ಮತ್ತೆ ಸದ್ದು ಮಾಡಿದ ಮತಾಂತರ, ಜಾನುವಾರು ಹತ್ಯೆ ನಿಷೇಧ ಕಾಯ್ದೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ಹಾಗೂ ಮತಾಂತರ ನಿಷೇಧ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತರು, ರೈತರು ಹಾಗೂ ದಲಿತ ಸಂಘಟನೆಗಳು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿವೆ. ಇತ್ತ ಕಾಯ್ದೆ ವಾಪಸಾತಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯಾದ್ಯಂತ ಆಂದೋಲನ ಮಾಡೋದಾಗಿ ಎಚ್ಚರಿಸಿದೆ.

ಮತ್ತೆ ಸದ್ದು ಮಾಡಿದ ಮತಾಂತರ, ಜಾನುವಾರು ಹತ್ಯೆ ನಿಷೇಧ ಕಾಯ್ದೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ವಿಧಾನಸೌಧ (ಸಾಂದರ್ಭಿಕ ಚಿತ್ರ)
Image Credit source: Getty Images
Edited By:

Updated on: Nov 12, 2026 | 6:19 PM

ಬೆಂಗಳೂರು, ನವೆಂಬರ್​​ 12: ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಅಲ್ಪಸಂಖ್ಯಾತರು, ರೈತರು, ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕ್ರೈಸ್ತ, ಮುಸ್ಲಿಂ ಧಾರ್ಮಿಕ ಮುಖಂಡರು, ನಾಗರಿಕ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಿದ್ದು, 2023ರ ಚುನಾವಣೆಯ ಹಲವು ಭರವಸೆಗಳನ್ನು ಈಡೇರಿಸಿಲ್ಲವೆಂದು ಆರೋಪಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿರುವ ಪ್ರತಿಭಟನಾಕಾರರು, ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಕೇಸ್ ಹಿಂಪಡೆಯಿವಂತೆಯೂ ಆಗ್ರಹಿಸಿದ್ದಾರೆ.

ಬೇಡಿಕೆ ಈಡೇರಿಕೆಗೆ ಕಾಲಮಿತಿ ಕ್ರಮ ಘೋಷಿಸಲು ಆಗ್ರಹ

ದ್ವೇಷ ಭಾಷಣ, ದ್ವೇಷಾಧಾರಿತ ಅಪರಾಧಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹದ ಜೊತೆಗೆ ಕೋಮು ಹಿಂಸೆ ತಡೆಗೆ ಸುಪ್ರೀಂಕೋರ್ಟ್ ನಿರ್ದೇಶನ ಜಾರಿಗೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಅಲ್ಪಸಂಖ್ಯಾತರು, ದುರ್ಬಲ ಸಮುದಾಯಗಳಿಗೆ ರಕ್ಷಣೆ ನೀಡಬೇಕು. ರೈತರು, ಜಾನುವಾರು ವ್ಯಾಪಾರಿಗಳ ಜೀವನೋಪಾಯಕ್ಕೆ ಹೊಡೆತವಾಗುತ್ತಿರುವ ಹಿನ್ನೆಲೆ ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಬೇಕು. ನಾಗರಿಕ ಆಹಾರ ಆಯ್ಕೆಯನ್ನೂ ಕಾಯ್ದೆ ನಿರ್ಬಂಧಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಬೇಡಿಕೆ ಈಡೇರಿಕೆಗೆ ಕಾಲಮಿತಿಯ ಕ್ರಮ ಘೋಷಿಸುವಂತೆ ಸರ್ಕಾರವನ್ನವರು ಆಗ್ರಹಿಸಿದ್ದಾರೆ.

Loading...

ಇದನ್ನೂ ಓದಿ: ‘ಮೈಲೇಜ್ ಕುಸಿತಕ್ಕೆ ಗುಂಡಿ ಬಿದ್ದ ರಸ್ತೆಗಳೇ ಕಾರಣ’: ಎಥೆನಾಲ್ ಬಗ್ಗೆ ಕಾಂಗ್ರೆಸ್ ಆರೋಪಕ್ಕೆ ಅಶೋಕ್ ತಿರುಗೇಟು

ಸರ್ಕಾರದ ಮೇಲೆ ಕೆಪಿಸಿಸಿ ಅಧ್ಯಕ್ಷರಿಂದಲೂ ಒತ್ತಡ?

ಮತ್ತೊಂದೆಡೆ ರಾಜ್ಯ ಸರ್ಕಾರದ ಮೇಲೆ ಮತಾಂತರ ನಿಷೇಧ ಹಾಗೂ ಗೋ ಹತ್ಯಾ ನಿಷೇಧ ಕಾಯ್ದೆ ವಾಪಸತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಂದಲೇ ಒತ್ತಡ ವಿದೆ ಎನ್ನಲಾಗಿದೆ. ಮೂರು ವರ್ಷದ ಹಿಂದೆ ವಿಪಕ್ಷದಲ್ಲಿದ್ದಾಗ ಅಧಿಕಾರಕ್ಕೆ ಬಂದ್ರೆ ಕಾಯ್ದೆ ವಾಪಸತಿ ಬಗ್ಗೆ ಅಲ್ಪ ಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಭರವಸೆ ನೀಡಿತ್ತು. ಇತೀಚೆಗೆ ಹರಿಪ್ರಸಾದ್ ಬಳಿ ಈ ಸಂಬಂಧ ಧರ್ಮಗುರುಗಳು ಮಾತುಕತೆ ನಡೆಸಿದ್ದರು. ನಮ್ಮ ಸಮುದಾಯವನ್ನ ಸರಾಗವಾಗಿ ಪರಿಗಣಿಸಬೇಡಿ ಎಂದಿದ್ದರು. ಮತಾಂತರ ನಿಷೇಧ ಕಾಯ್ದೆ ಹಾಗೂ ಗೋ ಹತ್ಯೆ ಕಾಯ್ದೆ ಹಿಂಪಡೆಯಲು ಆಗ್ರಹಿಸಿದ್ದರು. ಈ ಸಂಬಂಧ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ವಾಪಸತಿಗೆ ಹರಿಪ್ರಸಾದ್​​ ಸರ್ಕಾರದ ಮೇಲೂ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಬಿಜೆಪಿಯಿಂದ ತೀವ್ರ ವಿರೋಧ

Anti-Conversion & Cow Slaughter Laws: ‘ಕಾಯ್ದೆ ವಾಪಸ್​ ಪಡೆದ್ರೆ ರಾಜ್ಯಾದ್ಯಂತ ಆಂದೋಲನ ಮಾಡ್ತೇವೆ ರವಿಕುಮಾರ್

ಇತ್ತ ಬಿಜೆಪಿ ಮಾತ್ರ ಈ ವಿಚಾರವಾಗಿ ಕಿಡಿ ಕಾರಿದ್ದು, ಮತಾಂತರ ನಿಷೇಧ ಕಾಯ್ದೆ ಹಿಂಪಡೆದರೆ ನಮ್ಮ ವಿರೋಧ ಇದೆ ಎಂದಿದೆ. ಎಲ್ಲ ಸಮುದಾಯದ ಅಭಿಪ್ರಾಯ ಪಡೆದು ಕಾನೂನು ರೂಪಿಸಿದ್ದೇವೆ. ಸರ್ಕಾರ ಹಾಗೂ ಬಿ.ಕೆ.ಹರಿಪ್ರಸಾದ್​ಗೆ ನಾವು ಎಚ್ಚರಿಕೆ ಕೊಡುತ್ತಿದ್ದು, ರಾಜ್ಯಾದ್ಯಂತ ಆಂದೋಲನ ಮಾಡ್ತೇವೆ ಎಂದು ಎಂಎಲ್​ಸಿ ಎನ್.ರವಿಕುಮಾರ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರು-ಹಿಂದೂಗಳ ನಡುವಿನ ಕಂದಕ ವಿಸ್ತರಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಮತಾಂತರ ನಿಷೇಧ ಬಿಲ್ ಹಿಂಪಡೆವ ಬಗ್ಗೆ ಚರ್ಚೆ ಮಾಡ್ತಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಕೂಡ ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:13 pm, Thu, 12 November 26

ಪ್ರಮೋದ್​ ಶಾಸ್ತ್ರಿ ಜಿ.
Loading...
Unable to load recommendations.
Follow Us