ಪ್ರವಾಸಕ್ಕೆ ತೆರಳುವ ಆಲೋಚನೆ ಇದ್ದರೆ ಕೊಡಗಿನ ಈ 15 ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ

ಪ್ರವಾಸಕ್ಕೆ ಹೋಗಲು ಆಲೋಚಿಸುತ್ತಿರುವವರು, ಸುಂದರ ಪ್ರವಾಸಿ ತಾಣದ ಹುಡುಕಾಟದಲ್ಲಿದ್ದರೆ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಕಡೆಗೆ ಗಮನಹರಿಸಬಹುದು. ಹಾಗಿದ್ದರೆ ಕೊಡಗಿನಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪ್ರವಾಸಕ್ಕೆ ತೆರಳುವ ಆಲೋಚನೆ ಇದ್ದರೆ ಕೊಡಗಿನ ಈ 15 ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ
ಕೊಡಗು ಬೆಟ್ಟ
Follow us
TV9 Web
| Updated By: preethi shettigar

Updated on: Oct 23, 2021 | 4:20 PM

ಪ್ರವಾಸಕ್ಕೆ ತೆರಳುವುದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸುಂದರವಾದ ಪ್ರಕೃತಿಯ ನಡುವೆ ಒಂದಷ್ಟು ಸಮಯವನ್ನು ಕಳೆಯುವುದು ಎಂತವರಿಗೂ ಖುಷಿ ನೀಡುತ್ತದೆ. ಕೆಲಸದ ಒತ್ತಡ, ಬದಲಾದ ಜೀವನಶೈಲಿಯ ನಡುವೆ ಒಂದಷ್ಟು ಬಿಡುವು ಬೇಕೆ ಬೇಕು. ಆಫೀಸ್, ಶಾಲಾ-ಕಾಲೇಜುಗಳಿಗೆ ರಜೆ ಸಿಕ್ಕಾಗ ಇಂತಹದೊಂದು ಆಲೋಚನೆ ಎಲ್ಲರಲ್ಲೂ ಬಂದೆ ಬರುತ್ತದೆ. ಅದರಲ್ಲೂ ಇನ್ನೇನು ದೀಪಾವಳಿ ಹಬ್ಬ ಬರುತ್ತಿದ್ದು, ಸಾಲು ಸಾಲು ರಜೆಗಳು ಅದರ ಜತೆಗೆ ಬರುತ್ತಿದೆ. ಹೀಗಾಗಿ ಪ್ರವಾಸಕ್ಕೆ ಹೋಗಲು ಆಲೋಚಿಸುತ್ತಿರುವವರು, ಸುಂದರ ಪ್ರವಾಸಿ ತಾಣದ ಹುಡುಕಾಟದಲ್ಲಿದ್ದರೆ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಕಡೆಗೆ ಗಮನಹರಿಸಬಹುದು. ಹಾಗಿದ್ದರೆ ಕೊಡಗಿನಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೈಸೂರಿನಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿರುವ ಕೊಡಗು ಜಿಲ್ಲೆಗೆ ನೀವು ಭೇಟಿ ನೀಡಬಹುದು. ಅದರಲ್ಲೂ ಕೊಡಗಿನ ಈ 15 ಪ್ರವಾಸಿ ತಾಣಗಳು ಎಂತರವನ್ನು ಕೂಡ ತನ್ನತ್ತ ಸೆಳೆಯುತ್ತದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮಡಿಕೆರಿಯಲ್ಲಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅರೂಪದ ವನ್ಯಜೀವಿಗಳನ್ನು ಹೊಂದಿದೆ. ರಾಜೀವ್ ಗಾಂಧಿ ಪಾರ್ಕ್ ಎಂದೂ ಕರೆಯಲ್ಪಡುವ ಈ ಸ್ಥಳವು ದಟ್ಟವಾದ ಕಾಡುಗಳಿಂದ ಸುತ್ತುವರಿದಿದೆ. ವಿವಿಧ ರೀತಿಯ ಪ್ರಾಣಿಗಳು ಮತ್ತು 270 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿ ನೆಲೆ ನಿಂತಿದೆ. ರಾಷ್ಟ್ರೀಯ ಉದ್ಯಾನವು ಮೂಲಭೂತವಾಗಿ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಅದಾಗ್ಯೂ, ಆನೆ, ಜಿಂಕೆಗಳಂತಹ ಇತರ ಪ್ರಾಣಿಗಳು ನಾಗರಹೊಳೆ ಉದ್ಯಾನವನದಲ್ಲಿದೆ. ಇನ್ನು ಉದ್ಯಾನವನದ ಆವರಣದೊಳಗೆ ಇರುವ ಲಾಡ್ಜ್‌ಗಳು ಕೂಡ ಪ್ರವಾಸಿಗರಿಗೆ ಪೂರಕವಾಗಿದೆ.

tiger

ಹುಲಿ ಚಿತ್ರ ಕೃಪೆ: indianholiday.com

ಅಬ್ಬಿ ಫಾಲ್ಸ್ ದಕ್ಷಿಣ ಭಾರತದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾದ ಅಬ್ಬಿ ಜಲಪಾತವು ಮಡಿಕೇರಿಯ ಸೌಂದರ್ಯದ ಹೆಚ್ಚಳಕ್ಕೆ ಪ್ರಮುಖ ಕೊಡುಗೆ ನೀಡುತ್ತದೆ. ಭವ್ಯವಾದ ಪಶ್ಚಿಮ ಘಟ್ಟಗಳ ಮೂಲಕ ಧುಮುಕುವ ಈ ಜಲಪಾತವು ಮಂಜು, ಮೋಡ, ಸುತ್ತಮುತ್ತಲಿನ ಕಾಡು ಪ್ರದೇಶದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮಡಿಕೇರಿ ಪಟ್ಟಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಸುಂದರವಾದ ಈ ಜಲಪಾತವು ಚಹಾ ಮತ್ತು ಕಾಫಿ ತೋಟಗಳ ನಡುವೆ ನೆಲೆಗೊಂಡಿದೆ. ನೀವು ಅಬ್ಬಿ ಜಲಪಾತದ ಸೌಂದರ್ಯವನ್ನು ಸಂಪೂರ್ಣವಾಗಿ ಆನಂದಿಸಲು ಬಯಸಿದರೆ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ.

ವಿಮಾನ ನಿಲ್ದಾಣ: ಮಂಗಳೂರು ವಿಮಾನ ನಿಲ್ದಾಣದಿಂದ ಅಬ್ಬಿ ಫಾಲ್ಸ್​ಗೆ 152.4 ಕಿಲೋಮೀಟರ್ ರೈಲು ನಿಲ್ದಾಣ: ಮೈಸೂರು ರೈಲು ನಿಲ್ದಾಣದಿಂದ 121.6 ಕಿಲೋಮೀಟರ್

ABBEY FALLS

ಅಬ್ಬಿ ಫಾಲ್ಸ್ ಚಿತ್ರ ಕೃಪೆ: indianholiday.com

ರಾಜನ ಆಸನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದು. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳು ಹೂವುಗಳಿಂದ ತುಂಬಿವೆ ಮತ್ತು ಹೂಬಿಡುವ ಅವಧಿಯಲ್ಲಿ ಈ ಪ್ರದೇಶ ತುಂಬಾ ಸುಂದರವಾಗಿ ಕಾಣುತ್ತವೆ. ಬೆಟ್ಟದ ಮೇಲಿನ ಈ ಸ್ಥಳವು ಸೂರ್ಯಾಸ್ತದ ಸಮಯದಲ್ಲಿನ ಸುಂದರವಾಗಿ ಕಾಣುತ್ತದೆ. ಇಲ್ಲಿನ ಮುಂಜಾನೆಯ ವಾತಾವರಣವು ತನ್ನದೇ ಆದ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ. ಮುಂಜಾನೆ ಈ ಸ್ಥಳವು ಮಂಜಿನಿಂದ ಆವೃತವಾಗಿರುತ್ತದೆ.

ವಿಮಾನ ನಿಲ್ದಾಣ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 146.6 ಕಿಲೋಮೀಟರ್ ರೈಲು ನಿಲ್ದಾಣ: ಮೈಸೂರು ಜಂಕ್ಷನ್​ನಿಂದ 117.1 ಕಿಲೋಮೀಟರ್

RAJAS SEAT

ರಾಜನ ಆಸನ ಚಿತ್ರ ಕೃಪೆ: indianholiday.com

ದುಬಾರೆ ಆನೆ ಶಿಬಿರ ದುಬಾರೆ ಆನೆ ಶಿಬಿರ ಕೂರ್ಗ್‌ನಲ್ಲಿ ಆನೆಗಳೊಂದಿಗೆ ಸ್ವಲ್ಪ ಸಮಯ ಕಳೆಯಲು ಇರುವ ಉತ್ತಮ ಅವಕಾಶ ಎಂದರೆ ತಪ್ಪಾಗುವುದಿಲ್ಲ. ಈ ದುಬಾರೆ ಆನೆ ಶಿಬಿರ ಮುಖ್ಯವಾಗಿ ಆನೆ ತರಬೇತಿ ಶಿಬಿರವಾಗಿದ್ದು, ಇದನ್ನು ಕರ್ನಾಟಕ ಸರ್ಕಾರವು ನಿರ್ವಹಿಸುತ್ತದೆ. ಆನೆಗಳ ಜೀವನಶೈಲಿಯನ್ನು ವೀಕ್ಷಿಸುವ ಅವಕಾಶವೂ ಇಲ್ಲಿ ಇದೆ. ಸೆಪ್ಟೆಂಬರ್ ಮತ್ತು ಮೇ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

ರೈಲು ನಿಲ್ದಾಣ: ಮೈಸೂರು ಜಂಕ್ಷನ್​ನಿಂದ 100 ಕಿಲೋಮೀಟರ್

DUBARE ELEPHANT CAMP

ದುಬಾರೆ ಆನೆ ಶಿಬಿರ

ಬ್ರಹ್ಮಗಿರಿ ಶಿಖರ ಈ ಶಿಖರವು ಒಂದು ಸುಂದರವಾದ ಸ್ಥಳವಾಗಿದ್ದು, ಇದು ಅತ್ಯಂತ ಅದ್ಭುತವಾದ ಹಾಗೂ ಮಂಜಿನ ಸುತ್ತಮುತ್ತಲಿನ ಪ್ರದೇಶಗಳಿಂದ ಕೂಡಿದೆ. ಈ ಅದ್ಭುತ ಶಿಖರವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ ಮತ್ತು ಟ್ರೆಕ್ಕಿಂಗ್​ಗೆ ಉತ್ತಮ ಸ್ಥಳವಾಗಿದೆ. ಅದ್ಭುತವಾದ ಹುಲ್ಲುಗಾವಲುಗಳು, ರೋಮಾಂಚಕ ಸಸ್ಯಗಳು ಮತ್ತು ಸ್ಪಷ್ಟವಾದ ನೀಲಿ ನೀರಿನ ತೊರೆಗಳ ಮೂಲಕ ಹಾದುಹೋಗುವುದು ಅತ್ಯದ್ಭುತ ಅನುಭವವಾಗಿದೆ. ಈ ಸ್ಥಳವು ಅತ್ಯಾಕರ್ಷಕ ವನ್ಯಜೀವಿ ಅಭಯಾರಣ್ಯವನ್ನು ಹೊಂದಿದೆ. ಇದರಲ್ಲಿ ಸಿಂಹ, ಜಂಗಲ್ ಕ್ಯಾಟ್, ಜಿಂಕೆ, ಅಳಿಲು, ನೀಲಗಿರಿ ಲಾಂಗೂರ್ ಮತ್ತು ಇತರ ಹಲವು ವಿಲಕ್ಷಣ ಜಾತಿಯ ಪ್ರಾಣಿಗಳಿವೆ.

ವಿಮಾನ ನಿಲ್ದಾಣ: ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 58 ಕಿಲೋಮೀಟರ್

ರೈಲು ನಿಲ್ದಾಣ: ಮೈಸೂರು ಜಂಕ್ಷನ್​ನಿಂದ 124.5 ಕಿಲೋಮೀಟರ್

BRAHMAGIRI PEAK

ಬ್ರಹ್ಮಗಿರಿ ಶಿಖರ ಚಿತ್ರ ಕೃಪೆ: indianholiday.com

ಓಂಕಾರೇಶ್ವರ ದೇವಸ್ಥಾನ ಮುಮ್ಮದನ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಅದ್ಭುತವಾದ ಓಂಕಾರೇಶ್ವರ ದೇವಾಲಯವನ್ನು 1820 ರಲ್ಲಿ ಶಿವನಿಗೆ ಸಮರ್ಪಿಸಲಾಗಿದೆ. 2ನೇ ಲಿಂಗರಾಜೇಂದ್ರ  ಬ್ರಾಹ್ಮಣನನ್ನು ಕೊಂದ ನಂತರ ಈ ದೇವಾಲಯವನ್ನು ನಿರ್ಮಿಸಲಾಯಿತು. ರಚನೆಯ ವಾಸ್ತುಶಿಲ್ಪವು ಗುಮ್ಮಟವನ್ನು ಹೊಂದಿದೆ ಮತ್ತು ದೇವಾಲಯದ ನಾಲ್ಕು ಮೂಲೆಗಳು ಗೋಪುರಗಳನ್ನು ಹೊಂದಿವೆ. ದೇವಾಲಯವು ಮುಂಭಾಗದಲ್ಲಿ ಸುಂದರವಾದ ಸರೋವರದಿಂದ ಅಲಂಕರಿಸಲ್ಪಟ್ಟಿದೆ. ಈ ಸರೋವರು ಹಲವಾರು ಬಗೆಯ ಮೀನುಗಳನ್ನು ಹೊಂದಿದೆ. ಓಂಕಾರೇಶ್ವರ ದೇವಾಲಯವು ಗೋಥಿಕ್ ಮತ್ತು ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪದ ಅದ್ಭುತ ಮಿಶ್ರಣವಾಗಿದೆ. ಆದ್ದರಿಂದ ಇದು ಕೆಲವೊಮ್ಮೆ ಮುಸ್ಲಿಂ ದರ್ಗಾವನ್ನು ಹೋಲುತ್ತದೆ.

ವಿಮಾನ ನಿಲ್ದಾಣ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 146.2 ಕಿಲೋಮೀಟರ್ ರೈಲು ನಿಲ್ದಾಣ: ಮೈಸೂರು ಜಂಕ್ಷನ್, 116.5 ಕಿಲೋಮೀಟರ್

OMKARESHWARA TEMPLE

ಓಂಕಾರೇಶ್ವರ ದೇವಸ್ಥಾನ ಚಿತ್ರ ಕೃಪೆ: indianholiday.com

ಇರ್ಪು ಜಲಪಾತ ಅಬ್ಬಿ ಜಲಪಾತದ ಜೊತೆಗೆ ಇರ್ಪು ಜಲಪಾತವು ಅತ್ಯಂತ ಸುಂದರವಾಗಿದೆ. ಇದು ಕೊಡಗಿನಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಇರ್ಪು ಜಲಪಾತದ ಕಥೆಯು ಒಂದು ದಂತಕಥೆಯೊಂದಿಗೆ ಸಂಬಂಧ ಹೊಂದಿದೆ. ರಾಮ ಮತ್ತು ಲಕ್ಷ್ಮಣ, ಮಾತೆ ಸೀತೆಯನ್ನು ಹುಡುಕುತ್ತಾ ಈ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ರಾಮನಿಗೆ ಬಾಯಾರಿಕೆಯಾಯಿತು. ಈ ಕಾರಣಕ್ಕೆ ಇಲ್ಲಿ ಲಕ್ಷ್ಮಣನು ಬಾಣವನ್ನು ಹೊಡೆಯುತ್ತಾನೆ. ಇದರಿಂದ ಇಲ್ಲಿ ಜಲ ಉಕ್ಕುತ್ತದೆ ಎಂದು ಹೇಳಲಾಗುತ್ತದೆ. ಇರ್ಪು ಜಲಪಾತವು 60 ಮೀಟರ್ ಎತ್ತರದಿಂದ ದುಮ್ಮಿಕ್ಕುತ್ತದೆ. ನಿಶ್ಯಬ್ದ ಕಾಡಿನಲ್ಲಿ ನೆಲೆಗೊಂಡಿರುವ, ಹರಿಯುವ ನೀರಿನ ಶಬ್ಧವು, ಪಕ್ಷಿ ಮತ್ತು ಪ್ರಕೃತಿಯ ಸಮ್ಮೋಹನಗೊಳನ್ನು ಒಳಗೊಂಡಿದೆ.

ವಿಮಾನ ನಿಲ್ದಾಣ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 221.7 ಕಿಲೋಮೀಟರ್. ರೈಲು ನಿಲ್ದಾಣ: ಮೈಸೂರು ಜಂಕ್ಷನ್​ನಿಂದ 106.2 ಕಿಲೋಮೀಟರ್

IRUPPU FALLS

ಇರ್ಪು ಜಲಪಾತ ಚಿತ್ರ ಕೃಪೆ: indianholiday.com

ಮಂಡಲಪಟ್ಟಿ ವ್ಯೂ ಪಾಯಿಂಟ್‌ ಸಮುದ್ರ ಮಟ್ಟದಿಂದ 1,600 ಅಡಿ ಎತ್ತರದಲ್ಲಿದೆ. ಮಂಡಲಪಟ್ಟಿ ವ್ಯೂ ಪಾಯಿಂಟ್ ಖಂಡಿತವಾಗಿಯೂ ಕೊಡಗಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಈ ಅದ್ಭುತ ಸ್ಥಳವನ್ನು ಅನುಭವಿಸಲು ಒಂದು ಉತ್ತಮ ಮಾರ್ಗವೆಂದರೆ ರೋಮಾಂಚಕ ಜೀಪ್ ಡ್ರೈವ್. ಇದು ಸೊಗಸಾದ ಸೂರ್ಯಾಸ್ತವನ್ನು ವೀಕ್ಷಿಸಲು ಉತ್ತಮ ಮಾರ್ಗವಾಗಿದೆ. ಸುತ್ತಮುತ್ತಲಿನ ಕಾಡು, ಅಲ್ಲಿನ ನೈಸರ್ಗಿಕ ಸೌಂದರ್ಯದ ಸಮೃದ್ಧಿಗೆ ಇದು ನೆಲೆಯಾಗಿದೆ. ಮಂಡಲಪಟ್ಟಿ ವ್ಯೂ ಪಾಯಿಂಟ್‌ಗೆ ಭೇಟಿ ನೀಡಿದ ಅನುಭವವು ನೀವು ಅನುಭವಿಸುವ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ. ಇದು ಮಡಿಕೇರಿ ಪಟ್ಟಣದಿಂದ 35 ಕಿಲೋಮೀಟರ್ ದೂರದಲ್ಲಿದೆ.

MANDALPATTI VIEW POINT

ಮಂಡಲಪಟ್ಟಿ ವ್ಯೂ ಪಾಯಿಂಟ್‌ ಚಿತ್ರ ಕೃಪೆ: indianholiday.com

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಈ ಅದ್ಭುತ ಮತ್ತು ವಿಶಿಷ್ಟವಾದ ವನ್ಯಜೀವಿ ಅಭಯಾರಣ್ಯವು ಕೊಡಗಿನ ಉತ್ತರ ಭಾಗದಲ್ಲಿ ನೆಲೆಗೊಂಡಿದೆ. ಸ್ವರ್ಗೀಯ ಪಶ್ಚಿಮ ಘಟ್ಟಗಳ ಭಾಗವಾಗಿರುವ ಇಲ್ಲಿ ಹಸಿರು ಮತ್ತು ವಿಲಕ್ಷಣ ಜಾತಿಯ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಕಾಣಲು ಸಿಗುತ್ತದೆ. ಈ ಅಭಯಾರಣ್ಯವು ಸಮುದ್ರ ಮಟ್ಟದಿಂದ ಗರಿಷ್ಠ 1,700 ಮೀಟರ್ ಎತ್ತರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿನ ಅತಿ ಎತ್ತರದ ಶಿಖರವು ಸಾಹಸಿಗರಿಗೆ ಟ್ರೆಕ್ಕಿಂಗ್ಗೆ ಉತ್ತಮ ಜಾಗವಾಗಿದೆ. ಚಿರತೆ, ಆನೆ, ಕಾಡು ಬೆಕ್ಕು, ಹಂದಿ, ನರಿ ಇತ್ಯಾದಿಗಳಿವೆ. ಕಾಡು ಪ್ರಾಣಿಗಳಿಂದ ಸ್ವಲ್ಪ ಅಪಾಯವಿದೆಯಾದರೂ, ಮುನ್ನೆಚ್ಚರಿಕಾ ಕ್ರಮಗಳು ಇಲ್ಲಿ ಇದೆ. ಆದಾಗ್ಯೂ ಅಭಯಾರಣ್ಯದೊಳಗೆ ಜಂಗಲ್ ಲಾಡ್ಜ್‌ಗಳಿವೆ. ಪ್ರವಾಸಿಗರು ತಂಗಲು ಮತ್ತು ಕಾಡಿನ ಜೀವನದ ರೋಮಾಂಚನವನ್ನು ಆನಂದಿಸಬಹುದು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಾರದ ಎಲ್ಲಾ ದಿನಗಳಲ್ಲಿಯು ಇಲ್ಲಿಗೆ ಭೇಟಿ ನೀಡಬಹುದು.

PUSHPAGIRI WILDLIFE SANCTUARY

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಚಿತ್ರ ಕೃಪೆ: indianholiday.com

ಮಲ್ಲಳ್ಳಿ ಜಲಪಾತ ಮನಮೋಹಕ ಜಲಪಾತಗಳು ಪುಷ್ಪಗಿರಿ ಬೆಟ್ಟಗಳ ತಪ್ಪಲಿನಲ್ಲಿವೆ ಮತ್ತು ಇದು ಕೊಡಗಿನ ಅತ್ಯಂತ ಸುಂದರ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ನಿಸರ್ಗ ಪ್ರೇಮಿಗಳಿಗೆ ಅದ್ಭುತವಾದ ಸ್ಥಳ. ಜಲಪಾತದ ನೀರು 200 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಇಡೀ ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ಜಲಪಾತವಾಗಿದೆ. ಬೀಳುವ ನೀರು ಅದ್ಭುತವಾದ ಶಬ್ದವನ್ನು ಸೃಷ್ಟಿಸುತ್ತದೆ. ಮಂತ್ರಮುಗ್ಧಗೊಳಿಸುವ ಮಲ್ಲಳ್ಳಿ ಜಲಪಾತದ ಸೌಂದರ್ಯವು ಮಳೆಗಾಲದಲ್ಲಿ ಮತ್ತಷ್ಟು ಪಟ್ಟು ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಕೆಲವು ರೋಮ್ಯಾಂಟಿಕ್ ಕ್ಷಣಗಳನ್ನು ಇಲ್ಲಿ ಕಳೆಯಬಹುದು.

ವಿಮಾನ ನಿಲ್ದಾಣ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 168 ಕಿಲೋಮೀಟರ್

ರೈಲು ನಿಲ್ದಾಣ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ 155 ಕಿಲೋಮೀಟರ್

MALLALLI FALLS

ಮಲ್ಲಳ್ಳಿ ಜಲಪಾತ ಚಿತ್ರ ಕೃಪೆ: indianholiday.com

ಕಾಫಿ ಪ್ಲಾಂಟೇಶನ್ ಕೊಡಗು ಕಾಫಿ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಭಾರತದ ಶೇಕಡಾ 60 ರಷ್ಟು ಕಾಫಿಯನ್ನು ಬೆಳೆಯಲಾಗುತ್ತದೆ. ಹೀಗಾಗಿ, ಇಲ್ಲಿ ಅನೇಕ ಕಾಫಿ ತೋಟಗಳಿವೆ. ಈ ಸ್ಥಳದ ಆಕರ್ಷಣೆಯನ್ನು ಹೆಚ್ಚಿಸಲು ಇಲ್ಲಿ ಹೇರಳವಾಗಿ ತೇಗ, ರೋಸ್‌ವುಡ್ ಮತ್ತು ಶ್ರೀಗಂಧವನ್ನು ಬೆಳೆಸಲಾಗಿದೆ. ಈ ಕಾಫಿ ತೋಟಗಳನ್ನು ನೋಡಲು ಉತ್ತಮ ಮಾರ್ಗವೆಂದರೆ ಹೋಮ್‌ಸ್ಟೇಗಳು.

COFFEE PLANTATION VISIT

ಕಾಫಿ ಪ್ಲಾಂಟೇಶನ್​ ಚಿತ್ರ ಕೃಪೆ: indianholiday.com

ತಲಕಾವೇರಿ ಮತ್ತು ಭಾಗಮಂಡಲ ಒಂದು ಪ್ರಮುಖ ಯಾತ್ರಾ ಕೇಂದ್ರವಾದ ತಲಕಾವೇರಿಯು ಬ್ರಹ್ಮಗಿರಿ ಬೆಟ್ಟಗಳಲ್ಲಿ ಸಮುದ್ರ ಮಟ್ಟದಿಂದ ಸುಮಾರು 1200 ಮೀಟರ್ ಎತ್ತರದಲ್ಲಿದೆ. ಅದಾಗ್ಯೂ, ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ, ಈ ಸ್ಥಳವು ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಈ ಸ್ಥಳದಲ್ಲಿ ಇರುವ ಪುಟ್ಟ ಕೊಳವು ಕಾವೇರಿ ನದಿಯ ಜನ್ಮಸ್ಥಳವಾಗಿದೆ.

ಭಾಗಮಂಡಲದ ದೇವಾಲಯವು ಸಹ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯ ಸ್ಥಳಗಳಾಗಿವೆ. ಇಲ್ಲಿನ ಮೂರು ನದಿಗಳ ಸಂಗಮವಾದ ತ್ರಿವೇಣಿಯು ನೋಡಲು ಆಕರ್ಷಕವಾಗಿದೆ. ಇದು ಮಡಿಕೇರಿಯಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಇದು ಒಂದಾಗಿದೆ.

ವಿಮಾನ ನಿಲ್ದಾಣ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 152.3 ಕಿಲೋಮೀಟರ್

ರೈಲು ನಿಲ್ದಾಣ: ಮೈಸೂರು ರೈಲು ನಿಲ್ದಾಣದಿಂದ 159.8 ಕಿಲೋಮೀಟರ್

TALACAUVERY & BHAGAMANDALA

ತಲಕಾವೇರಿ ಮತ್ತು ಭಾಗಮಂಡಲ ಚಿತ್ರ ಕೃಪೆ: indianholiday.com

ಗೋಲ್ಡನ್ ಟೆಂಪಲ್, ಬೈಲೆಕುಪ್ಪೆ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬೌದ್ಧರ ಒಟ್ಟುಗೂಡಿಕೆಯಿಂದಾಗಿ ಈ ಪ್ರದೇಶದಲ್ಲಿ ಹಲವಾರು ಅದ್ಭುತ ಬೌದ್ಧ ಮಠಗಳು ಮತ್ತು ದೇವಾಲಯಗಳಿವೆ. ಈ ಆಕರ್ಷಕ ರಚನೆಗಳಲ್ಲಿ ಒಂದು ಗೋಲ್ಡನ್ ಟೆಂಪಲ್ ಆಗಿದೆ. ಸುವರ್ಣ ಸೌಧವು ತನ್ನ ವಿಶಿಷ್ಟ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದು. ಅದು ಇತರ ಬೌದ್ಧ ದೇವಾಲಯಗಳಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತದೆ. ಬಹುವರ್ಣದ ಧ್ವಜಗಳು ವ್ಯಾಪಕವಾದ ಬೌದ್ಧ ಸಂಪ್ರದಾಯಗಳನ್ನು ಸೂಚಿಸುತ್ತವೆ. ಗೋಲ್ಡನ್ ಟೆಂಪಲ್ ನಾಮ್‌ಡ್ರೋಲಿಂಗ್ ಮಠದ ಒಂದು ಭಾಗವಾಗಿದೆ.

ಇದು ಟಿಬೆಟಿಯನ್ ಮತ್ತು ಬೌದ್ಧ ಸಂಸ್ಕೃತಿಯನ್ನು ಹೊಂದಿರುವ ಅದ್ಭುತವಾದ ಸ್ಥಳವಾಗಿದೆ. ಟಿಬೆಟಿಯನ್ ವಸ್ತುಗಳು ಮತ್ತು ಕಲಾಕೃತಿಗಳನ್ನು ಮಾರಾಟ ಮಾಡುವ ಹಲವಾರು ಸಣ್ಣ ಅಂಗಡಿಗಳನ್ನು ಇಲ್ಲಿ ಕಾಣಬಹುದು.

GOLDEN TEMPLE, BYLEKUPPE

ಗೋಲ್ಡನ್ ಟೆಂಪಲ್​ ಚಿತ್ರ ಕೃಪೆ: indianholiday.com

ಮಡಿಕೇರಿ ಕೋಟೆ ಮಡಿಕೇರಿ ಕೋಟೆಯನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದನ್ನು ಟಿಪ್ಪು ಸುಲ್ತಾನ್ ಪುನರ್ನಿರ್ಮಿಸಿದನು. ಕೋಟೆಯು ಅದ್ಭುತವಾದ ಮತ್ತು ಸುಪ್ರಸಿದ್ಧ ಇತಿಹಾಸವನ್ನು ಹೊಂದಿದೆ. ಮುದ್ದು ರಾಜನಿಂದ ಅದ್ಭುತವಾದ ಕೋಟೆಯನ್ನು ನಿರ್ಮಾಣವಾಗಿದೆ. ಅರಮನೆಯನ್ನು ಯುರೋಪಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರವೇಶದ್ವಾರದಲ್ಲಿ ಕುದುರೆಯ ಪ್ರತಿಮೆಗಳು ಇವೆ. ಕೆಲವು ಕಾರಾಗೃಹಗಳು ಸಹ ಇಲ್ಲಿದೆ. ಒಮ್ಮೆ ದೇಶದ್ರೋಹಿಗಳು, ಶತ್ರುಗಳು ಮತ್ತು ಅತಿಕ್ರಮಣಕಾರರನ್ನು ಈ ಕಾರಾಗೃಹದಲ್ಲಿ ಇರಿಸುತ್ತಿದ್ದರು.

ಟಿಪ್ಪು ಸುಲ್ತಾನ್ ಮತ್ತು ಇತರ ಕಲಾಕೃತಿಗಳನ್ನು ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ. 1834 ರಲ್ಲಿ ಬ್ರಿಟಿಷರು ನಿರ್ಮಿಸಿದ ಪ್ರಾರ್ಥನಾ ಮಂದಿರ ಮತ್ತು ಅನೇಕ ಐತಿಹಾಸಿಕ ಪುಸ್ತಕಗಳು ಮತ್ತು ಸಾಂಸ್ಕೃತಿಕ ಪರಂಪರೆಗಳ ನೆಲೆಯಾಗಿರುವ ಸಾರ್ವಜನಿಕ ಗ್ರಂಥಾಲಯ ಇಲ್ಲಿದೆ. ಮಡಿಕೇರಿ ಕೋಟೆ ಕೊಡಗಿನಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಸೋಮವಾರ ಹೊರತುಪಡಿಸಿ ವಾರದ ಇನ್ನುಳಿದ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಪ್ರವೇಶಕ್ಕೆ ಅವಕಾಶವಿದೆ.

MADIKERI FORT

ಮಡಿಕೇರಿ ಕೋಟೆ ಚಿತ್ರ ಕೃಪೆ: indianholiday.com

ಚೇಲಾವರ ಜಲಪಾತ ಎಂಬೆಪರೆ ಎಂದೂ ಕರೆಯಲ್ಪಡುವ ಚೇಲಾವರ ಜಲಪಾತವು ಕೊಡಗಿನ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಚೋಮಕುಂಡ್ ಬೆಟ್ಟಗಳಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿದೆ. ಜಲಪಾತದ ಪಕ್ಕದಲ್ಲಿರುವ ಸ್ಥಳವು ಹೈಕಿಂಗ್ ಮತ್ತು ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್‌ಗೆ ಅದ್ಭುತವಾಗಿರುವುದರಿಂದ ಸಾಹಸಿಗರು ಈ ತಾಣಕ್ಕೆ ಭೇಟಿ ನೀಡಲು ತಮ್ಮದೇ ಆದ ಉತ್ಸಾಹವನ್ನು ಹೊಂದಿದ್ದಾರೆ.

CHELAVARA FALLS

ಚೇಲಾವರ ಜಲಪಾತ ಚಿತ್ರ ಕೃಪೆ: indianholiday.com

ಲೇಖನ: ದೆಬಶ್ರೀ

ಇದನ್ನೂ ಓದಿ: IRCTC Cruise Tourism: ಐಆರ್​ಸಿಟಿಸಿಯಿಂದ ಕ್ರೂಸ್ ಪ್ರವಾಸೋದ್ಯಮ; ಪ್ರವಾಸಿ ತಾಣಗಳು ಮತ್ತಿತರ ವಿವರ ಇಲ್ಲಿದೆ

Kaveri Nisargadhama: ಕೊಡಗು ಪ್ರವಾಸೋದ್ಯಮಕ್ಕೆ ಹೊಸ ಗರಿ, ಪ್ರವಾಸಿಗರ ಆಕರ್ಷಿಸುತ್ತಿದೆ ಪಕ್ಷಿಗಳ ಪಾರ್ಕ್

ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ