World’s Largest Plane: ಬೆಂಗಳೂರಿಗೆ ಬಂದಿಳಿದ ವಿಶ್ವದ ಅತಿದೊಡ್ಡ ವಿಮಾನ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೆಂಪೇಗೌಡ ಏರ್ಪೋರ್ಟ್
ಎಮಿರೇಟ್ಸ್ ಏರ್ಲೈನ್ಸ್ನ ಡಬಲ್ ಡೆಕ್ಕರ್ ವಿಮಾನ ದುಬೈನಿಂದ ಕರ್ನಾಟಕದ ರಾಜಧಾನಿಗೆ ಬಂದಿದೆ. ಎಮಿರೇಟ್ಸ್ ವಿಮಾನಯಾನ ಕಂಪನಿಯ ದೊಡ್ಡ ವಿಮಾನ ಇದಾಗಿದ್ದು, 500ಕ್ಕೂ ಹೆಚ್ಚು ಸೀಟ್ಗಳು ಸೇರಿ, ಹಲವು ವಿಶೇಷತೆಗಳನ್ನು ಹೊಂದಿದೆ.
ವಿಶ್ವದ ಅತಿದೊಡ್ಡ ವಿಮಾನವನ್ನು ನೀವು ಯಾವತ್ತೂ ನೋಡಿರಲು ಸಾಧ್ಯವಿಲ್ಲ ಆದರೆ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ನಿನ್ನೆ (ಅ.14) ಸಾಕ್ಷಿಯಾಗಿದೆ. ಏರ್‌ಬಸ್ A380, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ನಿಗದಿತ ಸಮಯಕ್ಕಿಂತ ಎರಡು ವಾರಗಳ ಮುಂಚಿತವಾಗಿ ಬಂದಿಳಿದಿದೆ. ಎಮಿರೇಟ್ಸ್ ಏರ್ಲೈನ್ಸ್ನ ಡಬಲ್ ಡೆಕ್ಕರ್ ವಿಮಾನ ದುಬೈನಿಂದ ಕರ್ನಾಟಕದ ರಾಜಧಾನಿಗೆ ಬಂದಿದೆ. ಎಮಿರೇಟ್ಸ್ ವಿಮಾನಯಾನ ಕಂಪನಿಯ ದೊಡ್ಡ ವಿಮಾನ ಇದಾಗಿದ್ದು, 500ಕ್ಕೂ ಹೆಚ್ಚು ಸೀಟ್ಗಳು ಸೇರಿ, ಹಲವು ವಿಶೇಷತೆಗಳನ್ನು ಹೊಂದಿದೆ.
ಇದನ್ನು ಓದಿ: ಮುರುಘಾ ಶರಣರ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ, ಡಿಸಿ, ಎಸ್ಪಿಗೆ ದೂರು: ಪ್ರಕರಣ ಮತ್ತಷ್ಟು ಗಂಭೀರ
ಎಮಿರೇಟ್ಸ್‌ನ ಇಕೆ 562 ವಿಮಾನವು ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಶುಕ್ರವಾರ ಮಧ್ಯಾಹ್ನ 3:40 ರ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣ ಪ್ರವೇಶಿಸಿತ್ತು. ನಂತರ ಸಂಜೆ ಬೆಂಗಳೂರಿನಿಂದ ದುಬೈಗೆ ಹಿಂತಿರುಗಿದೆ. ಬೆಂಗಳೂರಿನಿಂದ ಐಕಾನಿಕ್ ವಿಮಾನವನ್ನು ಹತ್ತುವ ಪ್ರಯಾಣಿಕರಿಗೆ ಇದು ಮೊದಲ ಐಷಾರಾಮಿ ಹಾರಾಟದ ಅನುಭವವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
The Emirates Airbus A380 will land at #BLRAirport on Oct 14. Our teams are gearing up for this historic maiden flight to #BLR. Our engineers and operations team are testing infrastructure and processes. We are waiting for the big day with bated breath.#Emirates #Smoothlanding pic.twitter.com/Ly0hUK3CFb
— BLR Airport (@BLRAirport) October 12, 2022
ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಈ ಬೃಹತ್ ವಿಮಾನ ಎಮಿರೇಟ್ಸ್ ಏರ್‌ಬಸ್ A380 ಬರಮಾಡಿಕೊಂಡಿದ್ದು, ಇದೊಂದು ಐತಿಹಾಸಿಕ ಕ್ಷಣಕ್ಕೆ ಕಾರಣವಾಗಿದೆ, ನಮ್ಮ ಕಾರ್ಯ ನಿರ್ವಾಹಕ ತಂಡಗಳು ಈ ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿವೆ. ನಮ್ಮ ಎಂಜಿನಿಯರ್‌ಗಳು ಮತ್ತು ಕಾರ್ಯಾಚರಣೆ ತಂಡವು ಮೂಲಸೌಕರ್ಯ ಮತ್ತು ಪ್ರಕ್ರಿಯೆಗಳನ್ನು ಪರೀಕ್ಷಿಸುತ್ತಿದೆ. ಈ ದಿನಕ್ಕಾಗಿ ಹಲವು ದಿನಗಳಿಂದ ಕಾಯುತ್ತಿದ್ದೇವೆ ಎಂದು ವಿಮಾನ ಬರುವ ಮೊದಲು BLR ಏರ್ಪೋರ್ಟ್ನ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.
Is it a Bird? Is it a Plane? It’s an A380! The superjumbo to arrive shortly.#Emirates #EmiratesA380 #A380 #Airbus #Bengaluru #Dubai #Kempegowdainternationalairport #Karnatakatourism #BLRConnects #Smoothlanding #Biggestpassengeraircraft #Aviationgeeks #Aviation #Touchdown pic.twitter.com/ip2EZoUnjw
— BLR Airport (@BLRAirport) October 14, 2022
ಈ ವಿಮಾನ ಬರುವ ಬಗ್ಗೆ ಸಾರ್ವಜನಿಕರಲ್ಲೂ ಕುತೂಹಲ ಸೃಷ್ಟಿಯಾಗಿತ್ತು. ಈ ಫೋಸ್ಟ್ ಮಾಡಿ ರವಿಕುಮಾರ್ ಎಂಬವವರು ದಯವಿಟ್ಟು ಐತಿಹಾಸಿಕ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಿರಿ ಎಂದು ಕಮೆಂಟ್ ಮಾಡಿದ್ದರು. ಶ್ರೀನಿವಾಸ ರೆಡ್ಡಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಇದು ಎಲ್ಲಾ ಬೆಂಗಳೂರು ವಿಮಾನ ವೀಕ್ಷಕರಿಗೆ ಅದ್ಭುತ ಕ್ಷಣವಾಗಿದೆ. ನಮ್ಮ ಬೆಂಗಳೂರಿಗೆ ಇಂತಹ ಮಹತ್ತರ ವಿಚಾರಕ್ಕೆ ಪ್ರಾಮುಖ್ಯತೆ ನೀಡಿದ್ದಕ್ಕಾಗಿ emirates ಧನ್ಯವಾದಗಳು ಎಂದು ಹೇಳಿದ್ದಾರೆ.
Published On - 11:50 am, Fri, 14 October 22