ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ: ಡಿಕೆ ಶಿವಕುಮಾರ್ ಶೀಘ್ರವೇ ಮಾಜಿ: ಹೊಸ ಬಾಂಬ್ ಸಿಡಿಸಿದ ಜಾರಕಿಹೊಳಿ
ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ ಇದಕ್ಕೆ ಇದರಲ್ಲಿ ರಮೇಶ್ ಜಾರಕಿಹೊಳಿ ಹೆಸರು ಕೇಳಿಬಂದಿದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ರಮೇಶ್ ಜಾರಕಿಹೊಳಿ ಇಂದು (ಸೋಮವಾರ) ಬೆಳಗಾವಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಜಗದೀಶ್ ಶೆಟ್ಟರ್ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಶೀಘ್ರವೇ ಮಾಜಿಯಾಗಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ, (ಅಕ್ಟೋಬರ್ 30): ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ (BJP Peration Kamala) ಕೈ ಹಾಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾಡಿರುವ ಗಂಭೀರ ಆರೋಪಕ್ಕೆ ರಮೇಶ್ ಜಾರಕಿಹೊಳಿ(Ramesh Jarkiholi) ಸಿಡಿದೆದ್ದಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ಹೆಸರು ಕೆಡಿಸುತ್ತಿದೆ. ಡಿಕೆ ಆ್ಯಂಡ್ ಕಂಪನಿ ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಿದ್ದಾರೆ. ಆಪರೇಷನ್ ಕಮಲದ ಬಗ್ಗೆ ನಾವು ಚಕಾರ ಎತ್ತಿಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದರು. ಅಲ್ಲದೇ ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
2019ರಲ್ಲಿ ಅನಿವಾರ್ಯ ಇದ್ದಿದ್ದರಿಂದ ಆಪರೇಷನ್ ಮಾಡಿದ್ದೆವು. ಡಿಕೆ ಶಿವಕುಮಾರ್ ಸರ್ವಾಧಿಕಾರಿ ಧೋರಣೆ, ಸೊಕ್ಕಿನಿಂದ ಸರ್ಕಾರ ಕೆಡವಿದ್ದೆವು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ವಿರುದ್ಧ ನಾವು ಮಾಡಿಲ್ಲ. ಗ್ಯಾರಂಟಿ ಈಡೇರಿಸಲು ಆಗದಿದ್ದಕ್ಕೆ ಆಪರೇಷನ್ ಕಮಲ ಆರೋಪ ಮಾಡುತ್ತಿದ್ದಾರೆ. ಏನೇ ಇದ್ದರೂ ದಾಖಲೆ ಬಿಡುಗಡೆ ಮಾಡಲಿ ಎಂದು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಮತ್ತೆ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ನಮ್ಮ ಪಕ್ಷದ ಹೆಸರು ಕೆಡಸುತ್ತಿದ್ದಾರೆ ಅದಕ್ಕಾಗಿ ಮಾತಾಡುತ್ತಿದ್ದೇನೆ. ಜಗದೀಶ್ ಶೆಟ್ಟರ್ ಅವರನ್ನ ನಿನ್ನೆಯೂ ಭೇಟಿ ಮಾಡಿದ್ದೆ. ಶೆಟ್ಟರ್ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಹೊಸ ಬಾಂಬ್ ಸಿಡಿಸಿದರು. ಅಲ್ಲದೇ ಶೆಟ್ಟರ್ ಭೇಟಿಯನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಜಗದೀಶ್ ಶೆಟ್ಟರ್ ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಡಿಕೆ ಶಿವಕುಮಾರ್ ಸಿಡಿ ಮಾಸ್ಟರ್ ಎಂದ ಸಾಹುಕಾರ್
ಸಿಡಿ ಮಾಸ್ಟರ್ ಡಿಕೆ ಶಿವಕುಮಾರ್, ಎಲ್ಲರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾನೆ. ಅವನೇನೂ ದೊಡ್ಡವನಲ್ಲ. ಧೈರ್ಯಶಾಲಿ ಅಲ್ಲ ಪುಕ್ಕಲು. ಡಿಕೆ ಶಿವಕುಮಾರ್ ಯಾವಾಗಲೂ ಮೋಸಗಾರ. ಹೋರಾಟ ಮಾಡುವ ಶಕ್ತಿ ಅವನಿಗಿಲ್ಲ. ಇಪ್ಪತ್ತು ದಿನದ ಹಿಂದೆ ಡಿಕೆ ಶಿವಕುಮಾರ್ ಸಿಡಿ ಇದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ಮಾಜಿ ಶಾಸಕ ನಾಗರಾಜ್ ಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ನಿಂದು ರಮೇಶ್‌ನದ್ದು ಜಾಸ್ತಿಯಾಗಿದೆ, ಎಸ್ಐಟಿ ಕ್ಯಾನ್ಸಲ್ ಮಾಡಿ ತನಿಖೆ ಮಾಡಿಸುತ್ತೇನೆ ಎಂದಿದ್ದಾನೆ. ನಾನು ಸಹ ಸಿಡಿ ಕೇಸ್ ಸಿಬಿಐಗೆ ವಹಿಸಬೇಕೆಂದು ಸಿಎಂಗೆ ಮನವಿ ಮಾಡುತ್ತೇನೆ. ಎಷ್ಟೇ ಸಿಡಿ ಬಂದರೂ ನಾನು ಹೆದರಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ ಮಾಜಿ ಆಗಲಿದ್ದಾರೆ ಎಂದ ರಮೇಶ್ ಜಾರಕಿಹೊಳಿ
ರಾಜ್ಯದಲ್ಲಿ ಆಪರೇಷನ್ ಕಮಲ ಆಗಲು ಸಾಧ್ಯವಿಲ್ಲ. ನಂಬರ್ ಹೆಚ್ಚು ಬೇಕು, ಮಹಾರಾಷ್ಟ್ರ ಮಾದರಿಯಲ್ಲಿದರೆ ಸರ್ಕಾರ ಬದಲಾಗುವುದು. ಒಂದು ರಾತ್ರಿಯಲ್ಲಿ ಎಲ್ಲವೂ ಬದಲಾಗುವುದು. ಅತೀ ಶೀಘ್ರದಲ್ಲಿ ಡಿಕೆ ಶಿವಕುಮಾರ್ ಮಾಜಿ ಮಂತ್ರಿ ಆಗಲಿದ್ದಾರೆ. ರಾಜಕೀಯ ವ್ಯವಸ್ಥೆಯಿಂದ ಗೊತ್ತಾಗುತ್ತಿದೆ. ಹೈಕೋರ್ಟ್ ಹಿನ್ನಡೆಯಿಂದ ಅವರು ಮಾಜಿ ಅಗಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಡಿ.ಕೆ.ಶಿವಕುಮಾರ್ರಿಂದಲೇ ಸರ್ಕಾರ ಬೀಳುತ್ತೆ
ಇನ್ನು ಡಿ.ಕೆ.ಶಿವಕುಮಾರ್ರಿಂದಲೇ ಸರ್ಕಾರ ಬೀಳುತ್ತೆ. ಡಿ.ಕೆ.ಶಿವಕುಮಾರ್ ವಿಪಕ್ಷದಲ್ಲಿದ್ದಾಗ ಕಾಲಿಗೆ ಬೀಳುತ್ತಾ ಓಡಾಡುತ್ತಾನೆ. ಅಧಿಕಾರ ಇದ್ದಾಗ ಎದೆ ಉಬ್ಬಿಸಿಕೊಂಡು ಓಡಾಡ್ತಾನೆ. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಪತನವಾಗಬಹುದು. ಮಹಾರಾಷ್ಟ್ರ ಮಾದರಿಯಲ್ಲಿ ಈ ಸರ್ಕಾರದ ಪರಿಸ್ಥಿತಿ ಆಗಬಹುದು. ಲಾಟರಿ ಮಂತ್ರಿ, ಲಾಟರಿ ಶಾಸಕರಿದ್ದರೆ ಈ ರೀತಿ ಪರಿಸ್ಥಿತಿ ಆಗುತ್ತದೆ.
ಇನ್ನು ಕರ್ನಾಟಕ ರಾಜ್ಯಕ್ಕೆ ಬಸವಣ್ಣನ ನಾಡು ಎಂದು ಹೆಸರಿಡಲು ಸಚಿವ ಎಂಪಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ರಮೇಶ್ ಜಾರಕೊಹೊಳಿ ಪ್ರತಿಕ್ರಿಯಿಸಿ, ಬಸವಣ್ಣ ಅನ್ನೋದಕ್ಕಿಂತ ಅಂಬೇಡ್ಕರ್ ಹೆಸರಿಡಲು ನನ್ನ ಮನವಿ ಎಂದರು.
Published On - 1:28 pm, Mon, 30 October 23