ಬಿಜೆಪಿಯಿಂದ ಚಡ್ಡಿ ಅಭಿಯಾನ; ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆ ಕಡೆಗೆ ಬಂದ MLC ಛಲವಾದಿ ನಾರಾಯಣಸ್ವಾಮಿ 

| Updated By: ವಿವೇಕ ಬಿರಾದಾರ

Updated on: Jun 07, 2022 | 5:57 PM

RSS ಚಡ್ಡಿ ಸುಟ್ಟುಹಾಕುವ ಅಭಿಯಾನಕ್ಕೆ ಕಾಂಗ್ರೆಸ್ ಕರೆ ಕೊಟ್ಟಿರುವ ವಿಚಾರ​​ವಾಗಿ MLC ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಚಡ್ಡಿ ಅಭಿಯಾನ ನಡೆದಿದದ್ದು, ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆ ಕಡೆಗೆ ಬಿಜೆಪಿ ಕಾರ್ಯಕರ್ತರು ಬಂದಿದ್ದಾರೆ.

ಬಿಜೆಪಿಯಿಂದ ಚಡ್ಡಿ ಅಭಿಯಾನ; ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆ ಕಡೆಗೆ ಬಂದ MLC ಛಲವಾದಿ ನಾರಾಯಣಸ್ವಾಮಿ 
ಛಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು: RSS ಚಡ್ಡಿ ಸುಟ್ಟುಹಾಕುವ ಅಭಿಯಾನಕ್ಕೆ ಕಾಂಗ್ರೆಸ್ (Congress) ಕರೆ ಕೊಟ್ಟಿರುವ ವಿಚಾರ​​ವಾಗಿ MLC ಛಲವಾದಿ ನಾರಾಯಣಸ್ವಾಮಿ (Chalavadi Narayanswamy) ನೇತೃತ್ವದಲ್ಲಿ ಚಡ್ಡಿ ಅಭಿಯಾನ ನಡೆದಿದದ್ದು, ಚಡ್ಡಿ ಹಿಡಿದು ಸಿದ್ದರಾಮಯ್ಯ (Siddaramaiah) ಮನೆ ಕಡೆಗೆ ಬಿಜೆಪಿ ಕಾರ್ಯಕರ್ತರು ಬಂದಿದ್ದಾರೆ. ಈ ವೇಳೆ ಕೈಯ್ಯಲ್ಲಿ ಚಡ್ಡಿ ಎತ್ತಿ ಹಿಡಿದು ಬಿಜೆಪಿ ಕಾರ್ಯಕರ್ತರು ಚಳವಳಿ ಮಾಡಿದ್ದಾರೆ.

ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಚಡ್ಡಿ ಸುಡೋದಾದರೆ ಕಾಂಗ್ರೆಸ್​ನವರ ಚಡ್ಡಿ ಸುಟ್ಟುಕೊಳ್ಳಲಿ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್​ನವರ ಚಡ್ಡಿ ಸುಟ್ಟಿದ್ದಾರೆ. ಇದೊಂದು ಚಡ್ಡಿ ಸುಟ್ಟು ಬೆತ್ತಲೆ ಆಗಬೇಡಿ ಅಂದರೂ ಕೇಳುತ್ತಿಲ್ಲ. ಅದಕ್ಕಾಗಿ ಇವಾಗ ಅವರಿಗೆ ಚಡ್ಡಿ ಕೊಡಲು ಬಂದಿದ್ದೇವೆ. ಕಾಂಗ್ರೆಸ್ ಪಕ್ಷದವರು ಚಡ್ಡಿಗಳನ್ನು ಸುಡುತ್ತಲೇ ಇರಲಿ. ಅವರು ಎಷ್ಟು ಚಡ್ಡಿ ಸುಡ್ತಾರೋ ಅಷ್ಟು ಚಡ್ಡಿ ತಲುಪಿಸುತ್ತೇವೆ ಎಂದು ಕಾಂಗ್ರೆಸ್​ ಕಿಡಿ ಕಾರಿದ್ದಾರೆ.

ಇದನ್ನು ಓದಿ: Chamrajpet Idgah Maidan: ಬಿಬಿಎಂಪಿ ಮಾಲೀಕತ್ವಕ್ಕೆ ಪುರಾವೆ ಇಲ್ಲ; ನ್ಯಾಯಾಲಯಗಳಲ್ಲಿ ನಡೆದ ಸುದೀರ್ಘ ವಾದ-ವಿವಾದದ ಸಂಪೂರ್ಣ ಮಾಹಿತಿ ಇಲ್ಲಿದೆ

ಚಡ್ಡಿ ಮಾನವ ಕುಲವನ್ನು ಗೌರವ ಕಾಣುವ ಸಂಕೇತವಾಗಿದೆ.  ಚಡ್ಡಿ ಹಾಕುವಂತವರು ಮಿಲಿಟರಿ, ಪೊಲೀಸರು, ರೈತರು ಇದ್ದಾರೆ.  ಆದರೆ ಚಡ್ಡಿ ಕಿರುವ ಎಲ್ಲರನ್ನು ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ.  ಇವತ್ತು ಆರ್ ಎಸ್ ಎಸ್ ಗುರಿ ಮಾಡಿ ಹೇಳಿರಬಹುದು. ಇವತ್ತು ಆರ್ ಎಸ್ ಎಸ್ ಇಲ್ಲ ಅಂದಿದ್ದರೆ ನಿಮ್ಮ ಚಡ್ಡಿಯನ್ನೇ ಕಿತ್ತುಕೊಂಡು ಹೋಗಿಬಿಡುತ್ತಿದ್ದರು.  ಇನ್ಮುಂದೆ ನಿಮ್ಮ ಚಡ್ಡಿಯನ್ನು ಭದ್ರ ಮಾಡಿಕೊಳ್ಳಿ ಎಂದು ಕಾಲೆಳೆದಿದ್ದಾರೆ. ನಂತರ ಪೊಲೀಸರು ಬಿಜೆಪಿ ಕಾರ್ಯಕರ್ತರು, ಚಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ: ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

ಚಡ್ಡಿ ಮೆರವಣಿಗೆ ಬಳಿಕ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಬಿಜೆಪಿಯವರು ತಂದಿದ್ದ ಚಡ್ಡಿಗಾಗಿ ಯುವಕನೋರ್ವ ಕಾಯುತ್ತಿದ್ದನು. ಚಡ್ಡಿ ಇಡಕೊಂಡು ಬಂದರಲ್ಲ, ಚಡ್ಡಿ ಅದವೇನು ಅಂತ ನೊಡ್ದೆ. ಚಡ್ಡಿ ಕೊಡ್ತಾರೇನು ಅಂತ ನೋಡ್ದೆ‌‌ ಆದರೆ ಅವರು ಕೊಡಲಿಲ್ಲ.ಅವರು ಯಾಕ್ ಬಂದಿದ್ದರು ಅಂತ ಗೊತ್ತಿಲ್ಲ
ಚಡ್ಡಿ ಸಿಗಲಿಲ್ಲ ಅಂತ ಹೇಳಿದ್ದಾನೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.