ತಮಿಳುನಾಡಿನಲ್ಲಿ ಎಲ್‌ಟಿಟಿಇ ಸಂಘಟನೆಯ ಶಂಕಿತ ಉಗ್ರನನ್ನು ಬಂಧಿಸಿದ ಬೆಂಗಳೂರಿನ ಎನ್ಐಎ
ವಿ.ಪ್ರಭಾಕರನ್ ಹತ್ಯೆಯ ಬಳಿಕ LTTE ಉಗ್ರರಿಗೆ ಆಶ್ರಯ ಕೊಡಿಸುತ್ತಿದ್ದ ಶಂಕಿತ ಉಗ್ರ ಮೊಹಮ್ಮದ್ ಇಮ್ರಾನ್ ಖಾನ್ನನ್ನು ಬೆಂಗಳೂರಿನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡಿನ ತೇನಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಬೆಂಗಳೂರು, ಅ.22: ವಿ.ಪ್ರಭಾಕರನ್ ಹತ್ಯೆಯ ಬಳಿಕ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಉಗ್ರರಿಗೆ ಆಶ್ರಯ ಕೊಡಿಸುತ್ತಿದ್ದ ಶಂಕಿತ ಉಗ್ರ ಮೊಹಮ್ಮದ್ ಇಮ್ರಾನ್ ಖಾನ್ನನ್ನು ತಮಿಳುನಾಡಿನ ತೇನಿ ಜಿಲ್ಲೆಯಲ್ಲಿ ಬೆಂಗಳೂರಿನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಶ್ರೀಲಂಕಾದ ಎಲ್‌ಟಿಟಿಇ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮೊಹಮ್ಮದ್ ಇಮ್ರಾನ್ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅಲ್ಲದೆ, ಲಂಕಾದಿಂದ ಎಲ್‌ಟಿಟಿಇ ಉಗ್ರರನ್ನು ಭಾರತಕ್ಕೆ ಕರೆತರುತ್ತಿದ್ದ.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಮೇಲೂ ಉಗ್ರರ ಕರಿನೆರಳು; ತುರ್ತಾಗಿ ಭದ್ರತೆ ಹೆಚ್ಚಿಸಿದ ಡಿಜಿ & ಐಜಿಪಿ ಅಲೋಕ್ ಮೋಹನ್
2021 ರಲ್ಲಿ ಮಂಗಳೂರು ಬಳಿ 38 ಶ್ರೀಲಂಕಾ ಪ್ರಜೆಗಳ ಬಂಧನ ಮಾಡಲಾಗಿತ್ತು. ಈ ಬಗ್ಗೆ ಎನ್ಐಎಯಲ್ಲಿ ಪ್ರಕರಣ ದಾಖಲಾಗಿತ್ತು. ವೇಲು ಪಿಳ್ಳೈ ಪ್ರಭಾಕರನ್ ಹತ್ಯೆ ಬಳಿಕ LTTE ಉಗ್ರರಿಗೆ ಆಶ್ರಯ ಕೊಡಿಸುತ್ತಿದ್ದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ