ಬೆಂಗಳೂರು, ಆಗಸ್ಟ್ 29: ಮೈಕ್ರೋ ನ್ಯಾನೋ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ವಿಜ್ಞಾನಿ ಅಶುತೋಷ್ ಸಿಂಗ್ ಕಾರಿನ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಹಲ್ಲೆಗೂ ಯತ್ನಿಸಿದ ಘಟನೆ ಬೆಂಗಳೂರು (Bengaluru) ನಗರದಲ್ಲಿ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌತನಹಳ್ಳಿ ಮುಖ್ಯರಸ್ತೆಯಲ್ಲಿ ಆಗಸ್ಟ್ 24 ರ ರಾತ್ರಿ 12.45ರ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಶುತೋಷ್ ಸಿಂಗ್ ಅವರು ಹೋಗುತ್ತಿದ್ದ ಕ್ವಿಡ್ ಕಾರನ್ನು ನಾಲ್ವರು ಅಪರಿಚಿತರು ತಡೆದು ಹಿಂಭಾಗದ ಗ್ಲಾಸ್ ಅನ್ನು ಪೈಡಿಗೈದಿದ್ದಾರೆ. ಬಳಿಕ ಅಶುತೋಷ್ ಮೇಲೆ ಹಲ್ಲೆಗೆ ಮುಂದಾದಾಗ ಅಶುತೋಷ್ ಅವರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಹೋಗಿದ್ದಾರೆ.
ಬಳಿಕ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ದೂರು ನೀಡಿದ್ದಾರೆ. ಆದರೆ, ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಪೊಲೀಸರ ನಡೆ ಬಗ್ಗೆ ಆಗಸ್ಟ್ 27 ರಂದು ಟ್ವಿಟರ್ನಲ್ಲಿ ಹಂಚಿಕೊಂಡ ಅಶುತೋಷ್ ಅವರು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಂದ್ರನ ಮೇಲೆ ಆಮ್ಲಜನಕ ಮತ್ತು ಇತರ ಮೂಲಧಾತು ಪತ್ತೆ; ಹೈಡ್ರೋಜನ್ಗಾಗಿ ನಡೆಯುತ್ತಿದೆ ಹುಡುಕಾಟ: ಇಸ್ರೋ
“ಆಗಸ್ಟ್ 24ರಂದು ಮಧ್ಯರಾತ್ರಿ 12.45ರ ಸುಮಾರಿಗೆ ರೌತನಹಳ್ಳಿ ಮುಖ್ಯರಸ್ತೆಯಲ್ಲಿ ಸ್ಥಳೀಯ ಗೂಂಡಾಗಳು ನನ್ನ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರು, ಲಾಂಗ್ಗಳಿಂದ ಬೆನ್ನಟ್ಟಿದರು, ಕಾರಿನ ಹಿಂಭಾಗದ ಗಾಜನ್ನು ಒಡೆದಿದ್ದಾರೆ. ಆದರೆ ವಿಳಂಬವಾದ ಪೊಲೀಸ್ ಪ್ರತಿಕ್ರಿಯೆಯಿಂದ ಆಘಾತವಾಯಿತು. ನ್ಯಾಯಕ್ಕಾಗಿ ಇಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ತುರ್ತು ಕ್ರಮದ ಅಗತ್ಯವಿದೆ” ಎಂದು ಅಶುತೋಷ್ ಹೇಳಿದ್ದಾರೆ.
A narrow escape from local goons on Aug 24, 12:45 AM at Rauthanahalli Main road. They tried stopping my car, chased with swords, shattering back glass. Traumatized by the delayed police response. Seeking justice, lodging FIR at Madnayakanahalli PS today. urgent action is needed! pic.twitter.com/xPxmqhLiiS
— Ashutosh Singh (@ashuvishen) August 27, 2023
ನಂತರ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆಯೂ ಟ್ವೀಟ್ ಮಾಡಿದ ಅಶುತೋಷ್, ನನ್ನ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಮತ್ತು ಸ್ಥಳಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ಹೆಚ್ಚಿನ ತಪಾಸಣೆ ಮತ್ತು ಫಲಿತಾಂಶಗಳಿಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Tue, 29 August 23