ಬೆಂಗಳೂರು, ಅ.22: ಸಿಸಿಬಿ (CCB) ಪೊಲೀಸರ ಸೋಗಿನಲ್ಲಿ ಮೊಬೈಲ್ ಶಾಪ್ ಮಾಲೀಕನನ್ನು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸ್ನೇಹಿತರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ನಗರದ (Bengaluru) ವಿಶ್ವೇಶ್ವರಪುರಂ (ವಿ.ವಿ.ಪುರಂ) ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಖಾಸಿಂ, ಮುಜಾಹಿದ್, ವಸೀಂ, ಮುಕ್ತಿಯಾರ್ ಮತ್ತು ಶಬ್ಬೀರ್ ಬಂಧಿತ ಆರೋಪಿಗಳಾಗಿದ್ದಾರೆ. ವಿವಿ ಪುರಂನ ಮೊಬೈಲ್ ಶಾಪ್ ಮಾಲೀಕ ಕಾಲುಸಿಂಗ್ ಅವರನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾಲುಸಿಂಗ್ ಸ್ನೇಹಿತರಿಗೆ ಕರೆ ಮಾಡಿ ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: ಬೆಂಗಳೂರಿನ ನಾಗಸಂದ್ರ ಬಳಿ ನಡೆದ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್; ಕೊಲೆ ಹಿಂದೆ ಇದೆ ಪ್ರೇಮ ಕಹಾನಿ
ಕೂಡಲೇ ಕಾಲುಸಿಂಗ್ ಸ್ನೇಹಿತರು ಸಿಸಿಬಿ ಪೊಲೀಸರನ್ನು ಸಂಪರ್ಕಿಸಿದಾಗ ಕಿಡ್ನಾಪ್ ಮಾಡಿರುವುದು ನಕಲಿ ಸಿಸಿಬಿ ಪೊಲೀಸರು ಎಂದು ತಿಳಿದುಬಂದಿದೆ. ಇತ್ತ, ಸಿಸಿಬಿ ಪೋಲಿಸರಿಗೆ ಕಿಡ್ನಾಪ್ ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳು ಕಾಲುಸಿಂಗ್ನನ್ನು ಬಿಟ್ಟು ಕಳುಹಿಸಿದ್ದರು.
ನಿರ್ಜನ ಪ್ರದೇಶದಿಂದ ಬಂದ ಬಳಿಕ ಕಾಲುಸಿಂಗ್ ನೇರವಾಗಿ ವಿವಿ ಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ