ಬಾಳೆಹಣ್ಣಿನ ವಿಚಾರಕ್ಕೆ ಕಿರಿಕ್; ಕಿಡ್ನಾಪ್ ಮಾಡಿ ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

| Updated By: ಆಯೇಷಾ ಬಾನು

Updated on: Aug 27, 2023 | 12:46 PM

Bengaluru Crime: ಸ್ನೇಹಿತ ಮಾಡಿಕೊಂಡ ಕಿರಿಕ್​ಗೆ ವ್ಯಕ್ತಿ ಖತರ್ನಾಕ್ ಗ್ಯಾಂಗ್ ಸಿಕ್ಕಿಬಿದ್ದಿದ್ದು ಆರೋಪಿಗಳು ಮಹೇಶ್​ನನ್ನು ಕಿಡ್ನಾಪ್ ಮಾಡಿ ದರೋಡೆ ಮಾಡಿದ್ದರು. ಸದ್ಯ ಸ್ನೇಹಿತ ನೀಡಿದ ದೂರಿನ ಆಧಾರದ ಮೇಲೆ ಮಾರತ್​ಹಳ್ಳಿ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಳೆಹಣ್ಣಿನ ವಿಚಾರಕ್ಕೆ ಕಿರಿಕ್; ಕಿಡ್ನಾಪ್ ಮಾಡಿ ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಬಂಧನ
Follow us on

ಬೆಂಗಳೂರು, ಆ.27: ವ್ಯಕ್ತಿಯನ್ನು ಅಪಹರಿಸಿ ದರೋಡೆ(Kidnap Robbery) ಮಾಡಿದ್ದ ಗ್ಯಾಂಗನ್ನು ಮಾರತ್ ಹಳ್ಳಿ ಪೊಲೀಸರು(Marathahalli police) ಬಂಧಿಸಿದ್ದಾರೆ. ಮೋಹನ್, ನವೀನ್, ಪುನೀತ್, ಅಭಿ, ರೂಪೇಶ್ ಸೇರಿ 7 ಜನರನ್ನು ಅರೆಸ್ಟ್ ಮಾಡಲಾಗಿದೆ. ಈ ಆರೋಪಿಗಳ ಗ್ಯಾಂಗ್ ಮಹೇಶ್ ಎಂಬಾತನನ್ನು ಕಿಡ್ನ್ಯಾಪ್ ಮಾಡಿ ದರೋಡೆ ಮಾಡಿದ್ದರು. ಸದ್ಯ ತರುಣ್ ಎಂಬಾತನ ದೂರಿನನ್ವಯ ಆರೋಪಿಗಳನ್ನು ಪತ್ತೆಹಚ್ಚಿ ಮಾರತ್​ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸ್ನೇಹಿತನ ಹುಟ್ಟಹಬ್ಬ ಹಿನ್ನೆಲೆ ಸ್ಮಶಾನದಲ್ಲಿ ಬರ್ತಡೆ ಪಾರ್ಟಿ ಮಾಡಿ ಮದ್ಯ ಸೇವಿಸಿ ಗೋರಿಗಳ ನಡುವೆ ಎಂಜಾಯ್ ಮಾಡ್ತಿದ್ದರು. ಈ ವೇಳೆ ರೂಪೇಶ್ ಬೀಡಾ ಎಂಬಾತ ಅಂಗಡಿಗೆ ಬಂದು ಸಿಗರೇಟ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ನಡೆಯುವ ಸಮಯದಲ್ಲಿ ಅಂಗಡಿ ಬಳಿ ಹೋಗಿ ತರುಣ್ ಎಂಬಾತ ಬಾಳೆಹಣ್ಣು ಕೇಳಿದ್ದ. ಆಗ, ನಾನು ಇಲ್ಲಿ ಇರುವಾಗ ನೀನು ಯಾರು ಮಧ್ಯದಲ್ಲಿ ಬಂದು ವ್ಯಾಪಾರ ಮಾಡೋಕೆ? ಎಂದು ತರುಣ್ ಮೇಲೆ ಆರೋಪಿ ರೂಪೇಶ್ ಜಗಳ ಮಾಡಿದ್ದಾನೆ. ಆಗ ತರುಣ್ ಜಗಳ ಮುಂದುವರಿಸದೆ ನನಗೆ ಹಣ್ಣು ಕೊಡಿ ನಾನು ಹೋಗ್ತಿನಿ ಎಂದು ಹೇಳಿದ್ದಾನೆ. ತರುಣ್ ಮಾತಿಗೆ ಕೋಪಗೊಂಡ ಆರೋಪಿ ರೂಪೇಶ್ ಹಲ್ಲೆ ಮಾಡಿದ್ದಾನೆ. ಬೀಗದ ಕೈಯಲ್ಲಿ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ರೂಪೇಶ್ ತಳ್ಳಿ ಗಾಯಾಳು ತರುಣ್ ಓಡಿ ಹೋಗಿದ್ದಾನೆ.

ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದ ಹತ್ಯೆ: ತಂದೆಯಿಂದಲೇ ಮಗಳ ಕೊಲೆ

ಇಷ್ಟೆಲ್ಲ ಆಗುತ್ತಿದ್ದಂತೆ ಆರೋಪಿ ರೂಪೇಶ್ ಸಿನಿಮಾ ಸ್ಟೈಲ್​ನಲ್ಲಿ ಶಿಳ್ಳೆ ಹೊಡೆದು ತನ್ನ ಉಳಿದ ಗ್ಯಾಂಗನ್ನು ಕರೆಸಿಕೊಂಡು ತರುಣ್ ಜೊತೆಗೆ ಬಂದಿದ್ದ ಮಹೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿ ಬೈಕ್​ನಲ್ಲಿ ಕಿಡ್ನಾಪ್ ಮಾಡಲಾಗಿದೆ. ಮೊಬೈಲ್ ಫೋನ್ ಕಸಿದುಕೊಂಡು ದರೋಡೆ ಮಾಡಿ ಬಳಿಕ ತರುಣ್ ಮನೆ ತೋರಿಸುವಂತೆ ಮಹೇಶನಿಗೆ ಹೆದರಿಸಿದ್ದಾರೆ. ಈ ನಡುವೆ ತರಣ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು ದೂರಿನ ಅನ್ವಯ ಪೊಲೀಸರು ಖತರ್ನಾಕ್ ಗ್ಯಾಂಗನ್ನು ಹುಡುಕಾಡಿದ್ದಾರೆ. ಹಾಗೂ ಕಿಡ್ನಾಪ್​ ಆದ ಮಹೇಶ್​ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆಗ ವಿಡಿಯೋದಲ್ಲಿರುವುದು ಪೊಲೀಸರು ಎಂದು ತಿಳಿಯುತ್ತಿದ್ದಂತೆ ಖದೀಮರು ಮಹೇಶ್​ನನ್ನು ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದರು. ಸದ್ಯ ಆರೋಪಿಗಳಿಗೆ ಬಲೆ ಬೀಸಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ