ಶಾಸಕಿ ಸೌಮ್ಯಾರೆಡ್ಡಿ ಕಾರು ಸೀಜ್ ಪ್ರಕರಣ; ಕಾರು ಚಾಲಕನ ವಿರುದ್ದ FIR ದಾಖಲು
ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ (Sowmya Reddy) ಕಾರು ಸೀಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲೈಯಿಂಗ್ ಸ್ಕ್ವಾಡ್ ನೀಡಿದ ದೂರು ಆಧರಿಸಿ ಕಾರು ಚಾಲಕ ರಾಮಚಂದ್ರಪ್ಪ ವಿರುದ್ಧ FIR ದಾಖಲು ಮಾಡಲಾಗಿದೆ.
ಬೆಂಗಳೂರು: ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ (Sowmya Reddy) ಕಾರು ಸೀಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲೈಯಿಂಗ್ ಸ್ಕ್ವಾಡ್ ನೀಡಿದ ದೂರು ಆಧರಿಸಿ ಕಾರು ಚಾಲಕ ರಾಮಚಂದ್ರಪ್ಪ ವಿರುದ್ಧ FIR ದಾಖಲು ಮಾಡಲಾಗಿದೆ. ಮಾರೇನಹಳ್ಳಿ ಚೆಕ್ಪೋಸ್ಟ್ ಬಳಿ ಏಪ್ರಿಲ್. 6 ರಂದು ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿಗೆ ಸೇರಿದ್ದ ಇನೋವಾ ಕಾರನ್ನ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ವೇಳೆ 2 ಲಕ್ಷ ಮೌಲ್ಯದ ಸೀರೆಗಳು, ಮೊಬೈಲ್ ಸೇರಿ ಇತರೆ ವಸ್ತುಗಳನ್ನ ಸೀಜ್ ಮಾಡಲಾಗಿತ್ತು. ಬಳಿಕ ವಿಚಾರಣೆ ವೇಳೆ ಈ ವಸ್ತುಗಳಿಗೆ ಯಾವುದೇ ದಾಖಲೆ ನೀಡಿರಲಿಲ್ಲ. ಹೀಗಾಗಿ ತಿಲಕ್ನಗರ ಠಾಣೆ ಪೊಲೀಸರು ಸೌಮ್ಯಾರೆಡ್ಡಿ ಕಾರು ಚಾಲಕನ ಮೇಲೆ FIR ದಾಖಲು ಮಾಡಿದ್ದಾರೆ.
ಏಪ್ರಿಲ್ 6 ರಂದು ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿಯವರಿಗೆ ಸೇರಿದ್ದ ಕಾರು ಜಪ್ತಿ ಮಾಡಲಾಗಿತ್ತು
ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಇನೋವಾ ಕಾರನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ತಿಲಕನಗರ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ಮತದಾರರಿಗೆ ಹಂಚಲು ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವಾಗ ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರನ್ನು ಜಪ್ತಿ ಮಾಡಿ, ಅದರಲ್ಲಿರುವ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಕಾರನ್ನು ತಿಲಕನಗರ ಠಾಣೆ ಆವರಣದಲ್ಲಿ ನಿಲುಗಡೆ ಮಾಡಲಾಗಿತ್ತು. ಚಾಲಕ ರಾಮಚಂದ್ರಪ್ಪ ಎಂಬುವರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಕಾರು ವಶಕ್ಕೆ ಪಡೆಯಲಾಗಿದ್ದು, ರಾಮಚಂದ್ರ ವಿರುದ್ಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರಿನಲ್ಲಿ ಏನೇನು ಸಿಕ್ಕಿತ್ತು?
ಮೊಬೈಲ್ಗಳು, 23 ಸೀರೆಗಳು, 23 ಬ್ಲೌಸ್ ಪೀಸ್, 16 ಶಾಲು, 150 ಪ್ರೋಗ್ರೆಸ್ ರಿಪೋರ್ಟ್ ಇರುವ ಬುಕ್ಲೆಟ್ಸ್, ಸ್ಯಾಮ್ಸಂಗ್, ನೋಕಿಯಾ ಆ್ಯಂಡ್ರಾಯ್ಡ್ ಮೊಬೈಲ್ಗಳನ್ನು ಮತದಾರರಿಗೆ ಹಂಚಲು ಕಾರಿನಲ್ಲಿ ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಮತದಾರರಿಗೆ ಆಮಿಷವೊಡ್ಡುವ, ಉಡುಗೊರೆ, ನಗದು ಹಂಚುವ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ, ಅಂದರೆ ಮಾರ್ಚ್ 29ರ ನಂತರ ಒಂದು ವಾರದ ಅವಧಿಯಲ್ಲಿ ಚುನಾವಣಾ ಅಧಿಕಾರಿಗಳು, ಪೊಲೀಸರು 69.36 ಕೋಟಿ ರೂ. ಮೌಲ್ಯದ ನಗದು, ಉಡುಗೊರೆ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ