾರೆ. ಅದು ತಮ್ಮ ಪರ್ಸಾನಲಿಟಿ ಎಂದು ವಿವರಿಸಿದರು.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಭಾನುವಾರ (ಡಿಸೆಂಬರ್ 7) ಅಭಿಷೇಕ್ ಅವರು ಎಲಿಮಿನೇಟ್ ಆದರು. ಅವರ ಎಲಿಮಿನೇಷನ್ ಆಗಿದ್ದು ಸರಿ ಇದೆ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದನ್ನು ಕಾಣಬಹುದು. ಬಿಗ್ ಬಾಸ್ ಮನೆ ಉದ್ದಕ್ಕೂ ಅವರು ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಅನೇಕರಿಗೆ ಇತ್ತು. ಇದಕ್ಕೆ ಅವರು ಉತ್ತರ ನೀಡಿದರು. ‘ಅದು ನನ್ನ ಪರ್ಸಾನಲಿಟಿ. ನಾನು ಏನೇ ಆದರೂ ಬದಲಾಗಬಾರದು ಎಂದು ನಿರ್ಧರಿಸಿದ್ದೆ. ಈ ಕಾರಣಕ್ಕೆ ನಾನು ಬದಲಾಗಿಲ್ಲ. ಸೈಲೆಂಟ್ ಯಾಕೆ ಆಗಿದ್ದೆ ಎಂದರೆ ಅದು ನನ್ನ ಪರ್ಸಾನಲಿಟಿ. ಎಲ್ಲ ಕಡೆಗಳಲ್ಲಿ ಕೂಗಾಡಿಕೊಂಡಿರೋದು ನನಗೆ ಇಷ್ಟ ಆಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
