Bengaluru: ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ಫೆ.6ರಿಂದ ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ
ಬಜೆಟ್ಗೂ ಮುನ್ನ ಸರ್ಕಾರಕ್ಕೆ ಶುರುವಾಯ್ತು ಬೇಡಿಕೆಗಳ ಸುರಿಮಳೆ, ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ನಾಳೆ (ಫೆ.6) ಫ್ರೀಡಂ ಪಾರ್ಕ್ನಲ್ಲಿ 4 ನಿಗಮದ ಸಾರಿಗೆ ನೌಕರರು, ಕುಟುಂಬ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು: ಇತ್ತೀಚೆಗಷ್ಟೇ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯೂಟಿ ಸೇರಿದಂತೆ ವಿವಿಧ ಭೇಡಿಕೆಗಳನ್ನ ಈಡೇರಿಸಲು ಫ್ರೀಡಂ ಪಾರ್ಕ್ನಲ್ಲಿ ಕಳೆದ 10 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಸರ್ಕಾರದ ಭರವಸೆ ಮೇರೆಗೆ ಮೊನ್ನೆಯಷ್ಟೆ ತಮ್ಮ ಪ್ರತಿಭಟನೆಯನ್ನ ನಿಲ್ಲಿಸಿದ್ದರು. ಇದರ ಬೆನ್ನಲ್ಲೆ ಇದೀಗ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ಇಲಾಖೆಯ 4 ನಿಗಮಗಳ ನೌಕರರು ಸೇರಿದಂತೆ ತಮ್ಮ ಕುಟುಂಬ ಸಮೇತ ನಾಳೆ(ಫೆ.6) ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ.
ಹಾಗಿದ್ರೆ ಸಾರಿಗೆ ನೌಕರರ ಬೇಡಿಕೆಗಳೇನು?
* ಜನವರಿ 1 2020 ರಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಬಾಕಿ ಇದ್ದು, ಕೂಡಲೆ ವೇತನ ಹೆಚ್ಚಳ ಮಾಡುವುದು.
* ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರು ನೇಮಕಾತಿ ಮಾಡಿಕೊಳ್ಳುವುದು.
* ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು.
* ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದು, ಅವರಿಗೆ ಸರಿಯಾದ ರೀತಿ ಪಿಂಚಣಿ ಸೌಲಭ್ಯವನ್ನು ಒದಗಿಸುವುದು.
* ಸಾರಿಗೆ ಸಂಸ್ಥೆಯ ನೌಕರರಿಗೆ ನಗದುರಹಿತ ಉತ್ತಮವಾದ ಆರೋಗ್ಯ ಯೋಜನೆಗಳನ್ನು ಒದಗಿಸುವುದು.
ಇವಿಷ್ಟು ಭೇಡಿಕೆಗಳನ್ನ ಈಡೇರಿಸುವಂತೆ ನಾಳೆ ಫ್ರೀಡಂಪಾರ್ಕ್ನಲ್ಲಿ 4 ನಿಗಮದ ಸಾರಿಗೆ ನೌಕರರು ಕುಟುಂಬ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ