AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಷನ್​ ಕಾರ್ಡ್​ದಾರರಿಗೆ ಸಿಹಿ ಸುದ್ದಿ: ಇ-ಕೆವೈಸಿ ಮಾಡಿಸಲು ಗಡುವು ಮತ್ತೆ ವಿಸ್ತರಣೆ

ರೇಷನ್​ ಕಾರ್ಡ್ ಇ-ಕೆವೈಸಿ ಇನ್ನೂ ಮಾಡಿಸದವರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆ ಗಡುವನ್ನು ಮತ್ತೆ ವಿಸ್ತರಿಸಿದ್ದು, ನವೆಂಬರ್ 30ರವರೆಗೆ ಅವಕಾಶ ನೀಡಿದೆ. ಅನ್ನಸೇವೆ ಆ್ಯಪ್ ಮೂಲಕ ಮನೆಯಲ್ಲೇ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಬಹುದು.

ರೇಷನ್​ ಕಾರ್ಡ್​ದಾರರಿಗೆ ಸಿಹಿ ಸುದ್ದಿ: ಇ-ಕೆವೈಸಿ ಮಾಡಿಸಲು ಗಡುವು ಮತ್ತೆ ವಿಸ್ತರಣೆ
ಸಾಂದರ್ಭಿಕ ಚಿತ್ರ
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Nov 11, 2026 | 9:42 AM

Share

ಬೆಂಗಳೂರು, ನವೆಂಬರ್ 11: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮತ್ತೊಮ್ಮೆ ರಿಲೀಫ್ ನೀಡಿದೆ. ಇ-ಕೆವೈಸಿ ಮಾಡಿಸಲು ನಿಗದಿಯಾಗಿದ್ದ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ನವೆಂಬರ್ 10 ರ ಗಡುವು ವಿಧಿಸಲಾಗಿತ್ತು. ಪಡಿತರದಾರರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಎರಡು ವಿಧಾನಗಳಲ್ಲಿ ಇ-ಕೆವೈಸಿಗೆ ಅವಕಾಶ

ಫಲಾನುಭವಿಗಳು ಅನ್ನಸೇವೆ ಆ್ಯಪ್ ಮೂಲಕ ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸಬಹುದು. ಇಲ್ಲವೇ ತಮ್ಮ ಹತ್ತಿರದ ನ್ಯಾಯಬೆಲೆ (ಪಡಿತರ) ಅಂಗಡಿಗೆ ತೆರಳಿಯೂ ಈ ಪ್ರಕ್ರಿಯೆ ಮಾಡಿಸಿಕೊಳ್ಳಲು ಅವಕಾಶವಿದೆ. ಅಂತಿಮ ಗಡುವಿನೊಳಗೆ ಇ-ಕೆವೈಸಿ ಮುಗಿಸಿಕೊಳ್ಳಬೇಕು ಎಂದು ಇಲಾಖೆ ಮನವಿ ಮಾಡಿದೆ.

ಅನ್ನಸೇವೆ ಆ್ಯಪ್ ಎಲ್ಲ ಜಿಲ್ಲೆಗಳಲ್ಲೂ ಲಭ್ಯ

ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಆಹಾರ ಇಲಾಖೆ ಅನ್ನಸೇವೆ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರದ ನಿಯಮದ ಪ್ರಕಾರ ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಕಡ್ಡಾಯ. ಹಿರಿಯ ನಾಗರಿಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ಮುಖ ಗುರುತಿಸುವಿಕೆ (ಫೇಸ್ ಆಥೆಂಟಿಕೇಷನ್) ಸೌಲಭ್ಯವೂ ಲಭ್ಯವಿದೆ. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋದವರು ಇ-ಕೆವೈಸಿಗಾಗಿ ಊರಿಗೆ ಬರಬೇಕಾದ ತೊಂದರೆಯನ್ನು ಈ ಆ್ಯಪ್ ತಪ್ಪಿಸಲಿದೆ.

ಇ-ಕೆವೈಸಿ ಮಾಡುವುದು ಹೇಗೆ?

ಅನ್ನಸೇವೆ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು. ಇದಕ್ಕೆ ರೇಷನ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದ್ದರೆ ಸಾಕು. ಹಂತಗಳು ಹೀಗಿವೆ;

  • ಮೊಬೈಲ್‌ನಲ್ಲಿ ಅನ್ನಸೇವೆ ಆ್ಯಪ್ ತೆರೆಯಿರಿ.
  • ಲಾಗಿನ್ ಪ್ರಕಾರದಲ್ಲಿ ‘‘ಸ್ವಯಂ/ನಾಗರಿಕ’’ ಆಯ್ಕೆ ಮಾಡಿ.
  • ಜಿಲ್ಲೆಗಳ ಪಟ್ಟಿಯಿಂದ ನಿಮ್ಮ ಜಿಲ್ಲೆ ಆಯ್ಕೆ ಮಾಡಿ.
  • ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
  • ರೇಷನ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನೀಡಿ, ಬಂದ ಒಟಿಪಿ ಹಾಕಿ.
  • ತೆರೆದುಕೊಳ್ಳುವ ಪುಟದಲ್ಲಿ ಕುಟುಂಬ ಸದಸ್ಯರ ವಿವರ ಕಾಣಿಸುತ್ತದೆ. ಇ-ಕೆವೈಸಿ ಮಾಡಬೇಕಾದ ಸದಸ್ಯರನ್ನು ಆಯ್ಕೆ ಮಾಡಿ.
  • ಆ್ಯಪ್‌ನ ಸೂಚನೆಯಂತೆ ಫೇಸ್ ರೆಕಗ್ನಿಷನ್ ಪೂರ್ಣಗೊಳಿಸಿ.
  • ‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣ.

ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಈ ಪ್ರಕ್ರಿಯೆಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಹಿಂದೆಯೇ ಹಂಚಿಕೊಂಡಿರುವುದನ್ನು ಗಮನಿಸಬಹುದು.

ಇದನ್ನೂ ಓದಿ: ಕುಳಿತಲ್ಲೇ 5 ನಿಮಿಷದಲ್ಲೇ ರೇಷನ್‌ ಕಾರ್ಡ್‌ e-KYC ಮಾಡಬಹುದು: ಇಲ್ಲಿದೆ ಸರಳ ವಿಧಾನ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More