Bangalore Fire Accident: ಬೆಂಗಳೂರು ಅಗ್ನಿ ಅವಘಡ, ವೀರಭದ್ರ ನಗರದಲ್ಲಿ ಹೊತ್ತಿ ಉರಿದ 30 ಖಾಸಗಿ ಬಸ್​ಗಳು

| Updated By: Digi Tech Desk

Updated on: Oct 30, 2023 | 2:47 PM

fire breaks Out at Bengaluru: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ದುರಂತ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ವೀರಭದ್ರ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Bangalore Fire Accident: ಬೆಂಗಳೂರು ಅಗ್ನಿ ಅವಘಡ, ವೀರಭದ್ರ ನಗರದಲ್ಲಿ ಹೊತ್ತಿ ಉರಿದ 30 ಖಾಸಗಿ ಬಸ್​ಗಳು
ಅಗ್ನಿ ಅವಘಡ
Follow us on

ಬೆಂಗಳೂರು, (ಅಕ್ಟೋಬರ್ 30): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಮತ್ತೊಂದು ಅಗ್ನಿ(Fire) ಅವಘಡ ಸಂಭವಿಸಿದೆ. ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ದುರಂತ ಮಾಸುವ ಮುನ್ನವೇ ಬೆಂಗಳೂರಿನ ವೀರಭದ್ರ ನಗರದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವು ಖಾಸಗಿ ಬಸ್​ಗಳು ಹೊತ್ತಿ ಉರಿದಿದ್ದು, ಸ್ಥಳಕ್ಕೆ ಎರಡು ಅಗ್ನಿ ಶಾಮದಳ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದ ಪಾರ್ಕಿಂಗ್ ಲಾಟ್​ನಲ್ಲಿ ನಿಲ್ಲಿಸಿದ್ದ 30 ಬಸ್​ಗಳು ಬೆಂಕಿಗೆ ಆಹುತಿಯಾಗಿವೆ. ನೋಡ ನೋಡುತ್ತಲೇ ಒಂದರ ನಂತರ ಮತ್ತೊಂದು ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದು, ವೀರಭದ್ರನಗರದ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ. ಇನ್ನು ಘಟನ ಸ್ಥಳಕ್ಕೆ  ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಹಾಗೇ ಡಿಸಿಪಿ ರಾಹುಲ್ ಕುಮಾರ್ ಶಹಾಪುರವಾಡ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಶ್ರೀನಿವಾಸ್ ಎಂಬುವವರಿಗೆ ಕೋಚ್ ವರ್ಕ್ಸ್ ಸೇರಿದ್ದು, 15 ವರ್ಷದಿಂದ ಕೋಚ್ ವರ್ಕ್ ಕೆಲಸಗಳು ನಡೆಯುತ್ತಿವೆ. ಇಂದು 11.30ರ ಸುಮಾರಿಗೆ ಬಸ್ ವೊಂದರ ಎಮರ್ಜನ್ಸಿ ಎಕ್ಸಿಟ್ ಬಳಿ ಕೆಲಸ ನಡೆಯುತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿಗಳಿಗೆ ಕೂಡಲೆ ಮಾಹಿತಿ ನೀಡಲಾಗಿತ್ತು. ಆದ್ರೆ ಸಿಬ್ಬಂದಿಗಳ ಬರುವಷ್ಟರಲ್ಲಿ ಎರಡು ವಾಹನಗಳಿಗೆ ಬೆಂಕಿ ತಗುಲಿತ್ತು. ಮೊದಲಿಗೆ ಒಂದೇ ವಾಹನ ಬಂದ ಹಿನ್ನಲೆಯಲ್ಲಿ ಬೆಂಕಿ ಕಂಟ್ರೊಲ್​​ಗೆ ಸಿಕ್ಕಿಲ್ಲ. ಇನ್ನು ಎಸಿ ಬಸ್ ಗಳಲ್ಲಿ ಸೀಟ್, ಸ್ಕೀನ್ ಗಳು ಇರುವುದರಿಂದ ಬೆಂಕಿ ಹೆಚ್ಚಾಗಿದೆ.

ಇದೀಗ ಬಂದ ಮಾಹಿತಿ ಪ್ರಕಾರ ಅಗ್ನಿ ಅವಘಡದಲ್ಲಿ ಈ ವರೆಗೆ 30 ಬಸ್​ಗಳು ಸುಟ್ಟು ಸಂಪೂರ್ಣ ಭಸ್ಮವಾಗಿದ್ದು, 5 ಬಸ್ ಗಳನ್ನು ಹೊರಗೆ ತೆಗೆಯಲಾಗಿದೆ. ಇನ್ನು ಗ್ಯಾರೇಜ್ ನಲ್ಲಿ 42 ಜನ ಕೆಲಸ ಮಾಡುತಿದ್ದರು. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ.

Published On - 12:35 pm, Mon, 30 October 23