ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ವಿರುದ್ಧ ಸರ್ಕಾರೀ ನೌಕರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರೆ ಅದು ನಿರ್ಮೂಲಗೊಳ್ಳುತ್ತದೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ವಿರುದ್ಧ ಸರ್ಕಾರೀ ನೌಕರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರೆ ಅದು ನಿರ್ಮೂಲಗೊಳ್ಳುತ್ತದೆಯೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2023 | 1:49 PM

ಕನ್ನಡಿಗರಲ್ಲಿ ಎದ್ದಿರುವ ಪ್ರಶ್ನೆಯೇನೆಂದರೆ, ಇಂಥ ಪ್ರತಿಜ್ಞಾ ವಿಧಿಗಳಿಂದ ಭ್ರಷ್ಟಚಾರ ಹೋಗಲಾಡಿಸುವುದದು ಸಾಧ್ಯವೇ? ಜನಸಾಮಾನ್ಯನೊಬ್ಬ ತಾಲ್ಲೂಕು ಕಚೇರಿ, ತಹಸೀಲ ಕಚೇರಿ ಅಥವಾ ಯಾವುದೇ ಇಲಾಖೆಯ ಕಚೇರಿಯನ್ನು ನೀವು ಹೆಸರಿಸಿ-ಲಂಚ ನೀಡದೆ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲಾಗದು. ಕಚೇರಿಗಳಲ್ಲಿ ಗುಮಾಸ್ತನಿಂದ ಹಿಡಿದು ಮೇಲಧಿಕಾರಿಯವರಿಗೆ ಭ್ರಷ್ಟರು. ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿರುವುದರಿಂದ ಯಾರನ್ನು ದೂರುತ್ತೀರಿ?

ಬೆಂಗಳೂರು: ವಿರೋದಾಭಾಸ (contradiction) ಅಂದರೆ ಇದೇ ಇರಬೇಕು. ಒಂದೆಡೆ ರಾಜ್ಯದ ಹಲವಾರು ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta officials) ಭ್ರಷ್ಟ ಸರ್ಕಾರೀ ನೌಕರರ ಮನೆಗಳ ಮೇಲೆ ದಾಳಿ ನಡೆಸಿ ಅವರ ಅಕ್ರಮ ಆಸ್ತಿಗಳನ್ನು ಜಪ್ತು ಮಾಡುತ್ತಿದ್ದರೆ ಇಲ್ಲಿ ವಿಧಾನ ಸೌಧದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳಿಗೆ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸುತ್ತಿದ್ದಾರೆ. ಈ ಪ್ರತಿಜ್ಞಾ ವಿಧಿಯಲ್ಲಿ ಸಾರ್ವಜನಿಕರ ಪಾತ್ರವನ್ನೂ ಉಲ್ಲೇಖಿಸಲಾಗಿದೆ. ಅವರು ಯಾವುದೇ ಕೆಲಸಕ್ಕೆ ಲಂಚ ನೀಡಬಾರದು ಅಂತ ಸಿದ್ದರಾಮಯ್ಯ ಬೋಧಿಸುತ್ತಾರೆ. ಕನ್ನಡಿಗರಲ್ಲಿ ಎದ್ದಿರುವ ಪ್ರಶ್ನೆಯೇನೆಂದರೆ, ಇಂಥ ಪ್ರತಿಜ್ಞಾ ವಿಧಿಗಳಿಂದ ಭ್ರಷ್ಟಚಾರ ಹೋಗಲಾಡಿಸುವುದದು ಸಾಧ್ಯವೇ? ಜನಸಾಮಾನ್ಯನೊಬ್ಬ ತಾಲ್ಲೂಕು ಕಚೇರಿ, ತಹಸೀಲ ಕಚೇರಿ ಅಥವಾ ಯಾವುದೇ ಇಲಾಖೆಯ ಕಚೇರಿಯನ್ನು ನೀವು ಹೆಸರಿಸಿ-ಲಂಚ ನೀಡದೆ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲಾಗದು. ಕಚೇರಿಗಳಲ್ಲಿ ಗುಮಾಸ್ತನಿಂದ ಹಿಡಿದು ಮೇಲಧಿಕಾರಿಯವರಿಗೆ ಭ್ರಷ್ಟರು. ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿರುವುದರಿಂದ ಯಾರನ್ನು ದೂರುತ್ತೀರಿ?

ಇನ್ನು ನಮ್ಮನ್ನಾಳುವ ಪ್ರಭುಗಳು? ಅವರಿಗಂತೂ ಭ್ರಷ್ಟಾಚಾರವೇ ಬದುಕಿನ ಜೀವಾಳ. ಎಲ್ಲ ಪಕ್ಷಗಳ ಶಾಸಕರು, ಮಂತ್ರಿಗಳು ಹೀಗೆ ನಾಡಿನ ಜನರೆದುರು ಪ್ರತಿಜ್ಞೆ ಮಾಡಿರುತ್ತಾರೆ. ಆದರೆ ಅಮೇಲೆ ನಡೆಯೋದೇನು ಅಂತ ಬೇರೆ ಗ್ರಹಗಳ ಜೀವಿಗಳಿಗೂ ಗೊತ್ತು. ಸರ್ಕಾರ ಇಂಥ ಪ್ರತಿಜ್ಞಾ ವಿಧಿಗಳ ಬದಲು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ (ಜೀರೋ ಟಾಲರನ್ಸ್) ಧೋರಣೆ ತಳೆದರೆ ಮಾತ್ರ ಸ್ವಲ್ಪ ಸುಧಾರಣೆ ಆಗಬಹುದು, ಇಲ್ಲದೆ ಹೋದರೆ ಮುಖ್ಯಮಂತ್ರಿ ಇಲ್ಲಿ ಮಾಡುತ್ತಿರೋದು ವ್ಯರ್ಥ ಪ್ರಯತ್ನ ಅನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ