ಬೆಂಗಳೂರು: ಸರಣಿ ವಿವಾದಗಳಿಂದ ರಾಜ್ಯದಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ಮಧ್ಯೆ ಕಂದಕ ಏರ್ಪಟ್ಟಿದೆ. ಎಲ್ಲಾ ವಿವಾದ ಆಗ್ತಿದ್ರೂ ಸಿಎಂ ನಮಗೇನೂ ಗೊತ್ತಿಲ್ಲ ಎನ್ನುವಂತೆ ವರ್ತಿಸ್ತಿದ್ದಾರೆ. ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ರೆ ಎಲ್ಲವನ್ನೂ ನಿಲ್ಲಿಸಿ. ವಿಹೆಚ್‌ಪಿ, ಬಜರಂಗದಳದವರು ಸಮಾಜ ಘಾತುಕರು, ಪೋಲಿಗಳು. ಕಾಂಗ್ರೆಸ್ನವರಿಗೆ ತಾಕತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಇವತ್ತು ಕೆಂಡಾಮಂಡಲರಾಗಿದ್ದಾರೆ. ಹಲಾಲ್ ಬ್ಯಾನ್, ವ್ಯಾಪಾರ ಬ್ಯಾನ್, ಹಿಜಾಬ್ ಹೀಗೆ ಸರಣಿ ವಿವಾದಗಳ ಬಗ್ಗೆ ಇಷ್ಟು ದಿನ ಬ್ಯಾಲೆನ್ಸಿಂಗ್ ಪ್ರತಿಕ್ರಿಯೆ ಕೊಡ್ತಿದ್ದ ಹೆಚ್‌ಡಿಕೆ ಇವತ್ತು ಏಕಾಏಕಿ ಜ್ವಾಲಾಮುಖಿಯಂತೆ ಸ್ಫೋಟಿಸಿದ್ದಾರೆ. ಸಿಎಂಗೆ ಗಂಡಸ್ತನದ ಸವಾಲು ಹಾಕಿದ್ದಾರೆ. ಸದ್ಯ ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ಪಕ್ಷ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
ಕುಮಾರಸ್ವಾಮಿ ಗಂಡಸ್ತನ ಪದ ಬಳಸಿರುವುದು ನೋವಾಗಿದೆ. ಗಂಡಸ್ತನ ಯಾವುದಕ್ಕೆ ಬಳಸಬೇಕೆಂದು ಹೆಚ್‌ಡಿಕೆಗೆ ಗೊತ್ತು. ಇವರು ಕೇವಲ ಹಿಂದೂಗಳಿಗೆ ಮಾತ್ರ ಬುದ್ಧಿ ಹೇಳೋದಾ? ಮುಸ್ಲಿಮರಿಗೆ ಯಾರಾದರೂ ಬುದ್ಧಿ ಹೇಳಿದ್ರಾ? ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.
ಹಲಾಲ್ ಕಟ್ ಅನ್ನು ISI ಸರ್ಟಿಫಿಕೆಟ್‌ನಂತೆ ಪರಿಗಣಿಸಬೇಕಾ?
ಕುಮಾರಸ್ವಾಮಿಯಷ್ಟು ಗಂಡಸ್ತನ ಯಾರೂ ತೋರಿಸಲು ಆಗಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ಕೊಟ್ಟಿದ್ದಾರೆ. ಹಲಾಲ್ ಕಟ್ ಹೇಗೆ ಸಮರ್ಥಿಸಿಕೊಳ್ಳುತ್ತಾರೆಂದು ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ಹಲಾಲ್ ಕಟ್ ಅನ್ನು ISI ಸರ್ಟಿಫಿಕೆಟ್‌ನಂತೆ ಪರಿಗಣಿಸಬೇಕಾ? ಹಲಾಲ್ ಕಟ್ ಅನ್ನು ಯಾರು ಮಾನ್ಯ ಮಾಡಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ಸತ್ಯ ಹೇಳುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದು. ಯಾರನ್ನ ಅಪರಾಧಿ ಸ್ಥಾನದಲ್ಲಿ ಕೂರಿಸಬೇಕೆಂದು ತಿಳಿದು ಮಾತಾಡಲಿ. ಅದು ನಿಜವಾದ ಗಂಡಸ್ತನ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಗರಂ ಆಗಿದ್ದಾರೆ.
ನಾನು ಗಂಡಸ್ತನದ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ
ಹೆಚ್.ಡಿ.ಕುಮಾರಸ್ವಾಮಿ ದೊಡ್ಡವರು, ಅನುಭವಸ್ಥರು. HDK, ಅಶ್ವತ್ಥ್ ನಾರಾಯಣ ಗಂಡಸ್ತನ ಬಗ್ಗೆ ಮಾತಾಡಲ್ಲ. ನಾನು ಗಂಡಸ್ತನದ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ನಾವು ನಮ್ಮ ಮನೆ ಕಟ್ಟಿಕೊಳ್ಳಲು ನೋಂದಣಿ ಮಾಡ್ತಿದ್ದೇವೆ. ಇವರ ಮಾತುಗಳಿಗೆ ರಾಜ್ಯದ ಜನರೇ ಪ್ರತಿಕ್ರಿಯೆ ನೀಡ್ತಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸಿಎಂ ಆಗಿದ್ದವರು ಇಂತಹ ಪದಪ್ರಯೋಗ ಮಾಡಬಾರದು. ಇಂತಾ ಹೇಳಿಕೆಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತದೆ ಎಂದು ಕುಮಾರಸ್ವಾಮಿ ಗಂಡಸ್ತನ ಹೇಳಿಕೆಗೆ R.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸಿ.ಟಿ ರವಿ ಹೇಳಿಕೆ ನೋಡಿದ್ದೇನೆ. ಇದರಲ್ಲಿ ತಪ್ಪು ಇಲ್ಲ. ಸಲಹೆ ಕೊಟ್ಟಿದ್ದಾರೆ ತಪ್ಪೇನು ಇಲ್ಲ. ಸರ್ಕಾರ ಇದುವರೆಗೂ ಯಾವುದೇ ಆದೇಶ ಕೊಟ್ಟಿಲ್ಲ ಎಂದರು. ಇನ್ನು ಮತ್ತೊಂದೆಡೆ ಹಲಾಲ್ ಆರ್ಥಿಕ ಜಿಹಾದ್ ಎಂಬ ಸಿ.ಟಿ ರವಿ ಹೇಳಿಕೆ ವಿಚಾರಕ್ಕೆ ಸಂಬಂಧಿಸ ಮಾತನಾಡಿರುವ R.ಅಶೋಕ್, ಈ ರೀತಿಯ ಉತ್ಪ್ರೇಕ್ಷ ಹೇಳಿಕೆ ತಪ್ಪು. ಯಾರು ಕೂಡ ಇದರ ಪರವಾಗಿ ವಿರೋಧವಾಗಿ ಮಾತನಾಡಬಾರದು. ಬಹಳಷ್ಟು ಸ್ವಾಮೀಜಿ ಕೂಡ ಸಾಮರಸ್ಯ ಬಗ್ಗೆ ಮಾತನಾಡಿದ್ದಾರೆ. ಮುಸ್ಲಿಂ ಸಮುದಾಯ ಕೂಡ ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ. ಸಾಮರಸ್ಯ ಮುಖ್ಯ ಅಂತ ಹೇಳಿದ್ದಾರೆ. ಇದನ್ನು ಇಲ್ಲಿಗೆ ಕೈ ಬಿಡಬೇಕು. ವಾಟ್ಸಪ್ಸ್ ನಲ್ಲಿ ವೈಯಕ್ತಿಕ ಚಾಳಿ ತೀರಿಸಿಕೊಳ್ಳಲು ಕೆಲಸ ಮಾಡಬಾರದು. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಬಗ್ಗೆ ಮೋದಿ ಅವರೇ ಹೇಳಿದ್ದಾರೆ. ನಾವು ಮೋದಿ ಪರವಾಗಿ ಇದ್ದವರು. ಸರ್ಕಾರ ಮೌನವಾಗಿಲ್ಲ ಸರ್ಕಾರ ಸ್ಪಷವಾಗಿ ನಿಲುವು ಹೇಳಿದೆ. ಆಹಾರ ಪದ್ದತಿ ಅವರ ವೈಯಕ್ತಿಕ ಅಷ್ಟೇ. ಯಾವುದೇ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಹೀಗೆ ಮಾಡಿ ಅಂತಾ ಹೇಳಿದ್ದಾರಾ..? ಈ ರೀತಿಯ ವಿಚಾರಕ್ಕೆ ಸರ್ಕಾರದ ವಿರೋಧ ಇದೆ. ಅರ್ಜಿ ಕೊಡೊದೇ ದೊಡ್ಡ ವಿಷಯ ಆಗೋದು ಬೇಡ ಎಂದು ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಮದ್ಯಪಾನ, ಸಿಗರೇಟ್ ಸೇದಲು ಬಿಡದಿದ್ದಕ್ಕೆ 14 ವರ್ಷದಿಂದ ವಿಮಾನ ನಿಲ್ದಾಣದಲ್ಲೇ ವ್ಯಕ್ತಿಯ ವಾಸ!
ರೀ-ರಿಲೀಸ್ ಆಗ್ತಿದೆ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ; ಈ ಆಫರ್ ಸಿಗೋದು ಕೆಲವೇ ದಿನಗಳು ಮಾತ್ರ