105 ವರ್ಷ ಇತಿಹಾಸವಿರುವ ಬೆಂಗಳೂರಿನ ದೊಡ್ಡಜಾಲ ರೈಲ್ವೆ ನಿಲ್ದಾಣದ ನವೀಕರಣಕ್ಕೆ ಚಾಲನೆ

Doddajala Heritage Railway Station: ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ದೊಡ್ಡಜಾಲ ರೈಲ್ವೆ ನಿಲ್ದಾಣದ ನವೀಕರಣ ನಡೆಯಲಿದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ರೈಲ್ವೆ ಮಾರ್ಗವಾಗಿದೆ.

105 ವರ್ಷ ಇತಿಹಾಸವಿರುವ ಬೆಂಗಳೂರಿನ ದೊಡ್ಡಜಾಲ ರೈಲ್ವೆ ನಿಲ್ದಾಣದ ನವೀಕರಣಕ್ಕೆ ಚಾಲನೆ
ದೊಡ್ಡಜಾಲ ರೈಲು ನಿಲ್ದಾಣ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 13, 2021 | 6:44 PM

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನ ಸುತ್ತಮುತ್ತ ಅನೇಕ ಅಚ್ಚರಿಯ (Bengaluru Tourist Places) ತಾಣಗಳಿವೆ. ಇಲ್ಲಿನ ಒಂದೊಂದು ಊರು ಕೂಡ ಒಂದೊಂದು ವಿಶೇಷವಾದ ಇತಿಹಾಸವನ್ನು ಹೊತ್ತು ನಿಂತಿವೆ. ಐಟಿ ಸಿಟಿಯಾಗಿರುವ ಬೆಂಗಳೂರಿನಲ್ಲಿ ಐತಿಹಾಸಿಕ ಸ್ಮಾರಕಗಳಿಗೇನೂ ಬರವಿಲ್ಲ. ಬೆಂಗಳೂರಿನ ದೊಡ್ಡಜಾಲದಲ್ಲಿರುವ 105 ವರ್ಷಗಳ ಇತಿಹಾಸವಿರುವ ದೊಡ್ಡಜಾಲ ರೈಲು ನಿಲ್ದಾಣವನ್ನು (Doddajala Railway Station) ಪಾರಂಪರಿಕ ಕೇಂದ್ರವಾಗಿ ಮರುಸ್ಥಾಪಿಸುವ ಯೋಜನೆಗೆ ಇಂದು ಚಾಲನೆ ನೀಡಲಾಯಿತು.

ಶತಮಾನಗಳಷ್ಟು ಹಳೆಯದಾದ ದೊಡ್ಡಜಾಲ ರೈಲು ನಿಲ್ದಾಣದ ಪುನರ್ ಸ್ಥಾಪನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (INTACH) ನೈಋತ್ಯ ರೈಲ್ವೆ ವಿಭಾಗದೊಂದಿಗೆ ಬೆಂಗಳೂರಿನ ನಾಲ್ಕು ರೈಲ್ವೆ ನಿಲ್ದಾಣಗಳನ್ನು ಮರುಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ಐತಿಹಾಸಿಕ ರೈಲ್ವೆ ನಿಲ್ದಾಣದ ವಿಶೇಷತೆಯನ್ನು ಮುಮದಿನ ಪೀಳಿಗೆಗೂ ತಿಳಿಸಲು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಮುಂದಾಗಿದೆ.

Restoration Started of 105 year old Doddajala heritage railway station in Bengaluru

ದೊಡ್ಡಜಾಲ ರೈಲು ನಿಲ್ದಾಣ

ಬೆಂಗಳೂರಿನ ದೊಡ್ಡಜಾಲ ಮಾತ್ರವಲ್ಲದೆ ದೇವನಹಳ್ಳಿ, ಅವತಿಹಳ್ಳಿ, ನಂದಿ ಹಾಲ್ಟ್‌ನ ಪಾರಂಪರಿಕ ರೈಲ್ವೆ ನಿಲ್ದಾಣಗಳನ್ನು ಮರು ಸ್ಥಾಪಿಸುವ ಮತ್ತು ಸಂರಕ್ಷಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. ಅಂದಹಾಗೆ, ಈ ರೈಲ್ವೆ ನಿಲ್ದಾಣಗಳು ಬೆಂಗಳೂರು- ಚಿಕ್ಕಬಳ್ಳಾಪುರ ಮಾರ್ಗದಲ್ಲಿವೆ. 1915ರ ಆಗಸ್ಟ್ 1ರಂದು ಈ ಮಾರ್ಗದಲ್ಲಿ ಮೀಟರ್ ಗೇಜ್ ಪ್ರಾರಂಭವಾಯಿತು. ಇದು ಬೆಂಗಳೂರಿನ ಅತ್ಯಂತ ಹಳೆಯ ರೈಲ್ವೆ ಮಾರ್ಗವಾಗಿದೆ. ಇಲ್ಲಿನ ರೈಲ್ವೆ ನಿಲ್ದಾಣ ಕೂಡ ಪಾರಂಪರಿಕ ಶೈಲಿಯಲ್ಲಿವೆ.

ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ದೊಡ್ಡಜಾಲ ರೈಲ್ವೆ ನಿಲ್ದಾಣದ ನವೀಕರಣ ನಡೆಯಲಿದೆ. ಇದಕ್ಕೆ ಇಂಟಾಕ್​ ಸಂಸ್ಥೆ ಹೂಡಿಕೆ ಮಾಡಲಿದ್ದು, 2 ತಿಂಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಐತಿಹಾಸಿಕ ರೈಲು ನಿಲ್ದಾಣಗಳನ್ನು ನವೀಕರಣಗೊಳಿಸುವ ಜವಾಬ್ದಾರಿಯನ್ನು ಇಂಟಾಕ್ ವಹಿಸಿಕೊಂಡಿದೆ. ಇಲ್ಲಿ ಕೆಫೆ, ಸಿಲ್ಕ್ ಮ್ಯೂಸಿಯಂ, ಉದ್ಯಾನವನ, ವ್ಯೂ ಪಾಯಿಂಟ್​ ಕೂಡ ನಿರ್ಮಿಸಲಾಗುವುದು. ಅವತಿಹಳ್ಳಿ, ನಂದಿ ಹಾಲ್ಟ್ ನಿಲ್ದಾಣದಲ್ಲಿ ರೈಲ್ವೆ ಮ್ಯೂಸಿಯಂ, ಕೆಫೆ, ರೆಸ್ಟೋರೆಂಟ್, ಸಾಂಸ್ಕೃತಿಕ ಪ್ರದರ್ಶನ ಕೇಂದ್ರ, ವಾರಾಂತ್ಯದ ಕ್ರಾಫ್ಟ್ ಮಾರ್ಕೆಟ್, ಓಪನ್ ಏರ್ ಥಿಯೇಟರ್ ನಿರ್ಮಿಸಲಾಗುವುದು.

ಇದನ್ನೂ ಓದಿ: Bengaluru News: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಜುಲೈ 17ರವರೆಗೆ ಕರೆಂಟ್ ಇರೋದಿಲ್ಲ

ಇದನ್ನೂ ಓದಿ: ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಸೀಟ್ ಕೊಡಿಸಲು ಸಚಿವರಿಗೆ ಮನವಿ! ಖುಷಿ ವಿಚಾರ ಹಂಚಿಕೊಂಡ ಸುರೇಶ್ ಕುಮಾರ್

(Restoration Started of 105 year old Doddajala heritage railway station in Bengaluru)

Published On - 6:43 pm, Tue, 13 July 21

ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ