ಬೆಂಗಳೂರು ಐಕಿಯಾ ಶಾಪಿಂಗ್​ ಮಾಲ್​​ ಮಳಿಗೆಗೆ ಮುಗಿಬಿದ್ದ ಜನ; ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ಫುಲ್​​ ಟ್ರಾಫಿಕ್​ ಜಾಮ್​​

| Updated By: ವಿವೇಕ ಬಿರಾದಾರ

Updated on: Jun 26, 2022 | 8:52 PM

ಜೂನ್​​ 22 ರಂದು ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಸ್ಟೇಷನ್ ​ಬಳಿ ನಿರ್ಮಾಣಗೊಂಡಿರುವ ಐಕಿಯಾ (IKEA) ಶಾಪಿಂಗ್​ ಮಾಲ್​​ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.

ಬೆಂಗಳೂರು ಐಕಿಯಾ ಶಾಪಿಂಗ್​ ಮಾಲ್​​ ಮಳಿಗೆಗೆ ಮುಗಿಬಿದ್ದ ಜನ; ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ಫುಲ್​​ ಟ್ರಾಫಿಕ್​ ಜಾಮ್​​
ಐಕಿಯ ಶಾಪಿಂಗ್​ ಮಾಲ್​​ ಮುಂದಿನ ಜನಸ್ತೋಮ
Follow us on

ಬೆಂಗಳೂರು: ಜೂನ್​​ 22 ರಂದು ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಸ್ಟೇಷನ್ (Nagasandra Metro Station)​ ಬಳಿ ನಿರ್ಮಾಣಗೊಂಡಿರುವ ಐಕಿಯಾ (IKEA) ಶಾಪಿಂಗ್​ ಮಾಲ್​​ನ್ನು (Shopping Mall) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಉದ್ಘಾಟಿಸಿದರು. ವೀಕೆಂಡ್​​ ಹಿನ್ನಲೆ ಇಂದು (ಜೂನ್​ 26) ರಂದು ಐಕಿಯಾನಲ್ಲಿ ಶಾಪಿಂಗ್​ ಮಾಡಲು ಜನ ಸಾಗರವೇ ಹರಿದು ಬಂದಿತ್ತು. ಇದರಿಂದ ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್​ ಜಾಮ್​ ಉಂಟಾಗಿತ್ತು.  ಟ್ರಾಫಿಕ್​ ಹಾಗೂ ಜನ ಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಮುಂಬೈ ಮತ್ತು ದೆಹಲಿಯ ನಂತರ, ಭಾರತದಲ್ಲಿ ಮೂರನೇ IKEA ಶಾಪಿಂಗ್​ ಮಾಲ್​​ನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ. ಕಂಪನಿಯು ರಾಜ್ಯದಲ್ಲಿ ಸುಮಾರು 3,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  ಐಕಿಯಾ ಶಾಪಿಂಗ್ ಮಾಲ್​​ನಲ್ಲಿ ಗೃಹಪಯೋಗಿ ವಸ್ತುಗಳು ಮಾತ್ರ ದೊರೆಯುತ್ತಿದ್ದು,  ಇಲ್ಲಿ ಇತರೆ ಯಾವುದೇ ಸಿನಿಮಾ ಹಾಲ್ ಅಥವಾ ಇತರೆ ವಸ್ತುಗಳು ಲಭ್ಯವಿಲ್ಲ. ಹಾಗಾಗಿ ಸಾರ್ವಜನಿಕರು ಕೇವಲ ಗೃಹೋಪಯೋಗಿ ವಸ್ತುಗಳಿಗೆ ಮಾತ್ರ ಮಾಲ್​ಗೆ ಬರುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಈ ಮಳಿಗೆ 4,60,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದು ದೇಶದಲ್ಲಿರುವ ಐಕಿಯಾದ ಅತೀ ದೊಡ್ಡ ಮಳಿಗೆಯಾಗಿದೆ. ಐಕಿಯಾ ಮಳಿಗೆಗೆ ಜನರು ಮುಗಿಬಿದ್ದಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ನೆಟ್ಟಿಗರು ಚಿತ್ರಗಳನ್ನು ಹಂಚಿಕೊಂಡು ವ್ಯಂಗ್ಯವಾಗಿ ಶಿರ್ಷಿಕೆ ನೀಡಿದ್ದಾರೆ ಹಾಗೇ ವ್ಯಂಗ್ಯವಾಗಿ ಕಾಮೇಂಟ್​​ ಮಾಡಿದ್ದಾರೆ.