ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ; ಮನೆಗಳ ಬಳಿ ನಿಲ್ಲಿಸಿದ್ದ ಕಾರುಗಳ ಮೇಲೆ ಕಾಲ್ಲು ತೂರಿದ ಕಿಡಿಗೇಡಿಗಳು
ಮನೆಮುಂದೆ ನಿಲ್ಲಿಸಿದ್ದ 6ಕ್ಕೂ ಹೆಚ್ಚು ಕಾರುಗಳ ಗ್ಲಾಸ್ ಪುಡಿಪುಡಿಯಾಗಿದೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ತಡರಾತ್ರಿ 2.50ರ ಸುಮಾರಿಗೆ ಕಾರಿನ ಗ್ಲಾಸ್ಗೆ ಕಲ್ಲುತೂರಿ ಕೆಲ ಕಿಡಿಗೇಡಿಗಳು ಪುಂಡಾಟ ಮೆರೆದಿದ್ದಾರೆ. ಮನೆಮುಂದೆ ನಿಲ್ಲಿಸಿದ್ದ 6ಕ್ಕೂ ಹೆಚ್ಚು ಕಾರುಗಳ ಗ್ಲಾಸ್ ಪುಡಿಪುಡಿಯಾಗಿದೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಗಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿದ ಪೊಲೀಸ್
ಬೆಂಗಳೂರು: ಮನೆಗಳ್ಳತನ ಮಾಡ್ತಿದ್ದ ಆರೋಪಿ ಮುದಾಸಿರ್(32)ನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 30ರಂದು ಯಶವಂತಪುರ ವ್ಯಾಪ್ತಿಯಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ. ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮುದಾಸಿರ್ ವಿರುದ್ಧ ಬೆಂ.ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ಹಲವೆಡೆ 40ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು 6 ಲಕ್ಷ ನಗದು, ಚಿನ್ನದ ಬಿಸ್ಕತ್ ದರೋಡೆ ಮಾಡಿದ ಗ್ಯಾಂಗ್
ಆರೋಪಿ ಮುದಾಸಿರ್, ತನ್ನ ಸಹಚರರನ್ನ ಕಳ್ಳತನಕ್ಕೆ ಕರೆದೊಯ್ದರೆ ಸಿಕ್ಕಿಬೀಳುವ ಹಿನ್ನಲೆ ಏಕಾಂಗಿಯಾಗಿ ಮೊದಲ ಮಹಡಿ ಮತ್ತು ಎರಡನೇ ಮಹಡಿಗಳನ್ನೇ ಟಾರ್ಗೇಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಏರಿಯಾ ರೌಂಡಪ್ ಮಾಡಿ ಬೀಗ ಹಾಕಿದ್ದ ಮನೆಗಳಿಗೆ ಸ್ಕೆಚ್ ಹಾಕ್ತಿದ್ದ. ಕಾಲಿನಿಂದ ಬಲವಾಗಿ ಹೊಡೆದು ಡೋರ್ ಮುರಿದು ಮನೆ ಒಳಗೆ ನುಕ್ತಿದ್ದ. ಇಡೀ ಮನೆ ಜಾಲಾಡಿ ಬೆಲೆಬಾಳುವ ಚಿನ್ನಾಭರಣ, ನಗದು ಹಣ ಎಗರಿಸಿ ಎಸ್ಕೇಪ್ ಆಗುತ್ತಿದ್ದ. ಸದ್ಯ ಮುದಾಸಿರ್ ಮನೆ ಕಳವು ಮಾಡುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಅದರ ಸಹಾಯದಿಂದ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಆರೋಪಿ ಮುದಾಸಿರ್ ಕ್ಷಣಾರ್ಧದಲ್ಲಿ ಮನೆ ಡೋರ್ ಮುಗಿದು ಚೇರ್ ಬಳಸಿ ಜಂಪಿಂಗ್ ಮಾಡುತ್ತಿದ್ದ. ಕಾಲನಿಂದ ಬಲವಾಗಿ ಒದ್ದು ಡೋರ್ ಒಡೆಯುವ ಕಲೆ ಕಲಿತಿದ್ದ. ಮುದಾಸಿರ್ ಜನವರಿ 30 ರಂದು ಮನೆ ಕಳವು ಮಾಡಿದ್ದ. ಮನೆ ಕಳವು ಹಿನ್ನಲೆ ಯಶವಂತಪುರ ಪೊಲೀಸರು ಕೇಸ್ ದಾಖಲಿಸಿದ್ದರು. ಸಿಸಿ ಕ್ಯಾಮಾರ ದೃಶ್ಯಾವಳಿ ಆಧರಿಸಿ ಆರೋಪಿ ಮುದಾಸಿರ್ ಬಂಧಿಸಿ ವಿಚಾರಣೆ ನಡೆಸಿದಾಗ ವಿವಿಧ ಜಿಲ್ಲೆಗಳಲ್ಲಿ ಮನೆಗಳ್ಳತನದ ಅಸಲಿಯತ್ತು ಬಯಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ