ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವ: ಭೂಕಂಪದ ಮುನ್ಸೂಚನೆ ಅಲ್ಲ ಭಯಪಡಬೇಡಿ ಎಂದು ಆರ್ ಅಶೋಕ್ ಪ್ರಕಟಣೆ

| Updated By: ganapathi bhat

Updated on: Nov 26, 2021 | 6:30 PM

ನಾನು ಅಧಿಕಾರಿಗಳು, ತಜ್ಞರ ಜೊತೆ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಚಿವರು ಮನವಿ ಮಾಡಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಸಚಿವ ಆರ್. ಅಶೋಕ್ ಈ ಸಂಬಂಧ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವ: ಭೂಕಂಪದ ಮುನ್ಸೂಚನೆ ಅಲ್ಲ ಭಯಪಡಬೇಡಿ ಎಂದು ಆರ್ ಅಶೋಕ್ ಪ್ರಕಟಣೆ
ಆರ್ ಅಶೋಕ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ರಾಜಧಾನಿಯಲ್ಲಿ ಭೂಮಿ ಕಂಪಿಸಿದ ಅನುಭವ ವಿಚಾರವಾಗಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಯಾರೂ ಭಯಪಡಬೇಡಿ, ಇದು ಸಣ್ಣ ಪ್ರಮಾಣದ ಕಂಪನ. ಹೆಮ್ಮಿಗೆಪುರ, ಕಗ್ಗಲೀಪುರ, ಕೆಂಗೇರಿ, ಆರ್.ಆರ್. ನಗರ, ಮುಂತಾದ ಕಡೆ ಶಬ್ದ, ಸಣ್ಣ ಪ್ರಮಾಣದ ಕಂಪನವಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರ, ತಜ್ಞರ ವರದಿ ಪಡೆದಿದ್ದು ಇದು ಭೂಕಂಪದ ಮುನ್ಸೂಚನೆ ಅಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ನಾನು ಅಧಿಕಾರಿಗಳು, ತಜ್ಞರ ಜೊತೆ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಚಿವರು ಮನವಿ ಮಾಡಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಸಚಿವ ಆರ್. ಅಶೋಕ್ ಈ ಸಂಬಂಧ ಮನವಿ ಮಾಡಿಕೊಂಡಿದ್ದಾರೆ.

ಭೂಮಿ ಕಂಪಿಸಿದ ಅನುಭವ
ಬೆಂಗಳೂರಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು. ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ, ಮೈಸೂರು ರಸ್ತೆಯ ಕೆಲ ಏರಿಯಾದಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿತ್ತು. ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದೆ. ಮೊದಲ ಸಲ ಲಘುವಾಗಿ ಕಂಪಿಸಿದ ಅನುಭವವಾಗಿದ್ದು, ನಂತರ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.

ಮಂಡ್ಯದಲ್ಲಿಯೂ ಭಾರೀ ಶಬ್ದ ಕೇಳಿ ಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. 11.50ರ ಸುಮಾರಿಗೆ ಮೊದಲ ಬಾರಿಗೆ ಜೋರು ಶಬ್ದ ಕೇಳಿ ಬಂದಿದೆ. 10-15 ನಿಮಿಷ ಅಂತರದಲ್ಲಿ 2 ಬಾರಿ ಕೇಳಿಬಂದ ಶಬ್ದ ಕೇಳಿ ಬಂದಿದೆ. ಕೆಲ ಕಾಲ ಭೂಕಂಪನದ ಅನುಭವವಾಗಿದ್ದು, ಶಬ್ಧಕ್ಕೆ ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ನಲುಗಿವೆ. ಈ ಹಿಂದೆ ಕೆಆರ್‌ಎಸ್, ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಶಬ್ಧ ಕೇಳಿಬಂದಿತ್ತು. ಇದೀಗ ಮಂಡ್ಯ ನಗರದಲ್ಲಿ ಭಾರೀ ಶಬ್ದ ಕೇಳಿ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವದ ಬಗ್ಗೆ ಟಿವಿ9 ಜತೆ ಅಭಿಪ್ರಾಯ ಹಂಚಿಕೊಂಡ ಹೆಮ್ಮಿಗೆಪುರ ನಿವಾಸಿ

ಇದನ್ನೂ ಓದಿ: Bengaluru Earthquake: ಬೆಂಗಳೂರಿನಲ್ಲಿ ಎರಡೆರಡು ಬಾರಿ ಭೂಕಂಪದ ಅನುಭವ; ಮಂಡ್ಯದಲ್ಲಿ ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಜನ!

Published On - 6:29 pm, Fri, 26 November 21