ಬೆಂಗಳೂರು: ಕೇವಲ 20 ರೂಗಾಗಿ ಬಾರ್​ ಕ್ಯಾಷಿಯರ್​ಗೆ ಚಾಕು ಇರಿದ ಕಿಡಿಗೇಡಿಗಳು

ಬಾರ್ ಕ್ಯಾಷಿಯರ್ 20 ರೂಪಾಯಿ ಹೆಚ್ಚಿಗೆ ಬಿಲ್ ಹಾಕಿದ ಎಂಬ ಕಾರಣಕ್ಕೆ ಚಾಕು, ಬಾಟಲ್​ನಿಂದ ಕ್ಯಾಷಿಯರ್ ರಂಜಿತ್ ಎಂಬಾತನ ಮೇಲೆ ಮೂವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ಕೇವಲ 20 ರೂಗಾಗಿ ಬಾರ್​ ಕ್ಯಾಷಿಯರ್​ಗೆ ಚಾಕು ಇರಿದ ಕಿಡಿಗೇಡಿಗಳು
ಜಯಶ್ರೀ ಬಾರ್
Edited By:

Updated on: Oct 07, 2024 | 8:59 AM

ಬೆಂಗಳೂರು, ಅ.07: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಕ್ಷುಲ್ಲಕ ಕಾರಣಕ್ಕೆ ಡೆಡ್ಲಿ ಮರ್ಡರ್ ಅಟ್ಯಾಕ್ ನಡೆದಿದೆ. ಕೇವಲ 20ರೂಪಾಯಿಗೆ ಕಿಡಿಗೇಡಿಗಳು ಚಾಕು ಇರಿದಿದ್ದಾರೆ. ವಿದ್ಯಾರಣ್ಯಪುರದ ಬಾರ್​ನಲ್ಲಿ ಘಟನೆ ನಡೆದಿದ್ದು ಬಾರ್ ಕ್ಯಾಷಿಯರ್​ಗೆ ಚಾಕು ಇರಿದ ಸಂಬಂಧ ಇಬ್ಬರನ್ನು ಪೊಲೀಸರು (Vidyaranyapura Police Station) ಬಂಧಿಸಿದ್ದಾರೆ. ಚೇತನ್ ಹಾಗು ಕಾರ್ತಿಕ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ವಿದ್ಯಾರಣ್ಯಪುರ ನರಸೀಪುರದ ಜಯಶ್ರೀ ಬಾರ್​ನಲ್ಲಿ ಕುಡಿಯಲು ಬಂದಿದ್ದ ಚೇತನ್, ಕಾರ್ತಿಕ್ ಹಾಗೂ ಮತ್ತೋರ್ವ ವ್ಯಕ್ತಿ ಸೇರಿ ಮೂವರು ಗಲಾಟೆ ಮಾಡಿಕೊಂಡಿದ್ದಾರೆ. ಬಾರ್ ಕ್ಯಾಷಿಯರ್ 20 ರೂಪಾಯಿ ಹೆಚ್ಚಿಗೆ ಬಿಲ್ ಹಾಕಿದ ಎಂಬ ಕಾರಣಕ್ಕೆ ಚಾಕು, ಬಾಟಲ್​ನಿಂದ ಕ್ಯಾಷಿಯರ್ ರಂಜಿತ್ ಎಂಬಾತನ ಮೇಲೆ ಮೂವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಾಕು ಇರಿತವೂ ಆಗಿದೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಮೂರು ಜನ ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಬೆಂಗಳೂರು; ಕಣ್ಣು ಬಿಟ್ಟಲೆಲ್ಲ ಗುಂಡಿಗಳು, ವಾಹನ ಸವಾರರೇ ಈ ರಸ್ತೆಯಲ್ಲಿ ಓಡಾಡುವಾಗ ಇರಲಿ ಎಚ್ಚರ

ತಳ್ಳಾಟ-ನೂಕಾಟ, ಯುವಕರಿಗೆ ಲಾಠಿ ರುಚಿ

ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ತಳ್ಳಾಟ-ನೂಕಾಟವಾಗಿದ್ದರಿಂದ ಪೊಲೀಸರು ಲಾಠಿ ಬೀಸಿದ ಘಟನೆ ನಡೆದಿದೆ. ಉತ್ತನಹಳ್ಳಿಯಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌ ಹಾಡು ಹಾಡುತ್ತಿದ್ದರು. ಈ ವೇಳೆ ವಿಐಪಿ ಗೇಟ್‌ ಬಳಿ ಯುವಕರು ತಮ್ಮನ್ನ ಒಳಗೆ ಬಿಡುವಂತೆ ಪೊಲೀಸರ ಜತೆಗೆ ವಾಗ್ವಾದ ಮಾಡಿದರು. ಆಗ ಪೊಲೀಸರು ಮತ್ತು ಯುವಕರ ಮಧ್ಯೆ ತಳ್ಳಾಟ, ನೂಕಾಟ ನಡೆಯಿತು. ಉದ್ರಿಕ್ತ ಯುವಕರ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಬಸ್‌ ಮೇಲೆ ಏರಿದ ಚಿರತೆ.. ಪ್ರವಾಸಿಗರಿಗೆ ಆತಂಕ

ಸಫಾರಿಗೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರಿದ್ದ ಮಿನಿ ಬಸ್ ಮೇಲೆ ಚಿರತೆ ಏರಲು ಪ್ರಯತ್ನಿಸಿರುವ ಘಟನೆ
ಬೆಂಗಳೂರು ಹೊರ ವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಚಿರತೆ ಕಂಡು ಬಸ್‌ನಲ್ಲಿದ್ದ ಪ್ರವಾಸಿಗರು ಆತಂಕಗೊಂಡು ಕಿರುಚಾಡಿದಾರೆ. ಆದರೆ, ಕೆಲವರು ತೀರ ಹತ್ತಿರದಲ್ಲಿ ಚಿರತೆ ಕಂಡು ಖುಷಿಪಟ್ಟಿದಾರೆ. ಕಿಟಕಿಯಲ್ಲಿ ಪ್ರವಾಸಿಗರನ್ನು ನೋಡಿ ಚಿರತೆ ಗುರ್ ಎಂದಿದೆ. ಆದರೆ, ಚಾಲಕ ಬಸ್‌ನ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಚಿರತೆ ಕೆಳಗೆ ಹಾರಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ