ಬೆಂಗಳೂರಿನಲ್ಲಿ ನಟೋರಿಯಸ್ ವಿದೇಶಿ ಫೆಡ್ಲರ್ಗಳ ಬಂಧನ; 7 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ನಟೋರಿಯಸ್ ವಿದೇಶಿ ಡ್ರಗ್ ಫೆಡ್ಲರ್ಗಳನ್ನ ವಿವಿಪುರಂ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ಡ್ರಗ್ಸ್ನ್ನು ಸೀಜ್ ಮಾಡಲಾಗಿದೆ.
ಬೆಂಗಳೂರು: ನಟೋರಿಯಸ್ ವಿದೇಶಿ ಡ್ರಗ್ ಫೆಡ್ಲರ್ಗಳನ್ನ ವಿವಿಪುರಂ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಲಾರೆನ್ಸ್ ಹಾಗೂ ಚುಕ್ವೂನೇಜಿಮ್ ಬಂಧಿತ ಡ್ರಗ್ ಫೆಡ್ಲರ್ಗಳು. ಇನ್ನು ಈ ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ಡ್ರಗ್ಸ್ನ್ನು ಸೀಜ್ ಮಾಡಲಾಗಿದೆ. 1.85 ಕೆ.ಜಿ ಬಿಳಿ ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ (White MDMA) 1.15kg ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ (Brown MDMA) 310 ಗ್ರಾಂ ಕೊಕೇನ್(Cocaine) ಅನ್ನು ಜಫ್ತಿ ಮಾಡಲಾಗಿದ್ದು, ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ವಿದೇಶಿ ಡ್ರಗ್ ಫೆಡ್ಲರ್ಗಳು ಸಾಫ್ಟ್‌ವೇರ್ ಇಂಜನಿಯರ್, ದೊಡ್ಡ ದೊಡ್ಡ ಉದ್ಯಮಿಗಳನ್ನ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಸುಮಾರು ಐದು ವರ್ಷಗಳಿಂದ ಮಾರಾಟ ಮಾಡುತ್ತಿದ್ದ ಫೆಡ್ಲರ್ಸ್ಗಳು ಇದುವರೆಗೂ ನಗರದಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸದ್ಯ ಇಬ್ಬರು ಫೆಡ್ಲರ್ಗಳ ಮೊಬೈಲ್ನ್ನು ವಶಕ್ಕೆ ಪಡೆದಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ:ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟ: 65 ಲಕ್ಷ ಮೌಲ್ಯದ ಚಿನ್ನ ಸಮೇತ ಓರ್ವ ವ್ಯಕ್ತಿ ವಶಕ್ಕೆ
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2.5 ಲಕ್ಷ ಮೌಲ್ಯದ ಗೋವಾ ಮದ್ಯ ವಶ
ಉತ್ತರ ಕನ್ನಡ: ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2.5 ಲಕ್ಷ ಮೌಲ್ಯದ ಗೋವಾ ಮದ್ಯವನ್ನ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹಾರವಾರಡ ಮತ್ತು ಬೆಳಂಬಾರದಲ್ಲಿ ದಾಳಿ ನಡೆಸಿದ್ದ ಅಂಕೋಲಾ ಅಬಕಾರಿ ಪೊಲೀಸರು, ಹಾರವಾಡದ ಸೀಬಡ್೯ ಕಾಲೋನಿ ಗ್ರಾಮ ಪಂಚಾಯತ್ ರಸ್ತೆಯ ಚರಂಡಿಯ ಕೆಳಬಾಗದಲ್ಲಿ ಸಂಗ್ರಸಿಟ್ಟಿದ್ದ 370.6 ಲೀಟರ್ ಮದ್ಯವನ್ನ ವಶಕ್ಕೆ ಪಡೆದು ಆರೋಪಿಗಳಿಗಾಗಿ ಬಲೆ ಬಿಸಿದ್ದು, ಅಂಕೋಲ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ