ಲೌಡ್ ಸ್ಪೀಕರ್ ಕುರಿತ ಸರ್ಕಾರದ ಮಾರ್ಗಸೂಚಿಗೆ ಹಿಂದೂಪರ ಸಂಘಟನೆ ಅಸಮಾಧಾನ: ಸರ್ಕಾರದ ‌ಮಾರ್ಗಸೂಚಿ ಸ್ಪಷ್ಟವಾಗಿಲ್ಲ ಎಂದು ಆರೋಪ

ಸರ್ಕಾರದ ಮುಂದೆ ಹಿಂದೂ ಜನ ಜಾಗೃತಿ ಸಮಿತಿ 3 ಪ್ರಶ್ನೆಗಳನ್ನಿಟ್ಟಿದೆ. ಸರ್ಕಾರವು ಧ್ವನಿ‌ವರ್ಧಕದ ಅನುಮತಿ ನೀಡಲು ಒಂದು ಸಮಿತಿಯನ್ನು ಮಾಡಿದೆ. 15 ದಿನದಲ್ಲಿ ಅನುಮತಿ ಪಡೆಯಲು ಹೇಳಿದೆ.

ಲೌಡ್ ಸ್ಪೀಕರ್ ಕುರಿತ ಸರ್ಕಾರದ ಮಾರ್ಗಸೂಚಿಗೆ ಹಿಂದೂಪರ ಸಂಘಟನೆ ಅಸಮಾಧಾನ: ಸರ್ಕಾರದ ‌ಮಾರ್ಗಸೂಚಿ ಸ್ಪಷ್ಟವಾಗಿಲ್ಲ ಎಂದು ಆರೋಪ
ಪ್ರಾತಿನಿಧಿಕ ಚಿತ್ರImage Credit source: publictv.in
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 13, 2022 | 8:02 AM

ಬೆಂಗಳೂರು: ಮಸೀದಿಗಳಲ್ಲಿ ಸೌಡ್​ ಸ್ಪೀಕರ್ ಬಳಸಿ ಆಜಾನ್ (Azan) ಕೂಗುವ ಪದ್ಧತಿಯನ್ನು ಶ್ರೀರಾಮಸೇನೆಯು ವಿರೋಧಿಸುತ್ತ ಬಂದಿದ್ದು, ಅದರಂತೆಯೇ ಮೇ 9ರಂದು ಮಸೀದಿಗಳ ಸಮೀಪದ ದೇಗುಲಗಳಲ್ಲಿ ಹನುಮಾನ್ ಚಾಲೀಸ ಮತ್ತು ಭಜನೆಗಳನ್ನು ಲೌಡ್​ಸ್ಪೀಕರ್​ಗಳಲ್ಲಿ ಮೊಳಗಿಸಲಾಯಿತು. ಸದ್ಯ ಲೌಡ್ ಸ್ಪೀಕರ್ ಕುರಿತ ಸರ್ಕಾರದ ಮಾರ್ಗಸೂಚಿಗೆ ಹಿಂದೂಪರ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದ್ದು, ಆಜಾನ್ ವಿವಾದ ಇನ್ನೂ ಮುಗಿಯೋದಿಲ್ವಾ ಎನ್ನುವ ಪ್ರಶ್ನೆ ಉಂಟಾಗಿದೆ. ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಮೋಹನ್ ಗೌಡ ಸರ್ಕಾರದ ‌ಮಾರ್ಗಸೂಚಿ ಸ್ಪಷ್ಟವಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ಸರ್ಕಾರದ ಮುಂದೆ ಹಿಂದೂ ಜನ ಜಾಗೃತಿ ಸಮಿತಿ 3 ಪ್ರಶ್ನೆಗಳನ್ನಿಟ್ಟಿದೆ. ಸರ್ಕಾರವು ಧ್ವನಿ‌ವರ್ಧಕದ ಅನುಮತಿ ನೀಡಲು ಒಂದು ಸಮಿತಿಯನ್ನು ಮಾಡಿದೆ. 15 ದಿನದಲ್ಲಿ ಅನುಮತಿ ಪಡೆಯಲು ಹೇಳಿದೆ.

ಆದರೆ ಸುಪ್ರೀಂಕೋರ್ಟ್ ಆದೇಶ & ಶಬ್ದ ಮಾಲಿನ್ಯ ತಡೆ ಕಾಯ್ದೆಯ ಪ್ರಕಾರ ಧಾರ್ಮಿಕ ಸ್ಥಳಗಳಿಗೆ ವರ್ಷವಿಡೀ ಧ್ವನಿವರ್ಧಕ ಬಳಸಲು ಅನುಮತಿ ನೀಡಲು ಅವಕಾಶ & ಅಧಿಕಾರ ಇದ್ಯಾ ಎಂದಿದ್ದಾರೆ. ಒಮ್ಮೆ ಅವಕಾಶ ನೀಡಿದ್ರೆ ಅದರ‌ ಶಬ್ದದ ಡೆಸಿಬಲ್ ಹೇಗೆ ಕಂಟ್ರೋಲ್ ಮಾಡ್ತೀವಿ? ಆಜಾನ್ ನಂತರ ಮಾಡುವ ಪ್ರವಚನಗಳಿಗೂ ಇದು ಅನ್ವಯ ಆಗುತ್ತಾ ಎಂಬ 3 ಪ್ರಶ್ನೆ ಎತ್ತಿರುವ ಹಿಂದೂಪರ ಸಂಘಟನೆ ಸಾರ್ವಜನಿಕವಾಗಿ ಬಳಸುವ ಲೌಡ್ ಸ್ಪೀಕರ್​ಗೆ 15 ದಿನಗಳಿಗೆ ಮಾತ್ರ ಅನುಮತಿ ನೀಡಬಹುದು. ಸರ್ಕಾರದ ಹೊಸ ಮಾರ್ಗಸೂಚಿ ಮತ್ತಷ್ಟು ಗೊಂದಲ ಉಂಟು ಮಾಡಿದೆ ಎಂದು ಹಿಂದೂಪರ ಸಂಘಟನೆ ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರ ಹೊರಡಿಸಿರೋ ಮಾರ್ಗಸೂಚಿಯಲ್ಲಿ ಏನೆಲ್ಲಾ ಅಂಶಗಳಿವೆ? – 15 ದಿನದೊಳಗೆ ಧ್ವನಿ ವರ್ಧಕಗಳಿಗೆ ಅನುಮತಿ ಪಡೆಯುವುದು ಕಡ್ಡಾಯ. – ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಇದು ಅನ್ವಯ. – ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ರಾತ್ರಿ 10 ಯಿಂದ ಬೆಳಗಿನ ಜಾವ 6 ಗಂಟೆವರೆಗೆ ನಿರ್ದಿಷ್ಟ ಡೆಸಿಬಲ್ ನಿಗದಿ. – ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಡಿಸೆಬಲ್ ಮಿತಿ ಇರಬೇಕು. – ಡಿಎಸ್​ಪಿ ದರ್ಜೆಯಿಂದ ಮೇಲ್ಪಟ್ಟ ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಅಧಿಕಾರ. – ಧ್ವನಿ ವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾದ್ರೆ ಕ್ರಮಕೈಗೊಳ್ಳಲು ಅಧಿಕಾರ. – ಸಾರ್ವಜನಿಕ ಸಮಾರಂಭ ಕಾರ್ಯಕ್ರಮ ನಡೆಸುವರೆಗೂ ಅನುಮತಿ ಕಡ್ಡಾಯ.

ಲೌಡ್​ಸ್ಪೀಕರ್​ ಬಳಕೆ ಬಗ್ಗೆ ಕಮಲ್ ಪಂತ್ ಹೇಳಿಕೆ

ಲೌಡ್​ಸ್ಪೀಕರ್​ ಬಳಕೆಗೆ ಆದೇಶ ಪಾಲನೆಯಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Panth) ಹೇಳಿಕೆ ನೀಡಿದ್ದಾರೆ. ಲೌಡ್​ಸ್ಪೀಕರ್ ಬಳಕೆಗೆ ಯಾವುದೇ ಗೊಂದಲ, ತಕರಾರು ಇಲ್ಲ ಎಂದಿರುವ ಕಮಲ್ ಪಂತ್, ಬೆಂಗಳೂರಿನಲ್ಲಿ 2002ರ ಸರ್ಕಾರದ ಆದೇಶ ಪಾಲನೆಯಾಗುತ್ತಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಲೌಡ್​​ಸ್ಪೀಕರ್​ಗೆ ಅವಕಾಶ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೆಲವೊಮ್ಮೆ ಅವಕಾಶ ಇದೆ. ಧ್ವನಿವರ್ಧಕ ಬಳಸುವವರು ಡೆಸಿಬಲ್ ನಿಯಮ ಪಾಲಿಸಬೇಕು. ಲೌಡ್​ಸ್ಪೀಕರ್​ಗೆ 15 ದಿನದೊಳಗೆ ಅನುಮತಿ ಪಡೆಯಬೇಕು. ಸಮಿತಿಯವರು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್