ಸ್ವಿಗ್ಗಿ, ಝೊಮ್ಯಾಟೊ ಹುಡುಗರಿಗೆ ಲಿಫ್ಟ್ ನಿಷೇಧ, ಮೆಟ್ಟಿಲು ಬಳಸಿ ಎಂದ ಬೆಂಗಳೂರಿನ ರೆಸ್ಟೋರೆಂಟ್​

ಮೇಘನಾ ಫುಡ್ಸ್, ಸ್ವಿಗ್ಗಿ ಮತ್ತು ಜೊಮ್ಯಾಟೊ ಡೆಲಿವರಿ ಸಿಬ್ಬಂದಿ ಲಿಫ್ಟ್ ಬಳಸುವುದನ್ನು ನಿಷೇಧಿಸುವ ಪೋಸ್ಟರ್ ಹಾಕಿ ಭಾರೀ ವಿವಾದಕ್ಕೀಡಾಗಿತ್ತು. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಡೆಲಿವರಿ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಈ ನಡೆಯ ಬಗ್ಗೆ ವ್ಯಾಪಕ ಚರ್ಚೆ ನಡೆದು, ಕೊನೆಗೆ ಮೇಘನಾ ಫುಡ್ಸ್ ಕ್ಷಮೆ ಯಾಚಿಸಿತು.

ಸ್ವಿಗ್ಗಿ, ಝೊಮ್ಯಾಟೊ ಹುಡುಗರಿಗೆ ಲಿಫ್ಟ್ ನಿಷೇಧ, ಮೆಟ್ಟಿಲು ಬಳಸಿ ಎಂದ ಬೆಂಗಳೂರಿನ ರೆಸ್ಟೋರೆಂಟ್​
ವೈರಲ್​ ಪೋಸ್ಟ್​

Updated on: Dec 10, 2025 | 10:45 AM

ಬೆಂಗಳೂರು, ಡಿ.10; ಸ್ವಿಗ್ಗಿ, ಝೊಮ್ಯಾಟೊ ಸಿಬ್ಬಂದಿಗಳು ನಮ್ಮ ರೆಸ್ಟೋರೆಂಟ್​​ನ ಲಿಫ್ಟ್ ಬಳಸಬಾರದು ಎಂದು ಮೇಘನಾ ಫುಡ್ಸ್ ಪೋಸ್ಟರ್​​​ವೊಂದನ್ನು ಹಾಕಿ ಟೀಕೆಗೆ ಗುರಿಯಾಗಿತ್ತು. ಈ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ನೆಟ್ಟಿಗರು ಕೂಡ ರೆಸ್ಟೋರೆಂಟ್​​ನ ಈ ಪೋಸ್ಟರ್​​ಗೆ ಅಕ್ರೋಶ ವ್ಯಕ್ತಪಡಿಸಿದ್ದರು. ಮೇಘನಾ ಫುಡ್ಸ್ (Meghana Foods), ತನ್ನ ಮಳಿಗೆಯ ಒಂದರಲ್ಲಿ ಆಹಾರ ವಿತರಣಾ ಕಾರ್ಮಿಕರು ಲಿಫ್ಟ್ ಬಳಸುವುದನ್ನು ನಿರ್ಬಂಧಿಸುವ ಪೋಸ್ಟರ್‌ ಹಾಕಿತ್ತು. ಆದರೆ ಇದೀಗ ಭಾರೀ ಆಕ್ರೋಶ ವ್ಯಕ್ತವಾದ ಕಾರಣ ರೆಸ್ಟೋರೆಂಟ್​​ ಕ್ಷಮೆ ಕೇಳಿದೆ. ಸೋಶಿಯಲ್​​ ಮೀಡಿಯಾದಲ್ಲಿ ಈ ಪೋಸ್ಟರ್​​ ವೈರಲ್​​ ಆಗುತ್ತಿದ್ದಂತೆ ಭಾರೀ ಟೀಕೆ ಕಾರಣವಾಗಿತ್ತು.

ಸ್ವಿಗ್ಗಿ ಮತ್ತು ಝೊಮ್ಯಾಟೊ ಡೆಲಿವರಿ ಹುಡುಗರಿಗೆ ಲಿಫ್ಟ್‌ನಲ್ಲಿ ಪ್ರವೇಶವಿಲ್ಲ. ದಯವಿಟ್ಟು ಮೆಟ್ಟಿಲುಗಳನ್ನು ಬಳಸಿ ಎಂದು ಈ ಪೋಸ್ಟರ್​​​​ನಲ್ಲಿ ಬರೆಯಲಾಗಿತ್ತು. ನಂತರ ಈ ಪೋಸ್ಟರ್​​ನ್ನು ಸೋಶಿಯಲ್​​​ ಮೀಡಿಯಾದಲ್ಲಿ ಒಬ್ಬರು ಹಂಚಿಕೊಂಡಿದ್ದು, ಅಲ್ಲಿಂದ ಈ ಬಗ್ಗೆ ಭಾರೀ ಚರ್ಚೆಗಳು ನಡೆದಿದೆ. ರೆಸ್ಟೋರೆಂಟ್ ಸ್ವಿಗ್ಗಿ, ಝೊಮ್ಯಾಟೊ ಹುಡುಗರನ್ನು ತುಂಬಾ ಕೀಳಾಗಿ ನಡೆಸಿಕೊಳ್ಳುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ನೀವು ಹೀಗೆ ಮಾಡಿದ್ರೆ ನಿಮ್ಮ ರೆಸ್ಟೋರೆಂಟ್​ ಮುಚ್ಚುವುದು ಖಂಡಿತ, ಅವರನ್ನು ನಿಮ್ಮ ರೆಸ್ಟೋರೆಂಟ್​​​ಗೆ ಬರದಂತೆ ತಡೆಯಿರಿ. ಇಲ್ಲವೆಂದರೆ ಅವರ ಜತೆಗೆ ಸಂಪೂರ್ಣವಾಗಿ ವ್ಯವಹಾರ ನಿಲ್ಲಿಸಿ.  ನಿಮ್ಮ ಈ ವಿಡಂಬನಾತ್ಮಕ ನಡವಳಿಕೆ ಸರಿಯಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 9 ಗಂಟೆ ವಿಳಂಬ ಮಾಡಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿ ಉಡುಗರೆ ನೀಡಿದ ಇಂಡಿಗೋ

ವೈರಲ್​ ಪೋಸ್ಟ್​ ಇಲ್ಲಿದೆ ನೋಡಿ:

ಜನರನ್ನು ಅವರ ವೃತ್ತಿಯ ಆಧಾರದ ಮೇಲೆ ಅಳೆಯುವುದು ಸರಿಯಾದ ವ್ಯಕ್ತಿತ್ವ ಅಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಸ್ವೀಕಾರಾರ್ಹವಲ್ಲ, ಒಂದಾ ನೀವು ನಿಮ್ಮ ರೆಸ್ಟೋರೆಂಟ್ ಹೊರಗೆ ಟೇಕ್‌ಅವೇ ಕೌಂಟರ್ ಹಾಕಿ, ಇಲ್ಲವೆಂದರೆ ಅವರಿಗೆ ಲಿಫ್ಟ್‌ನಲ್ಲಿ ಪ್ರವೇಶ ನೀಡಿ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಮೇಘನಾ ಫುಡ್ಸ್ ವಿದ್ಯುತ್ ಬಿಲ್‌ಗಳನ್ನು ಉಳಿಸಲು ಪ್ರಯತ್ನಿಸುತ್ತಿದೆ. ಇಂತಹ ವರ್ತನೆಯಿಂದ ನಿಮ್ಮ ಗೌರವವನ್ನು ಕಳೆದುಕೊಳ್ಳುತ್ತಿದ್ದೀರಾ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ