ಬೆಂಗಳೂರು: ಮಲ್ಲೇಶ್ವರಂನ ಗಂಗಮ್ಮನ ದೇವಾಲಯದಲ್ಲಿ ಋಷಿ ಕುಮಾರ ಸ್ವಾಮಿಯ(Rishi Kumara Swamiji) ಮೇಲೆ ದಾಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಋಷಿ ಕುಮಾರ ಸ್ವಾಮಿಜಿಗೆ ಕಪ್ಪು ಮಸಿ ಬಳೆದು ಕರ್ನಾಟಕ ರಕ್ಷಣಾ ವೇದಿಕೆ ವಿಕೃತಿ ಮೆರೆದಿದ್ದಾರೆ. ನಾಡಪ್ರಭು ಕೆಂಪೇಗೌಡ, ಕುವೆಂಪುರವರ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಋಷಿ ಕುಮಾರ ಸ್ವಾಮಿಯ ಕಾಲಿಗೆ ಪೆಟ್ಟು ಬಿದ್ದಿದೆ. ಋಷಿ ಕುಮಾರ ಸ್ವಾಮಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಕಪ್ಪು ಮಸಿ ಬಳೆದು ಕೃತ್ಯ ಎಸಗಿದ್ದಾರೆ. ಸದ್ಯ ಕಾಳಿ ಸ್ವಾಮಿ ಖಾಸಗಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಿಮಗೆ ಧಮ್ ಇದ್ರೆ ನೀವು ಗಂಡಸರಾದ್ರೆ ನ್ಯಾಯಾಲಯದಲ್ಲಿ ಸಾಬೀತು ಮಾಡಿ. ನಾನು ಇದಕ್ಕೆಲ್ಲ ಹೆದರಲ್ಲವೆಂದು ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆಗೆ ಕಾಳಿ ಸ್ವಾಮಿ ಓಪನ್ ಚ್ಯಾಲೆಂಜ್ ಕೊಟ್ಟಿದ್ದಾರೆ.
ರಾಷ್ಟ್ರ ಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ಅವಮಾನಿಸಿದ ಆರೋಪ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡು ರಸ್ತೆಯಲ್ಲಿ ಋಷಿಕುಮಾರ ಸ್ವಾಮಿ ಮುಖಕ್ಕೆ ಮಸಿ ಬಳಿದಿದ್ದಾರೆ. ನಾಡಗೀತೆಯನ್ನ ಅನುಸರಿಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆಂದು ಕಾಳಿ ಸ್ವಾಮೀಜಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸೇಡು ತೀರಿಸಿಕೊಂಡಿದೆ. ನೂರಾರು ಕಾರ್ಯಕರ್ತರು ಸೇರಿ ಕಾಳಿ ಸ್ವಾಮಿ ಮುಖಕ್ಕೆ ಮಸಿ ಬಳಿಯುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮುಖಕ್ಕೆ ಮಸಿ ಬಳಿದಿದ್ದಕ್ಕೆ ಕಾಳಿ ಸ್ವಾಮಿ ಸ್ಪಷ್ಟನೆ
ಕಾಳಿಕಾ ಸೇನೆಯ ವತಿಯಿಂದ ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಇತ್ತು. ಪೂಜೆ ಬಹಳ ಚೆನ್ನಾಗಿ ಆಯ್ತು, ನನಗೆ ಬಹಳ ಖುಷಿ ಅಯ್ತು. ಪೂಜೆ ಮುಗಿಸಿ ಹೊರ ಬರುವ ವೇಳೆ ಕೆಲವರು ಬಂದು ನೀವು ಕುವೆಂಪು ಅವರನ್ನು ಮತ್ತು ಕನ್ನಡಪಡೆಗಳನ್ನು ನಿಂದಿಸಿದ್ದೀರಾ ಎಂದು ಸೃಷ್ಟಿ ಮಾಡಿಕೊಂಡು ನನ್ನ ಬಳಿ ಜಗಳ ಮಾಡಿದ್ರು. ಕುವೆಂಪು ಅವರನ್ನು ಕನ್ನಡಪಡೆಗಳನ್ನು ನಾನು ಯಾವತ್ತಿಗೂ ನಿಂದಿಸಿಲ್ಲ. ನಿಮ್ಮ ಬಳಿ ದಾಖಲೆಗಳಿದ್ರೆ ಅದನ್ನು ತರಬೇಕು ಅದನ್ನು ಬಿಟ್ಟು ಕಪ್ಪು ಮಸಿ ಬಳಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಬಹಳ ಖುಷಿ ಆಯ್ತು. ನೀವು ಮಸಿ ಬಳಿಯುವ ಮೂಲಕ ಕಾಳಿಯ ರುದ್ರಾವತಾರ ತೋರಿಸಿದ್ದೀರಾ. ಕಾಳಿ ಇರೋದೆ ಕಪ್ಪು ಅದನ್ನು ನೀವು ನನಗೆ ಹಾಕಿದ್ದೀರಾ ಅಷ್ಟೇ. ಇದನ್ನು ನಾನು ಮಸಿ ಎಂದು ತಿಳಿದುಕೊಳ್ಳುತ್ತಿಲ್ಲ ಇದನ್ನು ಒಂದು ಮೆಟ್ಟಿಲು ಎಂದು ತಿಳಿದುಕೊಳ್ಳುತ್ತೇನೆ. ನಮ್ಮ ಹೋರಾಟದ ದಿಕ್ಕು ವೇಗವಾಗಿ ನುಗ್ಗಿದ್ದರಿಂದ ನಿಮೆಗೆಲ್ಲ ಆತಂಕವಾಗಿದೆ. ಖುಷಿ ಆಗಿದ್ಯ ನಿಮಗೆಲ್ಲ..ಮಸಿ ಬಳಿದವ್ರು ಯಾರೋ ಹಿಂದೂಗಳಂತೆ. ಈಗ ಖುಷಿ ಯಾರಿಗೆ ಆಗಿದೆ ಮುಸ್ಲಿಮರಿಗೆ ಅಲ್ವ. ಮಸಿ ಹಾಕಿರೋರು ಖುಷಿ ಪಡಬೇಡಿ. ಇದರಿಂದ ನನಗೆ ಖುಷಿ ಆಗಿದೆ. ನೀವು ನನ್ನ ಮೇಲೆ ಮಸಿ ಹಾಕ್ತಿದ್ದೀರಾ ಅಂದರೆ ನಾನು ನಿಮ್ಮನ್ಮು ತಲುಪಿದ್ದೀನಿ ನಾನು ನಿಮ್ಮನ್ನು ಮುಟ್ಟಿದ್ದೀನಿ ಎಂದು ಅರ್ಥ ಅಲ್ವ? ಕೈಯಲ್ಲಿ ಆಗದೆ ಮಸಿ ಬಳಿಯುತ್ತೀರಾ? ನಿಮಗೆ ಧಮ್ ಇದ್ರೆ ನಾನು ಕುವೆಂಪು ಅವರನ್ನು ಕನ್ನಡಪಡೆಗಳನ್ನು ನಿಂದಿಸಿದನ್ನು ಕೋರ್ಟ್ ನಲ್ಲಿ ಸಾಬೀತು ಮಾಡಿ ಎಂದಿದ್ದಾರೆ.
Published On - 9:03 pm, Thu, 12 May 22