ಪಿಯುಸಿ ಪಠ್ಯ ಪರಿಷ್ಕರಣೆ ಇಲ್ಲ- ಶಿಕ್ಷಣ ಸಚಿವ ಬಿಸಿ ನಾಗೇಶ್, ಪರಿಷ್ಕರಣೆ ಕೈಬಿಟ್ಟಿಲ್ಲ- ಸಚಿವ ಶ್ರೀನಿವಾಸ ಪೂಜಾರಿ

ಕರ್ನಾಟಕದ ಸರ್ಕಾರದ ಇಬ್ಬರು ಸಚಿವರು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದಾರೆ.

ಪಿಯುಸಿ ಪಠ್ಯ ಪರಿಷ್ಕರಣೆ ಇಲ್ಲ- ಶಿಕ್ಷಣ ಸಚಿವ ಬಿಸಿ ನಾಗೇಶ್, ಪರಿಷ್ಕರಣೆ ಕೈಬಿಟ್ಟಿಲ್ಲ- ಸಚಿವ ಶ್ರೀನಿವಾಸ ಪೂಜಾರಿ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 07, 2022 | 7:54 PM

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ (Textbook Revision) ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆ, ಕಾವೇರಿದ ವಾಗ್ವಾದಗಳು ಸದ್ಯಕ್ಕೆ ಶಮನವಾಗುವಂತೆ ಕಾಣಿಸುತ್ತಿಲ್ಲ. ಈ ನಡುವೆ ಕರ್ನಾಟಕದ ಸರ್ಕಾರದ ಇಬ್ಬರು ಸಚಿವರು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದಾರೆ. ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh)​ ಈಗ ಪಠ್ಯ ಪುಸ್ತಕ ಸಮಿತಿ ವಿಸರ್ಜನೆ ಮಾಡಲಾಗಿದೆ. ಹಾಗಾಗಿ ಅವರಿಂದ ಪಠ್ಯ ಪರಿಷ್ಕರಣೆ ಮಾಡಿಸುವುದಿಲ್ಲ. ಬರಗೂರು ಸಮಿತಿ ನೀಡಿದ್ದ ಬಸವಣ್ಣ ಪಠ್ಯ ಮುಂದುವರಿಸುತ್ತೇವೆ. ಅಂಬೇಡ್ಕರ್ ಪಠ್ಯ ಸೇರಿ ಇತರೆ ಲೋಪ ಸರಿಪಡಿಸುತ್ತೇವೆ ಎಂದು ಹೇಳಿದರು.

ನಾವು ಯಾವುದೇ ಆದೇಶವನ್ನು ಹಿಂಪಡೆದಿಲ್ಲ. ಒಂದೇ ಒಂದು ಪಾಠ ಪರಿಷ್ಕರಣೆಗೆ ಸಮಿತಿ ಮಾಡೋದು ಬೇಡ ಎನ್ನುವ ಕಾರಣಕ್ಕೆ ಇವರನ್ನು ನೇಮಿಸಲಾಗಿತ್ತು. ಸಮಿತಿಯೇ ಇಲ್ಲದಿರುವ ಕಾರಣ, ಅವರ ಕೈಲಿ ಪಠ್ಯ ಪರಿಷ್ಕರಣೆ ಮಾಡಿಸಲು ಆಗುವುದಿಲ್ಲ. ಪಿಯುಸಿ ಪಠ್ಯವು ಯಥಾವತ್ತಾಗಿ ಇರಲಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಶೈಕ್ಷಣಿಕ ಸಭೆ ನಡೆಯಲಿದೆ. ದೇಶದ ಪುನರ್ ನಿರ್ಮಾಣ ಕಾರ್ಯಕ್ಕೆ ಹೊರಟಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು ಎಂದರು.

ಬರಗೂರು ರಾಮಚಂದ್ರಪ್ಪ ಅವರು ನೀಡಿದ್ದ ಬಸವಣ್ಣನವರ ಪಠ್ಯವನ್ನೇ ಮುಂದುವರೆಸಲಿದ್ದೇವೆ. ಅದರಲ್ಲಿರುವ ವಿಚಾರಗಳ ಬಗ್ಗೆ ಯಾರಿಗೂ ಆಕ್ಷೇಪವಿಲ್ಲ. ಹಾಗಾಗಿ ಬರಗೂರು ಪಠ್ಯಪುಸ್ತಕ ಸಮಿತಿ ನೀಡಿದ ಬಸವಣ್ಣ ಪಠ್ಯ ಮುಂದುವರೆಯಲಿದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರ ಪಠ್ಯಗಳಲ್ಲಿರುವ ಲೋಪಗಳನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಕೈಬಿಟ್ಟಿಲ್ಲ

ಉಡುಪಿ: ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಕೈಬಿಟ್ಟಿಲ್ಲ. ಮುಂದೂಡಿದ್ದೇವೆ ಅಷ್ಟೇ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಪಠ್ಯಪುಸ್ತಕ ಪರಿಷ್ಕರಣೆಯ ಅಗತ್ಯ ಕುರಿತು ಜನತೆಗೆ ಮನವರಿಕೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಪಠ್ಯಪುಸ್ತಕದ ಮೂಲಕ ಮಕ್ಕಳಿಗೆ ದೇಶಪ್ರೇಮ ಕಲಿಸುತ್ತೇವೆ. ರಾಷ್ಟ್ರಪ್ರೇಮ ಬೆಳೆಸುವ ಪಠ್ಯ ತಯಾರಿ ನಮ್ಮ ಜವಾಬ್ದಾರಿ. ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದರೆ ಏನು ತಪ್ಪು? ನಿಮ್ಮ ಟೀಕೆಯಲ್ಲಿ ನ್ಯಾಯವಿದ್ದರೆ ನಾವು ಸರಿಪಡಿಸುತ್ತೇವೆ. ಪಠ್ಯಪುಸ್ತಕದ ಭೂತ ಕಾಂಗ್ರೆಸ್​ನ​ ಸೃಷ್ಟಿ ಎಂದು ಟೀಕಿಸಿದರು. ಟೀಕೆಗಳು ಬಂದಾಗ ಪರಿಶೀಲಿಸುತ್ತೇವೆ. ಯಾರೊಬ್ಬರೂ ಸರ್ವಾಧಿಕಾರಿ ಆಗಲು ಸಾಧ್ಯವಿಲ್ಲ. ನಿಮ್ಮ ಟೀಕೆಯಲ್ಲಿ ನ್ಯಾಯವಿದ್ದರೆ ನಾವು ಸರಿಪಡಿಸುತ್ತೇವೆ. ಪಠ್ಯಪುಸ್ತಕದ ಭೂತ ಕಾಂಗ್ರೆಸ್​ನ ಸೃಷ್ಟಿ. ಪರಿಷ್ಕೃತ ಪಠ್ಯಪುಸ್ತಕ ಕೈಬಿಡಲು ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಅವರ ದೊಡ್ಡ ವ್ಯಕ್ತಿತ್ವಕ್ಕೆ, ದೊಡ್ಡ ಸ್ಥಾನಕ್ಕೆ ಇವೆಲ್ಲಾ ಶೋಭೆ ತರುವುದಿಲ್ಲ ಎಂದು ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆ ಚರ್ಚೆಯ ಬಗ್ಗೆ ಆರ್​ಎಸ್​ಎಸ್​ ನಾಯಕರಿಗೆ ಮನವರಿಕೆ ಮಾಡಿಕೊಡಲು ನಾವು ಹೋಗಿರಲಿಲ್ಲ. ಆರ್​ಎಸ್​ಎಸ್​ ಕಾರ್ಯಾಲಯಗಳಿಗೆ ನಿಯಮಿತವಾಗಿ ಹೋಗಬೇಕು ಎನ್ನುವುದು ಬಿಜೆಪಿಯ ರೂಢಿ, ಸಂಪ್ರದಾಯ, ಕ್ರಮ ಮತ್ತು ನಿಯಮ. ಬಹಳಷ್ಟು ವಿಚಾರಗಳನ್ನು ಈ ವೇಳೆ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸುಳ್ಳಿನ ಮೇಲೆ ಸವಾರಿ ಮಾಡುತ್ತಿದೆ. ಪಠ್ಯದ ಮೂಲಕ ರಾಷ್ಟ್ರಪ್ರೇಮವನ್ನು ತುಂಬಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು. ಈ ಹಂತಲ್ಲೇ ಕಾಂಗ್ರೆಸ್ ಅಪಪ್ರಚಾರ ಶುರುಮಾಡಿದೆ. ಈ ಹಿಂದೆ ಪ್ರಶಸ್ತಿ ವಾಪ್ಸಿ ಎಂಬ ಅಭಿಯಾನ ಶುರುಮಾಡಿದ್ದರು. ಆದರೆ ಯಾರು ಕೂಡ ಪ್ರಶಸ್ತಿ ವಾಪಸ್ ಕೊಟ್ಟಿಲ್ಲ. ಪಠ್ಯವೇ ಇಲ್ಲದವರು ನಮ್ಮ ಪಠ್ಯವನ್ನು ತೆಗೆಯಿರಿ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ದೇವನೂರು ಮಹಾದೇವ ಒಳ್ಳೆಯ ಸಾಹಿತಿ. ಅವರೊಂದಿಗೆ ವಿಚಾರಭೇದ ಇರಬಹುದು. ದೇವನೂರು ಬಳಿ ಶಿಕ್ಷಣ ಸಚಿವರು ಹೋಗಿ ಮಾತುಕತೆ ಮಾಡಿದ್ದಾರೆ. ರಾಷ್ಟ್ರಪ್ರೇಮ ತುಂಬಿಸುವ ಕೆಲಸ ಮಾಡುತ್ತಿದ್ದೇವೆ ಎಂದು ದೇವನೂರು ಅವರಿಗೆ ಮನವರಿಕೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಹಿತಿ ಬಳಿ ಒಬ್ಬ ಸಚಿವ ಹೋಗಿದ್ದು ಇದೇ ಮೊದಲು. ಬರಗೂರು, ಚಕ್ರತೀರ್ಥ ಸಮಿತಿ ಪಠ್ಯಗಳ ಸೇರ್ಪಡೆ ಬದಲಾವಣೆ ಪಟ್ಟಿ ಮಾಡುತ್ತಿದ್ದೇವೆ. ನಮ್ಮ ನಿರ್ಧಾರದ ಬಗ್ಗೆ ರಾಜ್ಯದ ಆರೂವರೆ ಕೋಟಿ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.

ಆರ್​ಎಸ್ಎಸ್ ಚಡ್ಡಿ ಬಗ್ಗೆ ಸಿದ್ದರಾಮಯ್ಯನವರಿಗೆ ಭಯವಿದೆ. ಚಡ್ಡಿ ಸುಡಲು ಹೊರಟಿರುವ ಸಿದ್ದರಾಮಯ್ಯ ಬಗ್ಗೆ ಮರುಕಪಡಬೇಕು. ನೆಹರು ಸಹ ಆರ್​ಎಸ್​ಎಸ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆರ್​ಎಸ್​ಎಸ್​ ಕಾರ್ಯಕರ್ತರಿಗೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅವಕಾಶ ಕೊಟ್ಟಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗಪುರದಲ್ಲಿ ಮಾತನಾಡುವಾಗ ಆರ್​ಎಸ್​ಎಸ್​ ಒಂದು ರಾಷ್ಟ್ರಭಕ್ತರ ಸಂಘಟನೆ ಎಂದಿದ್ದರು. ಆರ್​ಎಸ್​ಎಸ್​ ಚಡ್ಡಿ ಸುಡಲು ಹೊರಟರೆ, ಅದು ಕಾಂಗ್ರೆಸ್​ನ ಅಧೋಗತಿಗೆ ಕಾರಣವಾಗುತ್ತದೆ. ಚಡ್ಡಿ ಸುಡಲು ಹೊರಟವರು ಚಡ್ಡಿ ಹಾಕಿಕೊಂಡು ಕೊಡಲಿ ಎಂದು ಯಾರೋ ಹೇಳಿದರು. ಆದರೆ ನಾನು ಆ ಮಾತನ್ನು ಹೇಳಬಯಸುವುದಿಲ್ಲ. ದಿನದಿಂದ ದಿನಕ್ಕೆ ಕಾಂಗ್ರೆಸ್ ವೋಟುಗಳು ಕಡಿಮೆಯಾಗೋದು ಖಚಿತ ಎಂದು ಹೇಳಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Tue, 7 June 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ