ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ ಸಿಕ್ತು 1ಕೋಟಿಗೂ ಅಧಿಕ ವಿದೇಶಿ ಹಣ

|

Updated on: Apr 10, 2023 | 11:17 AM

ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಕೋಟಿಗೂ ಅಧಿಕ ವಿದೇಶಿ ಹಣವನ್ನ ಏರ್ಪೋಟ್ ಭದ್ರತಾ ಸಿಬ್ಬಂದಿಯು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ನಡೆದಿದೆ.

ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ ಸಿಕ್ತು 1ಕೋಟಿಗೂ ಅಧಿಕ ವಿದೇಶಿ ಹಣ
ಅಕ್ರಮ ವಿದೇಶಿ ಹಣ ಜಪ್ತಿ
Follow us on

ಬೆಂಗಳೂರು: ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಕೋಟಿಗೂ ಅಧಿಕ ವಿದೇಶಿ ಹಣವನ್ನ ಏರ್ಪೋಟ್ ಭದ್ರತಾ ಸಿಬ್ಬಂದಿಯು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ನಡೆದಿದೆ. ಕೆಂಪೇಗೌಡ ಏರ್ಪೋರ್ಟ್(Kempegowda Airport) ನಿಂದ ಬ್ಯಾಂಕಾಕ್​ಗೆ ಸಾಗಾಟ ಮಾಡುತ್ತಿದ್ದ ವೇಳೆ, ಮೂವರು ಪ್ರಯಾಣಿಕರಿಂದ 1.41ಕೋಟಿ ರೂಪಾಯಿ‌ಯನ್ನ ವಶಕ್ಕೆ ಪಡೆದಿದ್ದಾರೆ. ಯುಎಸ್ಡಿ, ಯುರೋ, ಸ್ಪಿಸ್, ಪ್ರಾನ್ಸ್, ಮತ್ತು ಥಾಯ್ ದೇಶದ ಕರೆನ್ಸಿ ಇದಾಗಿದೆ. ಬ್ಯಾಗ್​ನಲ್ಲಿಟ್ಟುಕೊಂಡು ವಿಮಾನ ಹತ್ತುವ ಮುನ್ನ ಸೆಕ್ಯುರಿಟಿ ಚೆಕಿಂಗ್ ಸಂದರ್ಭದಲ್ಲಿ ಮೂವರು ಆರೋಪಿಗಳ ಸಮೇತ ಹಣವನ್ನ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.

ಮದ್ಯದ ಅಮಲಿನಲ್ಲಿ ವಿಮಾನದ ಎಕ್ಸಿಟ್ ಡೋರ್​ ತೆಗೆಯಲು ಯತ್ನಿಸಿದ್ದ ಪ್ರಯಾಣಿಕ

ಬೆಂಗಳೂರು: ಮದ್ಯದ ಅಮಲಿನಲ್ಲಿ ಸಹ‌ ಪ್ರಯಾಣಿಕನ‌ ಜೊತೆ ಕಿರಿಕ್ ನಡೆಸಿ ವಿಮಾನದ ಪ್ಲಾಪ್ ಆಪ್ ದಿ ಒವರ್ ವಿಂಗ್ ಎಕ್ಸಿಟ್ ಡೋರ್ ತೆಗೆಯಲು ಯತ್ನಿಸಿದ ಘಟನೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ 6E308 ವಿಮಾನದಲ್ಲಿ ಏಪ್ರಿಲ್​.8 ರಂದು ನಡೆದಿತ್ತು. ಹೌದು ಕುಡಿದ ನಶೆಯಲ್ಲಿ ಪ್ರತೀಕ್ ಎಂಬುವವನು ಸಹ ಪ್ರಯಾಣಿಕನ ಜೊತೆ ಜಗಳ ಮಾಡಿ, ಎಕ್ಸಿಟ್ ಡೋರ್ ತೆಗೆಯಲು ಯತ್ನಿಸಿದ್ದ. ಇತನ ವರ್ತನೆಯಿಂದ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಬಳಿಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಆತನನ್ನ ಬಂಧಿಸಲಾಗಿತ್ತು.

ಇದನ್ನೂ ಓದಿ:ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕದ್ದು ಮುಚ್ಚಿ ಮಹಿಳೆಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಯ ಬಂಧನ

ಮಾ.5ರಂದು ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದ ಯುವತಿ

ಮಾ.5ರಂದು ರಾತ್ರಿ 9.50ಕ್ಕೆ ಕೋಲ್ಕತ್ತಾದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕ ಎಂಬ ಯುವತಿ ಇಂಡಿಗೋ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಳು. ವಿಮಾನ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆ ಮುನ್ನ ಸಿಗರೇಟ್ ಸೇದಿದ್ದಳು. ಶೌಚಾಲಯ ಬಾಗಿಲು ತೆಗಿಸಿದಾಗ ಡಸ್ಟ್ ಬಿನ್​ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿತ್ತು. ಸಿಗರೇಟ್ ಕಂಡು ತಕ್ಷಣ ಸಿಬ್ಬಂದಿ ಡಸ್ಟ್ ಬಿನ್​ಗೆ ನೀರು ಸುರಿದಿದ್ದರು. ಬಳಿಕ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆ ಯುವತಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇತರರ ಜೀವ & ವೈಯಕ್ತಿಕ ಸುರಕ್ಷತೆಗೆ ಅಪಾಯ ಆರೋಪದಡಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ