ಕ್ಯಾಬಿನೆಟ್ ಒಪ್ಪಿಗೆಯಿಲ್ಲದೇ ಸರ್ಕಾರ ಮಾರಾಟಕ್ಕೆ ಆದೇಶಿಸಬಹುದೇ?; ಜಿಂದಾಲ್ಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಹೈಕೋರ್ಟ್ ಪ್ರಶ್ನೆ
ಸರ್ಕಾರಿ ಆದೇಶದ ಮೂಲಕ ಜಮೀನು ಪರಭಾರೆ ಮಾಡಬಹುದೇ? ಕ್ಯಾಬಿನೆಟ್ ಒಪ್ಪಿಗೆಯಿಲ್ಲದೇ ಸರ್ಕಾರ ಮಾರಾಟಕ್ಕೆ ಆದೇಶಿಸಬಹುದೇ? ಎಂದು ಪ್ರಶ್ನಿಸಿರುವ ಹೈಕೋರ್ಟ್, ಈ ಬಗ್ಗೆ ರಾಜ್ಯ ಸರ್ಕಾರದ ನಿಲುವು ತಿಳಿಸಲು ಸೂಚನೆ ನೀಡಿದೆ. ಜತೆಗೆ ವಿಚಾರಣೆಯನ್ನು ಜುಲೈ 16 ಕ್ಕೆ ಮುಂದೂಡಿದೆ.
ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಕ್ಯಾಬಿನೆಟ್ ಒಪ್ಪಿಗೆ ಸಿಗುವವರೆಗೂ ಜಮೀನು ಪರಭಾರೆ ಇಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದ್ದು, ಸರ್ಕಾರದ ಈ ನಿಲುವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪರಭಾರೆ ಬಗ್ಗೆ ಸರ್ಕಾರದ ನಿಲುವು ಪಾರದರ್ಶಕವಾಗಿರಬೇಕು. ಆದರೆ ಸರ್ಕಾರದ ನಿರ್ಧಾರ ಅಸ್ಪಷ್ಟ ಮತ್ತು ಆಘಾತಕಾರಿಯಾಗಿದೆ. ಸರ್ಕಾರಿ ಆದೇಶದ ಮೂಲಕ ಜಮೀನು ಪರಭಾರೆ ಮಾಡಬಹುದೇ? ಕ್ಯಾಬಿನೆಟ್ ಒಪ್ಪಿಗೆಯಿಲ್ಲದೇ ಸರ್ಕಾರ ಮಾರಾಟಕ್ಕೆ ಆದೇಶಿಸಬಹುದೇ? ಎಂದು ಪ್ರಶ್ನಿಸಿರುವ ಹೈಕೋರ್ಟ್, ಈ ಬಗ್ಗೆ ರಾಜ್ಯ ಸರ್ಕಾರದ ನಿಲುವು ತಿಳಿಸಲು ಸೂಚನೆ ನೀಡಿದೆ. ಜತೆಗೆ ವಿಚಾರಣೆಯನ್ನು ಜುಲೈ 16 ಕ್ಕೆ ಮುಂದೂಡಿದೆ.
ಕಂದಾಯ ಕೋರ್ಟ್ಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ಕಂದಾಯ ನ್ಯಾಯಾಲಯ ಸೇರಿದಂತೆ ಅರೆ ನ್ಯಾಯಿಕ ಕೋರ್ಟ್ಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಲಾಕ್ಡೌನ್ ನಂತರ ತಹಸೀಲ್ದಾರ್, ಸಹಾಯಕ ಆಯುಕ್ತ ಹಾಗೂ ಜಿಲ್ಲಾಧಿಕಾರಿ ಕೋರ್ಟ್ ಸೇರಿದಂತೆ ಅರೆ ನ್ಯಾಯಿಕ ಕೋರ್ಟ್ಗಳಲ್ಲಿ ಪ್ರಕರಣಗಳ ವಿಚಾರಣೆಯಾಗದೇ ಬಾಕಿ ಉಳಿದಿವೆ. ಕಂದಾಯ ನ್ಯಾಯಾಲಯಗಳಲ್ಲಿ ಸದ್ಯಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಇದರಿಂದ ಜನಸಾಮಾನ್ಯರ ಭೂಮಿ ವಿವಾದ, ಪಹಣಿ, ಖಾತಾ, ಮ್ಯುಟೇಷನ್ ವಿವಾದಗಳು ಇತ್ಯರ್ಥವಾಗದೇ ಉಳಿದಿದ್ದವು. ಹೀಗಾಗಿ ಇಂತಹ ಕೋರ್ಟ್ ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರೆ ಜನಸಾಮಾನ್ಯರಿಗೆ ಖಾತೆ, ಮ್ಯುಟೇಷನ್ ವಿವಾದಗಳಲ್ಲಿ ಅನುಕೂಲವಾಗಲಿದೆ. ಅಲ್ಲದೇ ಕೇವಲ ಕೊರೊನಾ ಸಂದರ್ಭಗಳಲ್ಲಿ ಮಾತ್ರವಲ್ಲದೇ ಭವಿಷ್ಯದಲ್ಲೂ ತಂತ್ರಜ್ಞಾನ ಬಳಕೆಯಿಂದ ಜನರಿಗೆ ಸಹಾಯವಾಗಲಿದೆ. ಲಾಕ್ಡೌನ್ ನಂತರ ರಾಜ್ಯಾದ್ಯಂತ ತಹಶೀಲ್ದಾರ್, ಎಸಿ, ಡಿಸಿ ಕೋರ್ಟ್ಗಳಲ್ಲಿ ವಿಚಾರಣೆ ಸ್ಥಗಿತವಾಗಿದೆ. ಈ ಬಗ್ಗೆ ಸಾಫ್ಟ್ವೇರ್ ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು. ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಗೆ ಕಂದಾಯ ಇಲಾಖೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ನೀಡಬೇಕು. ಪ್ರಸ್ತಾವನೆ ಬಗ್ಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಎಂ.ನಾಗರಾಜ್ ಎಂಬುವರ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಕೊರೊನಾ 3 ನೇ ಅಲೆ ಆರಂಭವಾಗುವ ಸಾಧ್ಯತೆಯಿದ್ದು, ಸಿದ್ಧತೆಯ ಭಾಗವಾಗಿ ವಿಡಿಯೋ ಕಾನ್ಫರೆನ್ಸ್ ಕಲ್ಪಿಸುವುದು ಅಗತ್ಯವೆಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಅಭಿಪ್ರಾಯಪಟ್ಟಿದ್ದಾರೆ. ಸಿಲಿಕಾನ್ ಸಿಟಿ ಎಂದು ಕರೆಯಲಾಗುವ ಬೆಂಗಳೂರಿನಲ್ಲಿ ಕೋರ್ಟ್ಗಳೂ ತಂತ್ರಜ್ಞಾನದ ಲಾಭ ಪಡೆಯಬೇಕು. ಈಗಾಗಲೇ ಹೈಕೋರ್ಟ್ನ ಎಲ್ಲಾ ಪೀಠಗಳಲ್ಲಿ ವಕೀಲರ ವಾದಮಂಡನೆಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಸೇರಿದಂತೆ ವಿಚಾರಣಾ ನ್ಯಾಯಾಲಯಗಳಲ್ಲೂ ಭಾಗಶಃ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಶ್ವತವಾಗಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲು ಮೂಲಸೌಕರ್ಯ ಕಲ್ಪಿಸುವಂತೆ ಈಗಾಗಲೇ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ
ಇದನ್ನೂ ಓದಿ:
Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್ 19 2ನೇ ಅಲೆ ಸಂದರ್ಭದಲ್ಲ..!
ಕೊವಿಡ್ ನಿಯಮ ಉಲ್ಲಂಘನೆ ಮುಂದುವರಿದರೆ ಇಲ್ಲಿವರೆಗೆ ನಾವು ಕೈಗೊಂಡ ಕ್ರಮಗಳೆಲ್ಲ ವ್ಯರ್ಥ: ಆರೋಗ್ಯ ಸಚಿವಾಲಯ
(Karnataka High Court question govt to Can the government order the sale without Cabinet approval)
Published On - 7:42 pm, Tue, 13 July 21