ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಳೆದ 3 ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿವೆ. ಸುಮಾರು 10 ಕಿಲೋಮೀಟರ್ ವರೆಗೂ ಬಾರಿ ಟ್ರಾಫಿಕ್ ಜಾಮ್ ಆಗಿರುವುದು ತಿಳಿದುಬಂದಿದೆ. ಬಿಡದಿಯಿಂದ ಕೆಂಗೇರಿವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಕಳೆದ 3 ಗಂಟೆಯಿಂದ ಟ್ರಾಫಿಕ್ನಲ್ಲಿ ಸಿಲುಕಿರುವ ವಾಹನ ಸವಾರರು ಪರದಾಡುತ್ತಿದ್ದಾರೆ. ಕೆಳಮಾರ್ಗ ಮಾತ್ರವಲ್ಲದೆ ಫ್ಲೈ ಓವರ್ ಕೂಡ ಫುಲ್ ಜಾಮ್ ಆಗಿರುವುದು ಕಂಡು ಬಂದಿದೆ . ವಿಚಾರೀತ ಟ್ರಾಫಿಕ್ ಜಾಮ್ ಹಿನ್ನಲೆ ಬೆಂಗಳೂರು ನಗರದೊಳಗೆ ಭಾರಿ ವಾಹನಗಳ ಸಂಚಾರವನ್ನು ನಿಷೇದಿಸಲಾಗಿದೆ. ಕೆಂಗೇರಿ ಸುತ್ತಮುತ್ತ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದರೆ.
ಇತ್ತೀಚೆಗಷ್ಟೇ ನಿರ್ಮಾಣವಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಮುಖ್ಯ ಯೋಜನೆಯೇ ತಡೆಯುವುದಾಗಿತ್ತು. ಹಳೆ ಹೆದ್ದಾರಿಯಲ್ಲಿ ವಾರಂತ್ಯದಲ್ಲಿ ಸಾಲುಗಟ್ಟಲೆ ವಾಹನಗಳು ಗಂಟೆಗಟ್ಟಲೆ ನಿಂತು ಜಾಮ್ ಆಗುತ್ತಿತ್ತು. ಅದೇ ಕಾರಣದಿಂದ ಬೆಂಗಳೂರು-ಮೈಸೂರ್ ಎಕ್ಸ್ ಪ್ರೆಸ್ ವೇ ನಿರ್ಮಾಣ ಮಾಡಲಾಯಿತು. ಇದೀಗ ಮೊದಲಿನಂತೆ ದಶಪಥ ಹೆದ್ದಾರಿಯಲ್ಲೂ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ.
ಇದನ್ನೂ ಓದಿ: ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ಫೆ.6ರಿಂದ ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ
ಇಂದು ಮಧ್ಯಾಹ್ನದಿಂದಲೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದ್ದು. ಸುಮಾರು 10 ಕೀ ವರೆಗೂ ವಾಹನಗಳು ಕದಲದೇ ನಿಂತಲ್ಲೇ ನಿಂದ್ದವು. ಪೊಲೀಸರು ಕೆಂಗೇರಿ ಆಸುಪಾಸು ವಾಹನಗಳನ್ನು ತೆಡೆದು ಟ್ರಾಫಿಕ್ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.