Bangalore: ಬೆಂಗಳೂರು ನಂದಿ ಹಾಲ್ಟ್ ರೈಲು ನಿಲ್ದಾಣದಲ್ಲಿ ಹೊಸ ಆಕರ್ಷಣೆ: ರೈಲು ಮ್ಯೂಸಿಯಂ ಆರಂಭ

ನಂದಿ ಹಾಲ್ಟ್ ರೈಲು ನಿಲ್ದಾಣದಲ್ಲಿ ರೈಲು ವಸ್ತುಸಂಗ್ರಹಾಲಯ ಆರಂಭಗೊಂಡಿದ್ದು ಹಳೆಯ ಕೋಚ್‌ಗಳಿಂದ ರಚಿಸಲಾದ ಮಿನಿ ರೆಸ್ಟೋರೆಂಟ್, ಕಬ್ಬನ್ ಪಾರ್ಕ್‌ನಲ್ಲಿರುವಂತಹ ಆಟಿಕೆ ರೈಲು ಇಲ್ಲಿನ ಮುಖ್ಯ ಆಕರ್ಷಣೆಗಳಾಗಿವೆ.

Bangalore: ಬೆಂಗಳೂರು ನಂದಿ ಹಾಲ್ಟ್ ರೈಲು ನಿಲ್ದಾಣದಲ್ಲಿ ಹೊಸ ಆಕರ್ಷಣೆ: ರೈಲು ಮ್ಯೂಸಿಯಂ ಆರಂಭ
ನಂದಿ ಹಾಲ್ಟ್ ರೈಲು ನಿಲ್ದಾಣ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 10, 2023 | 11:45 AM

ಯಲುವಹಳ್ಳಿಯ 107 ವರ್ಷ ಹಳೆಯ ನಂದಿ ಹಾಲ್ಟ್ ರೈಲು ನಿಲ್ದಾಣ(Nandi Halt Railway Station) ಆವರಣದಲ್ಲಿ, 7 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬೆಂಗಳೂರು ರೈಲ್ವೆ ವಿಭಾಗದ ಮೊದಲ ರೈಲು ವಸ್ತುಸಂಗ್ರಹಾಲಯ ಮತ್ತು ರೈಲು ಪಾರ್ಕ್ ನಿರ್ಮಾಣ ಪ್ರಾರಂಭವಾಗಿದೆ. ಇಲ್ಲಿಂದ ಸುಮಾರು 20 ಕಿ.ಮೀ ದೂರದಲ್ಲಿ ನಂದಿ ಬೆಟ್ಟ ಮತ್ತು ಇತ್ತೀಚೆಗೆ ಅನಾವರಣಗೊಂಡ ಆದಿ ಯೋಗಿ ಶಿವನ ಪ್ರತಿಮೆ ಇದ್ದು ಪ್ರವಾಸಿ ತಾಣಗಳೊಂದಿಗೆ ಈ ಜಾಗ ಹೆಣೆದುಕೊಂಡಿರುವುದರಿಂದ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರು ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಮಾತನಾಡಿ, ಮೊದಲ ಹಂತವನ್ನು 2.38 ಕೋಟಿ ರೂ.ಗಳ ವೆಚ್ಚದಲ್ಲಿ ಸಿದ್ಧಪಡಿಸಲಾಗುತ್ತಿದೆ. ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ವರ್ಷಾಂತ್ಯದ ವೇಳೆಗೆ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ. ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಇದರ ಔಟ್ ಆಫ್ ಟರ್ನ್ (ಒಟಿ) ಪಾವತಿಯನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ಮೈಸೂರು ಮತ್ತು ಹುಬ್ಬಳ್ಳಿ ತಮ್ಮದೇ ಆದ ರೈಲು ವಸ್ತುಸಂಗ್ರಹಾಲಯಗಳನ್ನು ಹೊಂದಿದ್ದು ಇದು ಬೆಂಗಳೂರಿಗೆ ಮೊದಲನೆಯದಾಗಿದೆ ಎಂದರು.

ನಗರ ಮೂಲದ ಬಿಂದು ಏಜೆನ್ಸಿ ಮ್ಯೂಸಿಯಂನ ಗುತ್ತಿಗೆಯನ್ನು ಪಡೆದುಕೊಂಡಿದೆ. ಹಳೆಯ ಬೋಗಿಗಳಿಂದ ರಚಿಸಲಾದ ಮಿನಿ ರೆಸ್ಟೋರೆಂಟ್, ಕಬ್ಬನ್ ಪಾರ್ಕ್ ನಂತಹ ಆಟಿಕೆ ರೈಲು, 3 ಡಿ ಆರ್ಟ್ ಗ್ಯಾಲರಿ ಮತ್ತು ಕ್ಯೂಆರ್ ಸಕ್ರಿಯಗೊಳಿಸಿದ ಚಿತ್ರ ಪೋಸ್ಟ್ ಕಾರ್ಡ್ ಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ. ಅವುಗಳನ್ನು ವಿವಿಧ ನಿಲ್ದಾಣಗಳಿಂದ ಸಂಗ್ರಹಿಸಿದ ಪ್ರಾಚೀನ ಬೆಂಚುಗಳು, ಹಳಿಗಳು, ಬೋಗಿಗಳು ಮತ್ತು ವಸಾಹತುಶಾಹಿ ಯುಗದ ಪೀಠೋಪಕರಣಗಳನ್ನು ತಂದು ಜೋಡಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: 105 ವರ್ಷ ಇತಿಹಾಸವಿರುವ ಬೆಂಗಳೂರಿನ ದೊಡ್ಡಜಾಲ ರೈಲ್ವೆ ನಿಲ್ದಾಣದ ನವೀಕರಣಕ್ಕೆ ಚಾಲನೆ

ನಂದಿ ಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ಮೂಲಕ ಹರಿಯುವ ಶುಷ್ಕ ದಕ್ಷಿಣ ಪಿನ್ನಕಿನಿ ನದಿಯನ್ನು ಪುನರುಜ್ಜೀವನಗೊಳಿಸುವುದು ಇದರ ಮುಖ್ಯ ಉದ್ದೇಶ ಎಂದು ಎಡಿಆರ್ ಎಂ ತಿಳಿಸಿದೆ. “ನಾವು ಮೊದಲು ರೈಲು ವಸ್ತುಸಂಗ್ರಹಾಲಯವನ್ನು ಕೆಎಸ್ಆರ್ ರೈಲ್ವೆ ನಿಲ್ದಾಣದ ಒಳಗೆ ಸಿದ್ಧಪಡಿಸಲು ಬಯಸಿದ್ದೆವು. ಆದರೆ ಸೀಮಿತ ಭೂಮಿಯ ಲಭ್ಯತೆ ಮತ್ತು ಭಾರಿ ವೆಚ್ಚದ ಪರಿಣಾಮ 15 ಎಕರೆ ಭೂಮಿಯನ್ನು ಹೊಂದಿರುವ ನಂದಿ ಹಾಲ್ಟ್ ನಿಲ್ದಾಣದ ಕ್ಯಾಂಪಸ್ ಅನ್ನು ಆಯ್ಕೆ ಮಾಡಿದೆವು, ಇದರಲ್ಲಿ ಅರ್ಧದಷ್ಟು ಸ್ಥಳ ಮಾತ್ರ ವಸ್ತುಸಂಗ್ರಹಾಲಯಕ್ಕೆ ಅಗತ್ಯವಿದೆ” ಎಂದು ಅವರು ಹೇಳಿದರು.

ಸ್ಕ್ರ್ಯಾಪ್ ಎಂದು ಪರಿಗಣಿಸಲಾದ ವಸ್ತುಗಳು ರೈಲ್ವೆಗೆ ಹೆಚ್ಚಿನ ಐತಿಹಾಸಿಕ ಮಹತ್ವವನ್ನು ಹೊಂದಿವೆ ಎಂದು ಹರಿಪ್ರಸಾದ್ ಹೇಳಿದರು. “ಚನ್ನಪಟ್ಟಣ, ಮದ್ದೂರು ಮತ್ತು ಹೆಜ್ಜಾಲ ಸೇರಿದಂತೆ ಇತರ ನಿಲ್ದಾಣಗಳಿಂದ ಪ್ರಾಚೀನ ಡ್ರೆಸ್ಸಿಂಗ್ ಟೇಬಲ್ ಮತ್ತು ಡೈನಿಂಗ್ ಟೇಬಲ್ ಜೊತೆಗೆ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇತರ ಹಳೆಯ ವಸ್ತುಗಳನ್ನು ಸಂಗ್ರಹಿಸಲಾಗಿದೆ.

Published On - 11:45 am, Mon, 10 April 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ