ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಸಾಂವಿಧಾನಿಕ ಹುದ್ದೆ, ಸದ್ದಿಲ್ಲದೇ ನೇಮಕ ಈಗ ಚರ್ಚೆಗೆ ಗ್ರಾಸ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಸದ್ದಿಲ್ಲದೇ ಸಾಂವಿಧಾನಿಕ ಹುದ್ದೆ ನೀಡಲಾಗಿದೆ. ಸರ್ಕಾರ ನೇಮಕ ಮಾಡಿ ಹೊರಡಿಸಿದ್ದ ಆದೇಶ ಪ್ರತಿ ಎಲ್ಲೂ ಹೊರ ಬಿದ್ದಿದ್ದಲ್ಲ. ಇದೀಗ ಸ್ವತಃ ಯತೀಂದ್ರ ಸಿದ್ದರಾಮಯ್ಯನವರೇ ಈ ವಿಚಾರ ಬಾಯ್ಬಿಟ್ಟಾಗ ಬೆಳಕಿಗೆ ಬಂದಿದೆ.
ಮೈಸೂರು, (ಆಗಸ್ಟ್ 27): ಮುಖ್ಯಮಂತ್ರಿ ಸಿದ್ದರಾಮಯ್ಯನವರ(siddaramaiah) ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ(dr yathindra siddaramaiah) ಸಾಂವಿಧಾನಿಕ ಹುದ್ದೆ(constitutional post )ನೀಡಲಾಗಿದೆ. ಆಶ್ರಯ ಸಮಿತಿ ಅಧ್ಯಕ್ಷರಾಗಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಲಾಗಿದೆ. ಹದಿನೈದು ದಿನಗಳ ಹಿಂದೆಯೇ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಆದ್ರೆ, ಅದು ಇಂದು (ಆಗಸ್ಟ್ 27) ಬೆಳಕಿಗೆ ಬಂದಿದೆ. ಸ್ವತಃ ಯತೀಂದ್ರ ಅವರೇ ತಮಗೆ ಸಾಂವಿಧಾನಿಕ ಹುದ್ದೆ ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ, ಸದ್ದಿಲ್ಲದೇ ಸಿದ್ದರಾಮಯ್ಯನವರು ತಮ್ಮ ಪುತ್ರನಿಗೆ ಸಾಂವಿಧಾನಿಕ ಹುದ್ದೆ ನೀಡಿದ್ರಾ? ಎನ್ನುವ ಚರ್ಚೆ, ಪ್ರಶ್ನೆಗಳು ಉದ್ಭಸಿವೆ.
ಇಂದು (ಆಗಸ್ಟ್ 27) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 15 ದಿನಗಳ ಹಿಂದೆಯೇ ಆದೇಶವಾಗಿದ್ದು, ವರುಣಾ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಯನ್ನು ಆಲಿಸುತ್ತೇನೆ. ಕಳೆದ 15 ದಿನದ ಹಿಂದೆಯೇ ಆದೇಶ ಆಗಿದೆ. ಆದೇಶ ಪತ್ರವನ್ನ ನಿಮಗೆ ಕಳುಹಿಸಿಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸರಕಾರಿ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಭಾಗಿಯಾಗುವುದರೊಂದಿಗೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದವು. ಬಳಿಕ ಬಹಿರಂಗವಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದನ್ನು ಬಿಟ್ಟ ಡಾ.ಯತೀಂದ್ರ ಅವರು ಸಿಎಂ ನಿವಾಸದಲ್ಲೇ ಅಧಿಕಾರಿಗಳ ಸಭೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಸಾಮಾಜಿಕ ಜಾಲತಾಣಗಳ ಮೂಲಕ ಟೀಕಿಸಿದ್ದವು. ಇದರಿಂದ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಸಮಿತಿ ಸದಸ್ಯರನ್ನಾಗಿ ಅವರನ್ನು ನೇಮಕ ಮಾಡಲು ಚಿಂತನೆ ನಡೆಸಿದ್ದರು. ಆದ್ರೆ, ಇದೀಗ ಸದ್ದಿಲ್ಲದೇ ಯತೀಂದ್ರ ಅವರನ್ನ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ 15 ದಿನಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಸ್ವತಃ ಯತೀಂದ್ರ ಅವರೇ ಹೇಳಿದ ಬಳಿಕ ಮಹಿತಿ ಹೊರಬಿದ್ದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ