Secunderabad: ಶಾಪಿಂಗ್​ ಮಾಲ್​ ಕಾಂಪ್ಲೆಕ್ಸ್​ನಲ್ಲಿ ಅಗ್ನಿಅವಘಡ 6 ಜನರ ಸಾವು

ಗುರುವಾರ ಸಂಜೆ ಸಿಕಂದರಾಬಾದ್​ನ ಸ್ವಪ್ನಲೋಕ ಶಾಪಿಂಗ್​ ಮಾಲ್​ ಕಾಂಪ್ಲೆಕ್ಸ್​ನ 5ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ 6 ಜನ ಸಾವನ್ನಪ್ಪಿದ್ದಾರೆ.

Secunderabad: ಶಾಪಿಂಗ್​ ಮಾಲ್​ ಕಾಂಪ್ಲೆಕ್ಸ್​ನಲ್ಲಿ ಅಗ್ನಿಅವಘಡ 6 ಜನರ ಸಾವು
ಸಿಕಂದರಾಬಾದ್​ ಅಗ್ನಿ ಅವಘಡ
Follow us
ವಿವೇಕ ಬಿರಾದಾರ
|

Updated on:Mar 17, 2023 | 6:57 AM

ಹೈದರಾಬಾದ್​: ಗುರುವಾರ (ಮಾ.16)ರ ಸಂಜೆ ಸಿಕಂದರಾಬಾದ್​ನ (Secunderabad) ಸ್ವಪ್ನಲೋಕ ಶಾಪಿಂಗ್​ ಮಾಲ್ (Shoping Mall)​ ಕಾಂಪ್ಲೆಕ್ಸ್​ನ 5ನೇ ಮಹಡಿಯಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿ 6 ಜನ ಸಾವನ್ನಪ್ಪಿದ್ದಾರೆ. ಪ್ರಮೀಳಾ, ವೆನ್ನೆಲಾ, ಶ್ರಾವಣಿ, ಪ್ರಶಾಂತ್, ತ್ರಿವೇಣಿ, ಶಿವ ಮೃತ ದುರ್ದೈವಿಗಳು. ದಟ್ಟ ಹೊಗೆ ಆವರಿಸಿದ್ದರಿಂದ ಉಸಿರಾಡಲು ಆಗದೆ 6 ಜನರು ಸಾವನ್ನಪ್ಪಿರಬಹುದು ಎಂದು ಅದಾಜಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿಳಿಯಬೇಕಿದಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ಮತ್ತು ದುರಂತದಲ್ಲಿ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿ ಸುಮಾರು ನಿನ್ನೆ ಸಂಜೆ 7:30 ಕ್ಕೆ ಶಾಟ್​ ಸರ್ಕ್ಯೂಟ್​​​ನಿಂದ 5ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ 6 ಮತ್ತು 7ನೇ ಮಹಡಿಗೂ ವ್ಯಾಪಿಸಿತ್ತು. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ​ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟಿದ್ದು, 10 ಅಗ್ನಿಶಾಮಕ ವಾಹನಗಳ ಮೂಲಕ ರಾತ್ರಿ 11:30ರ ವೇಳೆಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಜೆ 7:30ಕ್ಕೆ ಶಾರ್ಟ್​​ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದಲ್ಲಿ ಅನೇಕ ಜನ ಇದ್ದರು. ಅವರನ್ನು ರಕ್ಷಿಸುವ ಕಾರ್ಯ ಮಾಡಿದ್ದೇವೆ. ದುರಂತದ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಧಾವಿಸಿದೇವು. ಹಾಗೇ ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದರು. ತಡರಾತ್ರಿವರೆಗು ರಕ್ಷಣಾ ಕಾರ್ಯ ನಡೆಸಿದೆವು. ದುರಂತದಲ್ಲಿ ಸಾವನ್ನಪ್ಪಿದವರು ಕಾಂಪ್ಲೆಕ್ಸ್‌ನಲ್ಲಿದ್ದ ಮಾರ್ಕೆಟಿಂಗ್ ಕಂಪನಿಯೊಂದರ ಉದ್ಯೋಗಿಗಳಾಗಿದ್ದರು ಎಂದು ದಕ್ಷಿಣ ವಲಯ ಹೆಚ್ಚುವರಿ ಡಿಸಿಪಿ, ಸೈಯದ್​​ ರಫಿಕ್ ಎನ್​ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಪ್ರಕರಣ ಏರಿಕೆ; ಸೋಂಕು ಹರಡದಂತೆ ಕಟ್ಟುನಿಟ್ಟಾದ ನಿಗಾ ವಹಿಸಲು 6 ರಾಜ್ಯಗಳಿಗೆ ಕೇಂದ್ರ ಪತ್ರ

“ಸಿಕಂದರಾಬಾದ್‌ನ ಸ್ವಪ್ನಲೋಕ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತದ ಕುರಿತು ಜಿಹೆಚ್‌ಎಂಸಿ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.” ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಟ್ವೀಟ್​ ಮಾಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 am, Fri, 17 March 23