ಬೆಂಗಳೂರಿನಲ್ಲಿ ಟಿಶ್ಯೂ ಪೇಪರ್ ಕಂಪನಿಗೆ ಸೇರಿದ​ ಗೋಡೌನ್​​ನಲ್ಲಿ ಅಗ್ನಿ ಅವಘಡ, ಬೆಂಕಿ ನಂದಿಸಿದ 9 ಅಗ್ನಿ ಶಾಮಕ ದಳ ವಾಹನ

|

Updated on: Mar 18, 2023 | 6:42 AM

ಚಿಕ್ಕಗೊಲ್ಲರಹಟ್ಟಿ ಬಳಿ ನಿನ್ನೆ(ಮಾರ್ಚ್ 17) ರಾತ್ರಿ 10 ಗಂಟೆ ಸುಮಾರಿಗೆ ಟಿಶ್ಯೂ ಪೇಪರ್ ತಯಾರಿಸುವ ದಾಮಿ ಕೇರ್ ಐಜಿನ್ ಪ್ರೈ.ಲಿಮಿಟೆಡ್​​​​​ ಕಂಪನಿಗೆ ಸೇರಿದ ಗೋಡೌನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ ಟಿಶ್ಯೂ ಪೇಪರ್ ಕಂಪನಿಗೆ ಸೇರಿದ​ ಗೋಡೌನ್​​ನಲ್ಲಿ ಅಗ್ನಿ ಅವಘಡ, ಬೆಂಕಿ ನಂದಿಸಿದ 9 ಅಗ್ನಿ ಶಾಮಕ ದಳ ವಾಹನ
ಗೋಡೌನ್​​ನಲ್ಲಿ ಅಗ್ನಿ ಅವಘಡ
Follow us on

ಬೆಂಗಳೂರು: ಟಿಶ್ಯೂ ಪೇಪರ್ ಕಂಪನಿಗೆ ಸೇರಿದ​ ಗೋಡೌನ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಗರದ ಚಿಕ್ಕಗೊಲ್ಲರಹಟ್ಟಿ ಬಳಿ ನಿನ್ನೆ(ಮಾರ್ಚ್ 17) ರಾತ್ರಿ 10 ಗಂಟೆ ಸುಮಾರಿಗೆ ಟಿಶ್ಯೂ ಪೇಪರ್ ತಯಾರಿಸುವ ದಾಮಿ ಕೇರ್ ಐಜಿನ್ ಪ್ರೈ.ಲಿಮಿಟೆಡ್​​​​​ ಕಂಪನಿಗೆ ಸೇರಿದ ಗೋಡೌನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. 9 ಅಗ್ನಿಶಾಮಕ ದಳ ವಾಹನಗಳು ಬೆಂಕಿಯನ್ನು ನಂದಿಸಿವೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ನಡೆದಿದೆ.

ಗುಜರಿ ಗೋಡೌನ್​ನಲ್ಲಿ ಅಗ್ನಿ ಅವಘಡ

ಬೆಂಗಳೂರು: ತಡರಾತ್ರಿ 5 ರಿಂದ 6 ಗುಜರಿ ಗೋಡೌನ್‌ಗಳಲ್ಲಿ (Gujuri Godown) ಅಗ್ನಿ ಅವಘಡ (Fire Accident) ಸಂಭವಿಸಿ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ನಾಯಂಡಹಳ್ಳಿ (Nayandahalli) ಬಳಿಯ ಪ್ರಮೋದ್ ಲೇಔಟ್‌ನಲ್ಲಿ ನಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 10 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿಯನ್ನು ನಂದಿಸಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುಮಾರು 3-4 ಎಕರೆ ಜಾಗಕ್ಕೆ ಬೆಂಕಿ ವ್ಯಾಪಿಸಿತ್ತು. ತಡರಾತ್ರಿ ಗೋಡೌನ್​ಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ, ಪಕ್ಕದಲ್ಲೆ ಕಾರ್ಯನಿರ್ವಹಿಸುತ್ತಿದ್ದ ಮಾರ್ಷಲ್​ಗಳು ಸ್ಥಳಕ್ಕೆ ದೌಡಾಯಿಸಿ, ಗೌಡೌನಲ್ಲಿ ಮಲಗಿದ್ದ ಹಲವರನ್ನು ಎಬ್ಬಿಸಿ ಆಚೆ ಕಳುಹಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.

ಇದನ್ನೂ ಓದಿ: Secunderabad: ಶಾಪಿಂಗ್​ ಮಾಲ್​ ಕಾಂಪ್ಲೆಕ್ಸ್​ನಲ್ಲಿ ಅಗ್ನಿಅವಘಡ 6 ಜನರ ಸಾವು

ಗೋಧಿ ಜಮೀನಿಗೆ ಬೆಂಕಿ, 1.50 ಲಕ್ಷ ರೂ. ಮೌಲ್ಯದ ಬೆಂಕಿ ಭಸ್ಮ

ಗದಗ: ಗೋಧಿ ಜಮೀನಿಗೆ ಬೆಂಕಿ ಬಿದ್ದ ಪರಿಣಾಮ ಕಟಾವಿಗೆ ಬಂದಿದ್ದ 3 ಎಕರೆ ಗೋಧಿ ಭಸ್ಮವಾಗಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರ ಗ್ರಾಮದಲ್ಲಿ ನಡೆದಿದೆ. ರೈತ ವೆಂಕನಗೌಡ್ರ ಗದ್ದಿಗೌಡ್ರ ಎಂಬುವರಿಗೆ ಸೇರಿದ 3 ಎಕರೆ ಜಮೀನಿಗೆ ವಿದ್ಯುತ್ ಶಾಟ್ ಸರ್ಕಿಟ್​​ನಿಂದ ಬೆಂಕಿ ತಗುಲಿರುವ ಆರೋಪ ಕೇಳಿ ಬಂದಿದೆ. ಬೆಂಕಿ ನಂದಿಸಲು ಎಷ್ಟೇ ಪ್ರಯತ್ನ ಪಟ್ಟರು ಪ್ರಯೋಜನವಾಗಲಿಲ್ಲ. ಇದರಿಂದ ಸುಮಾರು 1.50 ಲಕ್ಷ ರೂ. ಮೌಲ್ಯದ 40 ಕ್ವಿಂಟಾಲ್ ನಷ್ಟು ಗೋಧಿ ಸುಟ್ಟು ಹೋಗಿದೆ. ರೈತ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾನೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ