ಆನೇಕಲ್: ಮರಳಿ ಮಂಜನ ಮಡಿಲು ಸೇರಿದ ಲೀಲಾ; ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ
ಮಂಜು-ಲೀಲಾ-ಸಂತು ನಡುವಿನ ಟ್ರಯಾಂಗಲ್ ಲವ್ ಸ್ಟೋರಿಗೆ ಸುಖಾಂತ್ಯ ಸಿಕ್ಕಿದೆ. ಪತಿಯನ್ನು ತೊರೆದು ಲವರ್ ಜೊತೆ ಹೋಗಿದ್ದ ಲೀಲಾ, ಈಗ ಮಕ್ಕಳೊಂದಿಗೆ ಮರಳಿ ಪತಿ ಮಂಜನ ಮನೆ ಸೇರಿದ್ದಾಳೆ. ಮಕ್ಕಳ ಭವಿಷ್ಯಕ್ಕಾಗಿ ದಂಪತಿ ಒಂದಾಗಲು ನಿರ್ಧರಿಸಿದ್ದು, ರಾಜ್ಯಾದ್ಯಂತ ಸುದ್ದಿಯಾಗಿ ಮೀಮರ್ಸ್ಗಳಿಗೂ ಆಹಾರವಾಗಿದ್ದ ಈ ಸ್ಟೋರಿಗೆ ಕೊನೆಗೂ ತೆರೆ ಬಿದ್ದಿದೆ.

ಆನೇಕಲ್, ಡಿಸೆಂಬರ್ 10: ಮಂಜು-ಲೀಲಾ- ಸಂತು ಟ್ರಯಾಂಗಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲವರ್ ಸಂತುಗೆ ಗುಡ್ ಬೈ ಹೇಳಿರೋ ಲೀಲಾ ಮರಳಿ ಪತಿ ಮಂಜನ ಮನೆ ಸೇರಿದ್ದಾಳೆ. ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ನಡೆದಿದ್ದ ಟ್ರಯಾಂಗಲ್ ಲವ್ ಸ್ಟೋರಿ ಹಿಂದೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪತಿ, ಮೂವರು ಮಕ್ಕಳನ್ನ ಬಿಟ್ಟು ಲವರ್ ಜೊತೆ ಲೀಲಾ ಹೋಗಿದ್ದ ಪರಿಣಾಮ, ಪತಿ ಮಂಜ ಗೋಳಾಡಿದ್ದ. ಮಾಧ್ಯಮಗಳಲ್ಲಿ ಕಣ್ಣೀರು ಹಾಕಿ ಗೋಳಾಡಿ,ಚಿನ್ನು, ಬಂಗಾರ ಬಂದ್ಬೀಡು ಎಂದಿದ್ದ. ಆದ್ರೆ ಸಂತು ಬಿಟ್ಟು ಬರೋದಿಲ್ಲ ಅಂತ ಲೀಲಾ ಪಟ್ಟು ಹಿಡಿದಿದ್ದಳು.
ಆ ಬಳಿಕ ಸಂತು ಮನೆಯಲ್ಲಿಯೇ ಪತ್ನಿ ಲೀಲಾ ವಾಸವಿದ್ದ ಕಾರಣ ರೊಚ್ಚಿಗೆದ್ದ ಮಂಜ ಅವರ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿ ಜೈಲು ಸೇರಿದ್ದ. ಜೈಲಿನಿಂದ ರಿಲೀಸ್ ಆದಮೇಲೆ ಬಸವನಪುರದಲ್ಲಿ ಮನೆ ಖಾಲಿ ಮಾಡಿದ್ದ ಆತ, ಬನ್ನೇರುಘಟ್ಟ ಸಮೀಪದ ಜಲ್ಲಿಮಿಷನ್ ಏರಿಯಾಗೆ ಬಂದಿದ್ದ. ಲೀಲಾ ಬಳಿ ಇದ್ದ ದೊಡ್ಡ ಮಗನನ್ನ ಕರೆದುಕೊಂಡು ಹೋಗಿದ್ದ ಈತ, ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಲೀಲಾ ಮೇಲಿನ ವಿರಹ ವೇದನೆ ವ್ಯಕ್ತಪಡಿಸುತ್ತಿದ್ದ. ಆ ಮೂಲಕ ಲೀಲಾ-ಸಂತುಗೆ ಟಕ್ಕರ್ ಕೊಡ್ತಿದ್ದ. ಜೊತೆಗೆ ಹೊಸ ಆಟೋ ಖರೀದಿ ಮಾಡಿ ಮಗನ ಜೊತೆ ಜೀವನ ನಡೆಸ್ತಿದ್ದ ಈತ, ಇಬ್ಬರು ಮಕ್ಕಳನ್ನ ಸಂತು ಮತ್ತು ಲೀಲಾ ಸ್ಕೂಲಿಗೆ ಕಳುಹಿಸುತ್ತಿಲ್ಲ ಎಂದು ಆರೋಪಿಸಿದ್ದ. ನನ್ನ ಇಬ್ಬರು ಮಕ್ಕಳನ್ನ ನನಗೆ ಕೊಡಿಸಿ ಎಂದು ಕೇಳಿಕೊಂಡಿದ್ದ. ಇದಾದ ಬಳಿಕ ಈಗ ಮಕ್ಕಳ ಜೊತೆಗೆ ಲೀಲಾ ಈಗ ಮಂಜನ ಮನೆ ಸೇರಿದ್ದಾಳೆ. ಆ ಮೂಲಕ ಮಂಜು-ಲೀಲಾ-ಸಂತು ಟ್ರಯಾಂಗಲ್ ಲವ್ ಕಹಾನಿ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ: ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋಗಿದ್ದ ಮೂರು ಮಕ್ಕಳ ತಾಯಿ ಪ್ರತ್ಯಕ್ಷ; ಗಂಡನ ಬಗ್ಗೆ ಹೇಳಿದ್ದಿಷ್ಟು
ನಮಗಾಗಿ ಅಲ್ಲದಿದ್ದರೂ ಮಕ್ಕಳಿಗಾಗಿ ನಾವು ಒಂದಾಗೋಣ. ನೀನು ಬಂದರೆ ನಾನು ಚೆನ್ನಾಗಿ ಸಾಕುತ್ತೀನಿ. ಕುಡಿಯೋ ಚಟ ಬಿಡುವ ಜೊತೆಗೆ ಬೇರೆ ಹೆಣ್ಣಿನ ಸಹವಾಸವನ್ನೂ ಬಿಡ್ತೀನಿ ಎಂದು ಮಂಜ ಈ ಹಿಂದೆ ಹೇಳಿದ್ದ. ಅದರಂತೆಯೇ ಈಗ ಮಕ್ಕಳ ಕಾರಣಕ್ಕೆ ದಂಪತಿ ಒಂದಾಗಿದ್ದಾರೆ. ದಾಂಪತ್ಯದಲ್ಲಿ ಬಿರುಕು ಮೂಡಿ ಇವರಿಬ್ಬರು ಬೇರಾದ ಸಂದರ್ಭ ಮೀಡಿಯಾಗಳಲ್ಲಿ ಈ ಟ್ರಯಾಂಗಲ್ ಲವ್ ಸ್ಟೋರಿ ಭಅರಿ ಚರ್ಚೆಯಾಗಿತ್ತು. ಮಂಜ ಆಡಿದ್ದ ಮಾತುಗಳು ಮೀಮರ್ಸ್ಗಳಿಗೂ ಭರ್ಜರಿ ಆಹಾರವಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




