ಕುಳಿತಲ್ಲೇ 5 ನಿಮಿಷದಲ್ಲೇ ರೇಷನ್ ಕಾರ್ಡ್ e-KYC ಮಾಡಬಹುದು: ಇಲ್ಲಿದೆ ಸರಳ ವಿಧಾನ
ಪಡಿತರ ಚೀಟಿದಾರರು ಇನ್ನು ಮುಂದೆ ಇ-ಕೆವೈಸಿ (e-KYC) ಮಾಡಿಸಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲೋ ಟೆನ್ಷನ್ ಇಲ್ಲ. ಇದೀಗ ಆಹಾರ ಇಲಾಖೆ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಅನ್ನಸೇವೆ (Anna Seve Mobile App) ಮೊಬೈಲ್ ಆ್ಯಪ್ ಮೂಲಕ ಫಲಾನುಭವಿಗಳು ತಮ್ಮ ಮನೆಯಲ್ಲೇ ಕುಳಿತು ಸುಲಭವಾಗಿ ಇ-ಕೆವೈಸಿ ಮಾಡಿಸಬಹುದಾಗಿದೆ. ಅದು ಹೇಗೆ ಮಾಡಬೇಕೆನ್ನುವುದು ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಅಕ್ಟೋಬರ್ 14): ಕರ್ನಾಟಕ ಆಹಾರ ಇಲಾಖೆಯು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಕೊಳ್ಳಲು ‘ಅನ್ನಸೇವೆ’ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರದ ನಿಯಮದಂತೆ 5 ವರ್ಷಕ್ಕೊಮ್ಮೆ ಇ-ಕೆವೈಸಿ ಕಡ್ಡಾಯವಾಗಿದ್ದು, ಫಲಾನುಭವಿಗಳು ಯಾವುದೇ ದಾಖಲೆಗಳಿಲ್ಲದೆ, ಕೇವಲ ರೇಷನ್ ಕಾರ್ಡ್ ಮತ್ತು ಲಿಂಕ್ ಆಗಿರುವ ಮೊಬೈಲ್ ನಂಬರ್ ಬಳಸಿ ಕುಳಿತಲ್ಲೇ ಕೇವಲ 5 ನಿಮಿಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ರೇಷನ್ ಕಾರ್ಡ್ ಫಲಾನುಭವಿಗಳು ಉದ್ಯೋಗಕ್ಕಾಗಿ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಇ ಕೆವೈಸಿ ಪೂರ್ಣಗೊಳಿಸಲು ತಮ್ಮ ಕೆಲಸದ ಸ್ಥಳದಿಂದ ಸ್ವಗ್ರಾಮಗಳಿಗೆ ತೆರಳಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ಆದ್ರೆ, ಇದೀಗ ‘ಅನ್ನ ಸೇವೆ’ ಆಪ್ನಿಂದ ಈ ತೊಂದರೆ ತಪ್ಪಲಿದೆ.
ಇದನ್ನೂ ಓದಿ: ಜಿಬಿಎ ಇ-ಆಸ್ತಿ 2.0 ಸಾಫ್ಟ್ವೇರ್ನಿಂದ ಆಸ್ತಿ ಮಾಲೀಕರಿಗೆ ಸಂಕಷ್ಟ! ಹೆಸರು, ವಿಳಾಸದಲ್ಲಿ ಸಣ್ಣ ವ್ಯತ್ಯಾಸವಿದ್ದರೂ ನೋಂದಣಿ ತಿರಸ್ಕಾರ
ಮೊಬೈಲ್ ಆ್ಯಪ್ ಮೂಲಕ ಇಕೆವೈಸಿ ಮಾಡುವ ವಿಡಿಯೋ
ಮಾಹಿತಿ ಹಂಚಿಕೊಂಡ ಸಚಿವ
ಮೊಬೈಲ್ನಲ್ಲೇ ಅನ್ನ ಸೇವೆ ಆ್ಯಪ್ ಮೂಲಕ ಇ-ಕೈವೈಸಿ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಆಹಾರ ಸಚಿವ ರಿಜ್ವಾನ್ ಅರ್ಷದ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಗ್ರಾಹಕರ e-KYC ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ವೇಗ ಹಾಗೂ ತೊಂದರೆರಹಿತವಾಗಿಸಲು ‘ಅನ್ನ ಸೇವೆ ಆ್ಯಪ್’ ಅನ್ನು ಪರಿಚಯಿಸಲಾಗಿದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಸುಲಭವಾಗಿ e-KYC ಪೂರ್ಣಗೊಳಿಸಬಹುದು.
ಗ್ರಾಹಕರ e-KYC ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ವೇಗ ಹಾಗೂ ತೊಂದರೆರಹಿತವಾಗಿಸಲು ‘ಅನ್ನ ಸೇವೆ ಆ್ಯಪ್’ ಅನ್ನು ಪರಿಚಯಿಸಲಾಗಿದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಸುಲಭವಾಗಿ e-KYC ಪೂರ್ಣಗೊಳಿಸಬಹುದು.
ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ Face Authentication ಸೌಲಭ್ಯವೂ ಲಭ್ಯವಿದೆ. ಜನರ ಅಮೂಲ್ಯ ಸಮಯ ಮತ್ತು ಶ್ರಮವನ್ನು ಉಳಿಸುವ ಉದ್ದೇಶದಿಂದ ಈ ಡಿಜಿಟಲ್ ಸೇವೆಯನ್ನು ಜಾರಿಗೊಳಿಸಲಾಗಿದೆ.
ಅನ್ನ ಸೇವೆ ಆ್ಯಪ್ ಮೂಲಕ e-KYC ಪೂರ್ಣಗೊಳಿಸುವ ಸರಳ ಹಂತಗಳನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ. ಸೂಚನೆಗಳನ್ನು ಪಾಲಿಸಿ, Face Authentication ಪೂರ್ಣಗೊಳಿಸಿ, ಮನೆಯಲ್ಲೇ ಸುಲಭವಾಗಿ e-KYC ಮುಗಿಸಿ.
ಸರಳ. ಸುಲಭ. ಜನಸ್ನೇಹಿ.
#EKYC #Annaseveapp
— Rizwan Arshad (@ArshadRizwan) October 14, 2026
ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ Face Authentication ಸೌಲಭ್ಯವೂ ಲಭ್ಯವಿದೆ. ಜನರ ಅಮೂಲ್ಯ ಸಮಯ ಮತ್ತು ಶ್ರಮವನ್ನು ಉಳಿಸುವ ಉದ್ದೇಶದಿಂದ ಈ ಡಿಜಿಟಲ್ ಸೇವೆಯನ್ನು ಜಾರಿಗೊಳಿಸಲಾಗಿದೆ. ಅನ್ನ ಸೇವೆ ಆ್ಯಪ್ ಮೂಲಕ e-KYC ಪೂರ್ಣಗೊಳಿಸುವ ಸರಳ ಹಂತಗಳನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ. ಸೂಚನೆಗಳನ್ನು ಪಾಲಿಸಿ, Face Authentication ಪೂರ್ಣಗೊಳಿಸಿ, ಮನೆಯಲ್ಲೇ ಸುಲಭವಾಗಿ e-KYC ಮುಗಿಸಿ ಎಂದು ತಿಳಿಸಿದ್ದಾರೆ.
ಮೊಬೈಲ್ನಲ್ಲೇ ಇ ಕೆವೈಸಿ ಮಾಡುವ ವಿಧಾನ ಹೀಗಿದೆ
- ಅನ್ನ ಸೇವೆ ಆಪ್ ತೆರೆದ ಕೂಡಲೇ ಲಾಗಿನ್ ಪ್ರಕಾರವನ್ನು ಆಯ್ಕೆ ಮಾಡಬೇಕು. ಸ್ವಯಂ/ ನಾಗರಿಕ ಅಥವಾ ಅಧಿಕಾರಿ ಎಂಬ ಆಯ್ಕೆ ಇರುತ್ತದೆ. ಸ್ವಯಂ/ನಾಗರಿಕ ಆಯ್ಕೆ ಮಾಡಿಕೊಳ್ಳಬೇಕು.
- ಕೆಳಗಡೆ ಜಿಲ್ಲೆಗಳ ಪಟ್ಟಿ ಲಭ್ಯವಿದ್ದು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.
- ಆನಂತರ ಪಡಿತರ ಚೀಟಿ ಸಂಖ್ಯೆ (ರೇಷನ್ ಕಾರ್ಡ್ ನಂಬರ್) ಹಾಕಬೇಕು.
- ಅದರ ಕೆಳಭಾಗದಲ್ಲಿ ರೇಷನ್ ಕಾರ್ಡ್ಗೆ ಲಿಂಕ್ ಆದ ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆಯಬೇಕು.
- ಓಟಿಪಿ ಹಾಕಿದ ಕೂಡಲೇ ಹೊಸ ಪೇಜ್ ತೆರೆದುಕೊಂಡು ಕುಟುಂಬ ಸದಸ್ಯರು ವಿವರ ಲಭ್ಯವಾಗುತ್ತದೆ.
- ಕುಟುಂಬ ಸದಸ್ಯರ ಪೈಕಿ ಯಾರದ್ದು ಇ ಕೆವೈಸಿ ಮಾಡಬೇಕು ಅವರನ್ನು ಆಯ್ಕೆ ಮಾಡಿದರೆ ಸಹಾಯಕ ಆಪ್ಗಳ ಮೂಲಕ ಫೇಸ್ರೀಡ್ ಮಾಡಬೇಕು.
- ಕೊನೆಗೆ ಇ ಕೆವೈಸಿ ಯಶಸ್ವಿ ಎಂಬ ಸಂದೇಶ ಬರುತ್ತದೆ. ಆಗ ನಿಮ್ಮ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಂತೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Wed, 14 October 26




