ನಿಮ್ಮಲ್ಲಿ ಗಟ್ಟಿತನ ಇದ್ರೆ ಪ್ರಿಯಾಂಕ್ ಖರ್ಗೆಯನ್ನ ವಜಾ ಮಾಡಿ: ಅಶ್ವಥ್ ನಾರಾಯಣ ಸವಾಲ್

| Updated By: ಆಯೇಷಾ ಬಾನು

Updated on: Nov 04, 2023 | 1:18 PM

ಸಚಿವ ಪ್ರಿಯಾಂಕ್ ಖರ್ಗೆ ಫ್ಯಾಮಿಲಿ ಬ್ರ್ಯಾಂಡ್​ನಿಂದ ಬಂದವರು. ಸಿಎಂ ಸಿದ್ದರಾಮಯ್ಯ ಅವರೇ ಸಹೋದ್ಯೋಗಿಗೆ ಸ್ವಲ್ಪ ಪಾಠಮಾಡಿ. ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ನಿಮ್ಮಲ್ಲಿ ಗಟ್ಟಿತನ ಇದ್ರೆ ಅವರನ್ನು ವಜಾ ಮಾಡಿ ಎಂದು ಡಾ.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮಲ್ಲಿ ಗಟ್ಟಿತನ ಇದ್ರೆ ಪ್ರಿಯಾಂಕ್ ಖರ್ಗೆಯನ್ನ ವಜಾ ಮಾಡಿ: ಅಶ್ವಥ್ ನಾರಾಯಣ ಸವಾಲ್
ಶಾಸಕ ಅಶ್ವತ್ಥ್ ನಾರಾಯಣ
Follow us on

ಬೆಂಗಳೂರು, ನ.04: ಬಿಜೆಪಿ ಲೀಡರ್ ಲೆಸ್​ ಪಾರ್ಟಿ, ಜೆಡಿಎಸ್​​ ಪೀಪಲ್​ ಲೆಸ್ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ವಿರುದ್ಧ ಶಾಸಕ ಅಶ್ವತ್ಥ್ ನಾರಾಯಣ (Ashwath Narayan) ವಾಗ್ದಾಳಿ ನಡೆಸಿದ್ದಾರೆ. ಸಿಎಂ ನಾಯಕತ್ವವನ್ನೇ ಪ್ರಶ್ನೆ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ನಮ್ಮನ್ನು ಲೀಡರ್ ಲೆಸ್ ಅಂತಾರೆ, ಅವರಿಗೆ ಪರಿಜ್ಞಾನ ಇದೆಯಾ? ಪ್ರಿಯಾಂಕ್ ಖರ್ಗೆ ಆಗಿ ಅವರು ಸ್ಥಾನಮಾನ ಪಡೆದ್ರಾ ಅಥವಾ ಮಲ್ಲಿಕಾರ್ಜುನ ಖರ್ಗೆರಿಂದ ಪ್ರಿಯಾಂಕ್ ಸ್ಥಾನಮಾನ ಪಡೆದರಾ? ಪ್ರಿಯಾಂಕ್ ಖರ್ಗೆ ಆಗಿ ಸ್ಥಾನಮಾನ ಪಡೆಯಲಿ, ಆಗ ನೋಡೋಣ. ಸಿಎಂ ಸಿದ್ದರಾಮಯ್ಯ ಅವರೇ ಸಹೋದ್ಯೋಗಿಗೆ ಸ್ವಲ್ಪ ಪಾಠಮಾಡಿ. ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ನಿಮ್ಮಲ್ಲಿ ಗಟ್ಟಿತನ ಇದ್ರೆ ಅವರನ್ನು ವಜಾ ಮಾಡಿ.ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಸವಾಲು ಹಾಕಿದ್ದಾರೆ.

ಪ್ರಿಯಾಂಕ್ ಖರ್ಗೆ ಅಪ್ಪನ ಹೆಗಲ ಮೇಲೆ ಬೆಳೆದು ಮಾತಾಡ್ತಾರೆ. ಈಗ ಅವರ ಮಾತಿಗೆ ಬೆಲೆ ಕೊಡಬೇಕಿಲ್ಲ. ನೇರವಾಗಿ ಜನ ಪ್ರಿಯಾಂಕ್ ಖರ್ಗೆ ತಂದೆಯನ್ನೇ ಸೋಲಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಫ್ಯಾಮಿಲಿ ಬ್ರ್ಯಾಂಡ್​ನಿಂದ ಬಂದವರು. ಸಿಎಂ ಸಿದ್ದರಾಮಯ್ಯ ಅವರೇ ಸಹೋದ್ಯೋಗಿಗೆ ಸ್ವಲ್ಪ ಪಾಠಮಾಡಿ. ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ನಿಮ್ಮಲ್ಲಿ ಗಟ್ಟಿತನ ಇದ್ರೆ ಅವರನ್ನು ವಜಾ ಮಾಡಿ. ಜನರ ಕಷ್ಟದಲ್ಲಿ ಸಿದ್ದರಾಮಯ್ಯ ಸ್ಟೆಪ್ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಮಾತ್ರ ಅಲ್ಲ, ಜನರೂ ಸ್ಟೆಪ್ ಹಾಕುವಂತೆ ಆಗಲಿ. ಲೂಟಿ ಸರ್ಕಾರ ಕಾಂಗ್ರೆಸ್ ಮಾಡೆಲ್, ಇದೇ ಇವರ ಬ್ರಾಂಡ್ ಎಂದು ಡಾ.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಲೀಡರ್​​ ಲೆಸ್, ಜೆಡಿಎಸ್​​ ಪೀಪಲ್​ ಲೆಸ್: ಸಚಿವ ಪ್ರಿಯಾಂಕ್ ಖರ್ಗೆಗೆ ಕೆಎಸ್​ ಈಶ್ವರಪ್ಪ ತಿರುಗೇಟು

ಇನ್ನು ಇದೇ ವೇಳೆ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಬ್ರೇಕ್​ಫಾಸ್ಟ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿ,
ಚುನಾವಣೆಯಲ್ಲಿ ಕಾಂಗ್ರೆಸ್​ಗೆ ರಾಜ್ಯದ ಜನರು ಬಹುಮತ ನೀಡಿದ್ದಾರೆ. ಆ ಬಹುಮತಕ್ಕೆ ಕಾಂಗ್ರೆಸ್ ಅರ್ಹವೋ ಗೊತ್ತಿಲ್ಲ. ಕಾಂಗ್ರೆಸ್​ನಲ್ಲಿ ಎಲ್ಲಾ ನಾಯಕರು ಬೂದಿ ಮುಚ್ಚಿದ ಕೆಂಡದಂತಿದ್ದಾರೆ. ನಾನೇ ಐದು ವರ್ಷ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ ಬಳಿಕ ಗಲಾಟೆ ಶುರು ಆಗಿದೆ. ಕೆಲವರು ಒಬ್ಬರ ಪರ ವಕಾಲತ್ತು ಮಾಡ್ತಿದ್ರೆ, ಕೆಲವರು ತಾವೇ ವಕಾಲತ್ತು ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಬಹಳ ಕಷ್ಟದ ಸಮಯ. ಸಿದ್ದರಾಮಯ್ಯನವರೇ ಗುಂಪುಗಾರಿಕೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ