ಬೆಂಗಳೂರು, ಅಕ್ಟೋಬರ್ 30: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದೇವೆ. ಬಸವಣ್ಣ ಜಗತ್ತಿಗೆ ಅನುಭವ ಮಂಟಪದ ಪರಿಕಲ್ಪನೆ ಮಾಡಿದ್ದಾರೆ. ಇಡೀ ಜಗತ್ತಿಗೆ ಪ್ರಥಮವಾಗಿ ಪಾರ್ಲಿಮೆಂಟ್ ಕೊಟ್ಟವರು ಬಸವಣ್ಣ. ಹೀಗಾಗಿ ಮೆಟ್ರೋಗೆ ಬಸವಣ್ಣ ಹೆಸರು ಇಟ್ಟರೆ ಸೂಕ್ತ ಎಂದು ಇದೀಗ ಮತ್ತೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ (MB Patil) ಪುನರುಚ್ಚರಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಶ್ಚಿತವಾಗಿ ಮೆಟ್ರೋಗೆ ಬಸವಣ್ಣ ಹೆಸರಿಡಬೇಕು. ಇದು ಜನರ ಒತ್ತಾಯ ಕೂಡ ಹಾಗೂ ನನ್ನದು ಒತ್ತಾಯವಿದೆ ಎಂದಿದ್ದಾರೆ.
ವಿಜಯಪುರ ಜಿಲ್ಲೆಗೆ ಬಸವೇಶ್ವರ ಹೆಸರು ಇಡುವುದಕ್ಕೆ ಸಚಿವ ಶಿವಾನಂದ ಪಾಟೀಲ್ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಕೆಲವು ಸಂಘಟನೆಗಳು ಹಾಗೇ ಸ್ಥಳೀಯ ಜನರು ಬಸವೇಶ್ವರ ನಗರ ಹೆಸರಿಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ. ಬಸವೇಶ್ವರ ಹೆಸರು ಇಡುವುದಕ್ಕೆ ಯಾರಿಗೂ ತಕರಾರು ಇಲ್ಲ, ವಿರೋಧನೂ ಇಲ್ಲ. ಯಾಕೆಂದರೆ ಹೆಸರು ಬದಲಾವಣೆ ಮಾಡಿದರೆ ಸಾಕಷ್ಷು ಅನಾನುಕೂಲ ಆಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆಯಾ ಇಲ್ಲವಾ ಅಂತ ಕೇವಲ ಐವರಿಗೆ ಮಾತ್ರ ಗೊತ್ತು: ಪ್ರಿಯಾಂಕ್ ಖರ್ಗೆ, ಸಚಿವ
ರಾಜ್ಯದಲ್ಲಿ ದೇಶದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೋಗಬೇಕಾಗುತ್ತೆ. ಅದು ಜೊತೆಗೆ ರೂಡಿ ಬರುವಂತಾಗಬೇಕು. ಎಲ್ಲವೂ ಕಷ್ಷವಾದಂತಹ ಕೆಲಸ. ಹೀಗಾಗಿ ಸಾಧಕ ಭಾದಕ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇವೆ. ಇದರ ಸಲುವಾಗಿ ಯಾರ ಜೊತೆಯೂ ವಿರೋಧ ಇಲ್ಲ. ತಾಂತ್ರಿಕ ಸಮಸ್ಯೆ ಹಾಗೂ ಬದಲಾವಣೆ ಇದೆ ಅದರ ಬಗ್ಗೆ ಚಿಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯರನ್ನು ಸಚಿವ ಡಾ.ಜಿ.ಪರಮೇಶ್ವರ್ ಕರೆದಿದ್ದರು. ಎಷ್ಟೋ ಸಲ ನಾನು ಕೂಡ ಸಿಎಂ ಸಿದ್ದರಾಮಯ್ಯರನ್ನು ಕರೆದಿದ್ದೇನೆ. ಊಟಕ್ಕೆ ಹೋಗುವುದು ತಪ್ಪಾ ಎಂದರು. ಸಿಎಂ ಭೇಟಿ ವೇಳೆ ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆ ಆಗಿರಬಹುದು. ಊಟಕ್ಕೆ ಕೂತಾಗ ರಾಜಕೀಯ ಬಗ್ಗೆ ಹೇಗೆ ಚರ್ಚೆ ಮಾಡೋದು ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಏಕಕಾಲಕ್ಕೆ 75 ಕಡೆ ಲೋಕಾಯುಕ್ತ ದಾಳಿ: ಯಾವೆಲ್ಲಾ ಇಲಾಖೆ ಅಧಿಕಾರಿಗಳ ಮೇಲೆ ರೇಡ್? ಇಲ್ಲಿದೆ ಪಟ್ಟಿ
ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರ, ಈ ಬಗ್ಗೆ ನಿರ್ಧಾರ ಮಾಡುವುದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್. ಕಾಲ ಕಾಲಕ್ಕೆ ಏನು ಆಗಬೇಕು ಅಂತಾ ಪಕ್ಷದಲ್ಲಿ ನಿರ್ಧಾರ ಆಗುತ್ತೆ. ಯಾರೇ ಹೇಳಿಕೆ ಕೊಟ್ಟರೂ ಅದು ವೈಯಕ್ತಿಕ ಎಂದು ಹೇಳಿದ್ದಾರೆ.
ದುಬೈ ಪ್ರವಾಸದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿದೇಶ ಪ್ರವಾಸಕ್ಕೆ ಹೋದರೆ ತಪ್ಪೇನಿದೆ. ನನಗೆ, ಸತೀಶ್ ಜಾರಕಿಹೊಳಿಗೆ ಸಂಪುಟ ಉಪ ಸಮಿತಿ ಸಭೆ ಇತ್ತು. ಹೀಗಾಗಿ ಪ್ರವಾಸಕ್ಕೆ ಹೋಗಲು ಆಗಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:23 pm, Mon, 30 October 23