ನಾನು ಹೆಂಗಸು ಎಂದು ಎಲ್ಲರೂ ಆರೋಪ ಮಾಡ್ತಿದ್ದಾರೆ; ಎಲ್ಲರನ್ನೂ ಹೊರಗೆಳೆಯುತ್ತೇನೆ: ಅರುಣಾ ಕುಮಾರಿ ತಿರುಗೇಟು
ನನ್ನ ಜೀವನದಲ್ಲಿ ಮೊದಲು ಮೋಸ ಮಾಡಿದ್ದೇ ಪತಿ ಕುಮಾರ್. ಪತಿ ಕುಮಾರ್‌ನನ್ನು ವಿಚಾರಣೆ ಮಾಡಿದ್ರೆ ಎಲ್ಲಾ ಗೊತ್ತಾಗುತ್ತೆ. ಬ್ಯಾಂಕ್ ಫೇಕ್ ಐಡಿ ಕಾರ್ಡ್ ನಾನು ಮಾಡಿಸಿದ್ದಲ್ಲ ಎಂದು ಅರುಣಾ ಹೇಳಿದ್ದಾರೆ.
ಬೆಂಗಳೂರು: ನಾನು ಹೆಂಗಸು ಎಂದು ಎಲ್ಲರೂ ಆರೋಪ ಮಾಡ್ತಿದ್ದಾರೆ. ಇಷ್ಟು ದಿನ ಉದ್ಯಮಿ ನಾಗವರ್ಧನ್ ಏನು ಮಾಡುತ್ತಿದ್ರು. ನಿಜವಾಗಿ ಉದ್ಯಮಿ ನಾಗವರ್ಧನ್ ಬಳಿ ನಾನು ಒಂದು ರೂಪಾಯಿ ಪಡೆದಿಲ್ಲ. ನನ್ನ ಪತಿಯೇ ನಾಗವರ್ಧನ್‌ಗೆ 1 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ ಈಗ ಮನೆ ಕೆಲಸದವಳಂತೆ ನನ್ನ ವಿರುದ್ಧ ಆರೋಪ ಮಾಡ್ತಿದ್ದಾರೆ. ಎಲ್ಲರನ್ನೂ ಹೊರಗೆ ಎಳೆಯುತ್ತೇನೆ ಎಂದು ಟಿವಿ9ಗೆ ಅರುಣಾ ಕುಮಾರಿ ಹೇಳಿಕೆ ನೀಡಿದ್ದಾರೆ.
ನಾನು ಏನೂ ತಪ್ಪು ಮಾಡಿಲ್ಲ. ದರ್ಶನ್ ಸೇರಿ ಯಾರೇ ಆಗಲಿ ಆರೋಪ ಸಾಬೀತುಪಡಿಸಲಿ. ನನ್ನನ್ನು ಉಮಾಪತಿಯೇ ಉಪಯೋಗಿಸಿಕೊಂಡರು. ಮಾರ್ಚ್‌ನಿಂದಲೇ ನನಗೆ ಉಮಾಪತಿ ಪರಿಚಯವಿದ್ದರು. ನನಗೂ, ಉಮಾಪತಿಗೆ ಪರಿಚಯ ಇದ್ದಿದ್ದು ನಿಜ. ಉಮಾಪತಿ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಕರೆದಿದ್ದರು. ನನ್ನನ್ನು ಹೋಟೆಲ್‌ಗೆ ಕರೆದಿದ್ದಕ್ಕೆ ಎಲ್ಲಾ ಸಾಕ್ಷ್ಯಾಧಾರ ಇದೆ. ದರ್ಶನ್‌ಗೆ ಹರ್ಷ ಮೋಸ ಮಾಡ್ತಾರೆ, ಇದನ್ನ ತಡೆಯಬೇಕು ಎಂದು ಉಮಾಪತಿ ಹೇಳಿದ್ದರು ಎಂದು ತಿಳಿಸಿದ್ದಾರೆ.
ಉದ್ಯಮಿ ನಾಗವರ್ಧನ್ ವಿರುದ್ಧ ಅರುಣಾ ಕುಮಾರಿ ಕಿಡಿಕಾರಿದ್ದಾರೆ. ನನ್ನನ್ನು ಪೇಪರ್ ರೀತಿ ಎಲ್ಲರೂ ಉಪಯೋಗಿಸಿಕೊಂಡರು. ನನ್ನ ಜೀವನದಲ್ಲಿ ಮೊದಲು ಮೋಸ ಮಾಡಿದ್ದೇ ಪತಿ ಕುಮಾರ್. ಪತಿ ಕುಮಾರ್‌ನನ್ನು ವಿಚಾರಣೆ ಮಾಡಿದ್ರೆ ಎಲ್ಲಾ ಗೊತ್ತಾಗುತ್ತೆ. ಬ್ಯಾಂಕ್ ಫೇಕ್ ಐಡಿ ಕಾರ್ಡ್ ನಾನು ಮಾಡಿಸಿದ್ದಲ್ಲ ಎಂದು ಅರುಣಾ ಹೇಳಿದ್ದಾರೆ.
ಎಲ್ಲದಕ್ಕೂ ನಿರ್ಮಾಪಕ ಉಮಾಪತಿಯೇ ಕಾರಣ. ನಟ ದರ್ಶನ್‌ರನ್ನು ಭೇಟಿ ಮಾಡಿಸಿದ್ದೇ ಉಮಾಪತಿ. ಭೇಟಿ ವೇಳೆ ಹೇಗೆ ನಡೆದುಕೊಳ್ಳಬೇಕೆಂದು ಹೇಳುತ್ತಿದ್ದ. ಸ್ವಂತ ಮನೆ ಕೊಡಿಸುವುದಾಗಿ ಉಮಾಪತಿ ನಂಬಿಸಿದ್ದ. ಇಷ್ಟು ಆಗುತ್ತೆಂದು ನನಗೂ, ಉಮಾಪತಿಗೇ ಗೊತ್ತಿರಲಿಲ್ಲ. ಹರ್ಷನನ್ನ ದೂರವಿಡಲು ಉಮಾಪತಿ ಈ ಕೆಲಸ ಮಾಡಿದ್ದಾರೆ. ದರ್ಶನ್‌ರಿಂದ ಹರ್ಷನನ್ನ ದೂರವಿಡಲು ಉಮಾಪತಿ ಪ್ಲ್ಯಾನ್ ಮಾಡಿದ್ದರು. ಪ್ರಕರಣ ನಡೆಯಲು ಉಮಾಪತಿಯೇ ನೇರ ಕಾರಣ ಎಂದು ಅರುಣಾ ಕುಮಾರಿ ಆರೋಪಿಸಿದ್ದಾರೆ.
ಫೇಸ್‌ಬುಕ್‌ನಲ್ಲೇ ನನಗೆ ಉಮಾಪತಿ ಪರಿಚಯವಾಗಿದ್ದು. ನನ್ನ ಸ್ವಗ್ರಾಮ ಹಾರೋಹಳ್ಳಿ. ಕುಮಾರ್ ಜೊತೆ ನನ್ನ ಮದುವೆಯಾಗಿದ್ದು ನಿಜ. ಕೆಲ ವರ್ಷ ನಂತರ ನಾನು, ಕುಮಾರ್ ಬೇರೆಯಾಗಿದ್ದೆವು. ನಾನು ಎಲ್ಲಾ ಬ್ಯಾಂಕ್‌ಗಳಿಗೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ನನ್ನನ್ನು ಹೀಗೆ ಬಳಸಿಕೊಂಡರೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅರುಣಾ ಹೇಳಿದ್ದಾರೆ.
ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರುತ್ತೆ ಅರುಣಾ ಕುಮಾರಿ ಆರೋಪಕ್ಕೆ ನಿರ್ಮಾಪಕ ಉಮಾಪತಿ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರುತ್ತೆ. ನನ್ನ ಮೇಲೆ ಆರೋಪ ಮಾಡಲು ಅರುಣಾ ಯಾರು? ಕಾನೂನು ರೀತಿಯಲ್ಲೇ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಎಲ್ಲಾ ಆರೋಪಗಳಿಗೆ ಸಾಕ್ಷ್ಯಾಧಾರ ಬೇಕಲ್ಲವೇ? ಸಾಕ್ಷ್ಯಾಧಾರ ಸಮೇತ ನಾನು ಮಾಧ್ಯಮ ಮುಂದೆ ಬರುವೆ ಎಂದು ಹೇಳಿದ್ದಾರೆ.
ಪ್ರಕರಣದ ಉದ್ದೇಶ ಏನೆಂದು ಅರುಣಾ ಕುಮಾರಿಗೇ ಗೊತ್ತು. ಅರುಣಾಗೆ ತಿಂದು ಹೆಚ್ಚಾಗಿತ್ತು, ಹೀಗಾಗಿ ಹೀಗೆ ಮಾಡಿದ್ದಾಳೆ. ಅರುಣಾ ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ. ಆತ್ಮಹತ್ಯೆ ಹೇಳಿಕೆಗೆ ನಾವು ಜವಾಬ್ದಾರರಲ್ಲ. ಎಲ್ಲವನ್ನೂ ಸೃಷ್ಟಿಸಿಕೊಂಡು ಅರುಣಾ ಕುಮಾರಿ ಆರೋಪ ಮಾಡುತ್ತಿದ್ದಾರೆ ಎಂದು ಟಿವಿ9ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ, ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಅಜ್ಞಾತ ಸ್ಥಳದಲ್ಲಿ ಭೇಟಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಬ್ಬರೂ ಗೊಂದಲ ಬಗೆಹರಿಸಿಕೊಂಡಿರುವ ಬಗ್ಗೆ ಮಾಹಿತಿ ದೊರಕಿದೆ. ನಾಳೆ ಇಬ್ಬರೂ ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ತಿಳಿದುಬಂದಿದೆ.
ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್
ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಅರುಣಾ ಕುಮಾರಿ ಫೇಕ್ ಐಡಿ ಬಗ್ಗೆ ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ