ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: 16 ದಿನಗಳ ನಿರಂತರ ಹೋರಾಟದಲ್ಲಿ ಗೆದ್ದು ಬಂದ ಯುವತಿ, ವಾರ್ಡ್​ಗೆ ಸ್ಥಳಾಂತರ

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: 16 ದಿನಗಳ ನಿರಂತರ ಹೋರಾಟದಲ್ಲಿ ಗೆದ್ದು ಬಂದ ಯುವತಿ, ವಾರ್ಡ್​ಗೆ ಸ್ಥಳಾಂತರ
ಸಂತ್ರಸ್ತ ಯುವತಿ

ಶೇಕಡಾ 10ರಷ್ಟು ಮಾತ್ರ ಚರ್ಮ ಜೋಡಣೆ ಸರ್ಜರಿ ಬಾಕಿಯಿದೆ. ಏಪ್ರಿಲ್ 28ರಂದು ಯುವತಿ ಮೇಲೆ ನಾಗೇಶ್ ಆ್ಯಸಿಡ್ ಎರಚಿದ್ದ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ಮುಂದುವರೆದಿದ್ದು, ಯುವತಿ ಚೇತರಿಕೆಯಿಂದ ಕುಟುಂಬ ಸದಸ್ಯರು ನಿಟ್ಟುಸಿರುಬಿಟ್ಟಿದ್ದಾರೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 13, 2022 | 10:04 AM

ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ (Acid) ದಾಳಿ ಪ್ರಕರಣ ಇಡೀ ಸಿಲಿಕಾನ್ ಸಿಟಿಯನ್ನ ಬೆಚ್ಚಿ ಬೀಳುವ ಹಾಗೆ ಮಾಡಿತ್ತು. ಸದ್ಯ 16 ದಿನಗಳ ನಿರಂತರ ಹೋರಾಟದಲ್ಲಿ ಯುವತಿ ಗೆದ್ದು ಬಂದಿದ್ದಾಳೆ. ಸಂತ್ರಸ್ತೆ ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆ ವಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ. ಸ್ಪೆಷಲ್ ಬರ್ನಿಂಗ್ ವಾರ್ಡ್​​ಗೆ ಸ್ಥಳಾಂತರ ಮಾಡಿರುವ ವೈದ್ಯರು, ಬರೋಬ್ಬರಿ 16 ದಿನಗಳ ಕಾಲ ಐಸಿಯುನಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗಿದೆ. ಇನ್ಫೆಕ್ಷನ್ ಆಗದಂತೆ ನಿಗಾವಹಿಸಿದ್ದ ಸೇಂಟ್​ಜಾನ್ಸ್​ ಆಸ್ಪತ್ರೆ ವೈದ್ಯರು, ನಿನ್ನೆ ಸ್ಪೆಷಲ್​ ಬರ್ನಿಂಗ್ ವಾರ್ಡ್​​ಗೆ ಸ್ಥಳಾಂತರ ಮಾಡಿದ್ದು, ಸದ್ಯ ಕುಟುಂಬಸ್ಥರ ಜೊತೆ ಸಂತ್ರಸ್ತ ಯುವತಿ ಮಾತನಾಡುತ್ತಿದ್ದಳೆ. ಜೊತೆಗೆ ಅನ್ನ ಮತ್ತು ಮೃದು ಆಹಾರ ಸೇವಿಸುತ್ತಿದ್ದಾಳೆ. ಡ್ರೈಫ್ರೂಟ್ಸ್ ಪುಡಿ ಮಾಡಿ ಬೆರೆಸಿ ತಿನ್ನಿಸುವಂತೆ ವೈದ್ಯರ ಸಲಹೆ ನೀಡಿದ್ದು, ಶೇಕಡಾ 10ರಷ್ಟು ಮಾತ್ರ ಚರ್ಮ ಜೋಡಣೆ ಸರ್ಜರಿ ಬಾಕಿಯಿದೆ. ಏಪ್ರಿಲ್ 28ರಂದು ಯುವತಿ ಮೇಲೆ ನಾಗೇಶ್ ಆ್ಯಸಿಡ್ ಎರಚಿದ್ದ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ಮುಂದುವರೆದಿದ್ದು, ಯುವತಿ ಚೇತರಿಕೆಯಿಂದ ಕುಟುಂಬ ಸದಸ್ಯರು ನಿಟ್ಟುಸಿರುಬಿಟ್ಟಿದ್ದಾರೆ.

ಬೇರೆ ಬೇರೆ ಯುವತಿಯರಿಗೂ ಪ್ರೀತಿಸಲು ಪೀಡಿಸುತ್ತಿದ್ದ ಆರೋಪಿ ನಾಗೇಶ್

ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಕೇಸ್ಗೆ ಸಂಬಂಧಿಸಿ ಪೊಲೀಸ್ ತನಿಖೆಯಲ್ಲಿ ಆರೋಪಿ ನಾಗೇಶ್ ಬಗೆಗಿನ ಭಯಾನಕ ಸತ್ಯ ಬಯಲಾಗಿದೆ. ಈ ಹಿಂದೆ ಕೂಡ ನಾಗೇಶ್ ಬೇರೆ ಬೇರೆ ಯುವತಿಯರನ್ನ ಪ್ರೀತಿಸುವಂತೆ ಕಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಗೇಶ್ ಮೂಲತಃ ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂ ನಿವಾಸಿ. 7 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಯುವತಿ ದೊಡ್ಡಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ. ಪ್ರೀತಿ ಮಾಡು ಅಂತಾ ಯುವತಿಯ ಹಿಂದೆ ಬಿದ್ದಿದ್ದ. ಮನೆ ಖಾಲಿ ಮಾಡಿಸಿದ ಬಳಿಕ ತಮ್ಮ ಸ್ವಂತ ಊರು ಕೊಡಿಯಾಲಂಗೆ ಹೋಗಿದ್ದ.

ಎರಡು ವರ್ಷದ ಹಿಂದೆ ಮತ್ತೋರ್ವ ಯುವತಿಗೂ ಹೀಗೆ ಕಾಟ ಕೊಟ್ಟಿದ್ದನಂತೆ. ಕೊಡಿಯಾಲಂನಲ್ಲಿರುವ ತಮ್ಮ ಮನೆ ಪಕ್ಕದಲ್ಲಿದ್ದ ಯುವತಿಯನ್ನು ಪೀಡಿಸುತ್ತಿದ್ದನಂತೆ. ಆತನ ಕಾಟ ತಾಳಲಾರದೇ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಳು. ಯುವತಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದು ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು. ನಂತರ ಆ ಯುವತಿಯನ್ನ ಬೇರೆ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಮತ್ತೆ ಕೊಡಿಯಾಲಂ ಬಿಟ್ಟು ಬೆಂಗಳೂರಿಗೆ ಬಂದಿದ್ದ.

ಮತ್ತೆ ಬೆಂಗಳೂರಿಗೆ ಬಂದು ಅದೇ ಯುವತಿಗೆ ಪ್ರೀತಿಸುವಂತೆ ಪೀಡಿಸಿದ್ದ. ಪ್ರೀತಿ ತಿರಸ್ಕರಿಸಿದಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ. ನಾಗೇಶ್ ಮತ್ತಷ್ಟು ಹುಡುಗಿಯರಿಗೆ ಕಾಟ ಕೊಟ್ಟಿದ್ದಾನೆ ಎನ್ನುವ ಮಾಹಿತಿ ಕೂಡ ಸಿಕ್ಕಿದ್ದು, ಆತನ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಾಜ್ಯ, ಹೊರ ರಾಜ್ಯಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada