ಡಿಲೀಟ್ ಆಗಿದ್ದ ಡಾಟಾ ರಿಕವರಿಯೇ ಶಾಸಕ ಜಮೀರ್ ಅಹ್ಮದ್ ಆಸ್ತಿ ಮೇಲೆ ದಾಳಿಗೆ ಕಾರಣವಾಯ್ತು!

| Updated By: guruganesh bhat

Updated on: Aug 06, 2021 | 7:40 PM

ಡಿಲೀಟ್ ಆಗಿದ್ದ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ರಿಟ್ರೀವ್ ಮಾಡಿ ಡಾಟಾ ರಿಕವರಿ ಮಾಡಲಾಗಿದೆ. ಈಗ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಇಡಿ ಅಧಿಕಾರಿಗಳು ಪಕ್ಕಾ ಮಾಹಿತಿ ಕಲೆ ಹಾಕಿ ರೇಡ್ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಡಿಲೀಟ್ ಆಗಿದ್ದ ಡಾಟಾ ರಿಕವರಿಯೇ ಶಾಸಕ ಜಮೀರ್ ಅಹ್ಮದ್ ಆಸ್ತಿ ಮೇಲೆ ದಾಳಿಗೆ ಕಾರಣವಾಯ್ತು!
ಜಮೀರ್ ಅಹ್ಮದ್
Follow us on

ಇಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಮತ್ತು ರೋಷನ್ ಬೇಗ್ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.ಈ ಎಲ್ಲಾ ದಾಳಿಗೂ ಐಎಂಎ ಬಹುಕೋಟಿ ವಂಚನೆ ಪ್ರಕರಣ ಕಿಂಗ್ ಪಿನ್ ಮನ್ಸೂರ್ ಅಲಿ‌ಖಾನ್ ಜತೆಗಿನ ಹಣಕಾಸಿನ ವ್ಯವಹಾರವೇ ಮೂಲ ಕಾರಣವಾಗಿ ಮುಳುವಾಯಿತೇ ಎಂಬ ಮಾತುಗಳು ಕೇಳಿಬರ್ತಿದೆ. ಏಕೆಂದರೆ ಸಿಬಿಐ ಕಳೆದ ಕೆಲವು ತಿಂಗಳ ಹಿಂದೆ ಮಾಜಿ ಸಚಿವ ರೋಷನ್ ಬೇಗ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಮನ್ಸೂರ್ ಅಲಿಖಾನ್ ಬಂಧಿಸಿ ಡ್ರಿಲ್ ನಡೆಸಿದ್ದ ಸಿಬಿಐ ಮನ್ಸೂರ್ ನಿಂದ ಮಹತ್ವದ ಮಾಹಿತಿ ಕಲೆಹಾಕಿತ್ತು. ಅಮೇಜಾನ್ ಕ್ಲೌಡ್​ನಲ್ಲಿ ವಂಚಕ ಮನ್ಸೂರ್ ಅಲಿಖಾನ್ ತನ್ನ ಪ್ರತಿಯೊಂದು ವ್ಯವಹಾರದ ಮಾಹಿತಿಯನ್ನು ಪಿನ್ ಟೂ ಪಿನ್ ಕ್ಲೌಡ್ ಅಲ್ಲಿ ಸೇವ್ ಮಾಡಿ ಇಟ್ಟಿದ್ದ.

ಮನ್ಸೂರ್ ಅಲಿಖಾನ್ ಯಾರಿಗೆ ಎಷ್ಟು ಹಣಕೊಟ್ಟಿದ್ದ? ಯಾವ ಉದ್ದೇಶದ ಹಿನ್ನಲೆ ಹಣ ಸಂದಾಯ ಮಾಡಿಲಾಗ್ತಿದೆ…? ಯಾರು ಹಣವನ್ನು ಪಡೆದುಕೊಂಡಿದ್ದಾರೆ? ಯಾರ ಮೂಲಕ ಪಡೆದುಕೊಳ್ಳಲಾಗಿದೆ? ಯಾವ ಸ್ಥಳದಲ್ಲಿ ಪಡೆದುಕೊಳ್ಳಲಾಗಿದೆ? ಇಷ್ಟೆಲ್ಲ ಪ್ರಶ್ನೆಗಳು ತನಿಖೆಯ ವೇಳೆ ಎದುರಾಗಿದ್ದವು. ಯಾವ ಸಂದರ್ಭದಲ್ಲಿ ಹಣಕೊಟ್ಟಿದ್ದೆ ಅಂತ ಎಲ್ಲ ಮಾಹಿತಿಯನ್ನು ಮನ್ಸೂರ್ ಅಲಿಖಾನ್ ತನ್ನ ಅಮೇಜಾನ್ ಕ್ಲೌಡ್ ಅಕೌಂಟ್ ನಲ್ಲಿ ಎಂಟ್ರಿ ಮಾಡಿ ಇಡ್ತಿದ್ದ. ಈ ಎಲ್ಲಾ ಸಾಫ್ಟ್ ಕಾಫಿಗಳನ್ನಾಧರಿಸಿದ ಮಾಹಿತಿ ಸಿಬಿಐ ತನಿಖೆ ವೇಳೆ ಈ ಮಾಹಿತಿ ಹ್ಯಾಕ್ ಆಗಿತ್ತು ಅನ್ನೋ ಸಂಗತಿ ಕೂಡ ಹೊರಬಿದ್ದಿತ್ತು. ಮನ್ಸೂರ್ ಅಲಿಖಾನ್ ಅಮೇಜಾನ್ ಕ್ಲೌಡ್ ಅಕೌಂಟ್ ಅನ್ನು ಹ್ಯಾಕಿಂಗ್ ಮಾಡಿದ್ದಾರೆ. ಆ ಬಳಿಕ ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿರುವುದಾಗಿ ಹೇಳಿತ್ತು. ಅಷ್ಟೇ ಅಲ್ಲದ ಕೆಲವು ರಾಜಕಾರಣಿಗಳಿಗೆ ಸೇರಿದ ಮಹತ್ವದ ಮಾಹಿತಿ ಗಳನ್ನ ದುಬೈನಿಂದ ಮನ್ಸೂರ್ ಅಲಿಖಾನ್ ಕರೆತರುವ ಮುನ್ನವೇ ಹ್ಯಾಕಿಂಗ್ ಮಾಡಿದ್ದಾರೆ ಅನ್ನೋ ಆರೋಪವಿತ್ತು‌.

ಹ್ಯಾಕಿಂಗ್ ಮಾಡುವಾಗ ಕೆಲವೊಂದು ರಾಜಕಾರಣಿಗಳ ಮಾಹಿತಿ ಡಿಲೀಟ್ ಮಾಡಿದ್ದಾರೆ ಅನ್ನೋದು ತನಿಖೆ ವೇಳೆ ಪಕ್ಕಾ ಆಗಿತ್ತು. ಹ್ಯಾಕಿಂಗ್ ಆಗಿದೆ ಅಂತ ಕೇಂದ್ರ ಎಫ್ ಎಸ್ ಎಲ್ ವರದಿ ಕೂಡ ನೀಡಿತ್ತು. ಆದ್ರೆ ಈ ಡಿಲೀಟ್ ಆಗಿದ್ದ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ರಿಟ್ರೀವ್ ಮಾಡಿ ಡಾಟಾ ರಿಕವರಿ ಮಾಡಲಾಗಿದೆ. ಈಗ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಇಡಿ ಅಧಿಕಾರಿಗಳು ಪಕ್ಕಾ ಮಾಹಿತಿ ಕಲೆ ಹಾಕಿ ರೇಡ್ ನಡೆಸಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ವರದಿ
ಶಿವಪ್ರಸಾದ್.ಬಿ.
ಕ್ರೈಂ ವರದಿಗಾರ,ಟಿವಿನೈನ್ ಕನ್ನಡ

ಇದನ್ನೂ ಓದಿ: 

ಆಸ್ತಿ ಗಳಿಕೆ ವಿಚಾರವಾಗಿ ಐಟಿ ಬದಲು ಇಡಿ ತನಿಖೆ ಆಶ್ಚರ್ಯ ಮೂಡಿಸಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಶಾಸಕ ಜಮೀರ್ ಅಹ್ಮದ್ ಸಹೋದರ ಶಕೀಲ್ ಅಹ್ಮದ್ ಖಾನ್​ ಇಡಿ ಅಧಿಕಾರಿಗಳ ವಶಕ್ಕೆ ಪಡೆದು ಬಿಡುಗಡೆ

(MLA Zamir Ahmed property ED Raid data recovery that was deleted led to the attack)