ಬಿಜೆಪಿ ಶಾಸಕನ ಬಾಮೈದನ ಮನೆಯಲ್ಲಿ ವಜ್ರ, ಚಿನ್ನ ಸೇರಿದಂತೆ 2 ಕೋಟಿ ರೂ. ಹೆಚ್ಚು ಮೌಲ್ಯದ ವಸ್ತು ಕಳ್ಳತನ

| Updated By: ಆಯೇಷಾ ಬಾನು

Updated on: Nov 07, 2023 | 7:46 AM

ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಬಾಮೈದರಾಗಿರುವ ರಾಮಮೂರ್ತಿ ಅವರ ಮನೆಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರ, ನಗದು ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಬೆಲೆ ಬಾಳುವ ವಾಚ್​ಗಳು, ಮನೆ ಉಪಯೋಗಿ ವಸ್ತುಗಳು ಕೂಡ ಕಳ್ಳತನವಾಗಿದೆ. ಸುಮಾರು 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ಬಿಜೆಪಿ ಶಾಸಕನ ಬಾಮೈದನ ಮನೆಯಲ್ಲಿ ವಜ್ರ, ಚಿನ್ನ ಸೇರಿದಂತೆ  2 ಕೋಟಿ ರೂ. ಹೆಚ್ಚು ಮೌಲ್ಯದ ವಸ್ತು ಕಳ್ಳತನ
ರಾಮಮೂರ್ತಿ
Follow us on

ಬೆಂಗಳೂರು, ನ.07: ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಎನಿಸಿಕೊಂಡಿರುವ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ. ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ (SR Vishwanath) ಅವರ ಬಾಮೈದರಾಗಿರುವ ರಾಮಮೂರ್ತಿ ಅವರ ಮನೆಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರ, ನಗದು ಕಳ್ಳತನ (Theft) ಮಾಡಿ ಖದೀಮರು ಪರಾರಿಯಾಗಿದ್ದಾರೆ. ಬೆಲೆ ಬಾಳುವ ವಾಚ್​ಗಳು, ಮನೆ ಉಪಯೋಗಿ ವಸ್ತುಗಳು ಕೂಡ ಕಳ್ಳತನವಾಗಿದೆ. ಸುಮಾರು 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಕೊಂಡು ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

ನ್ಯಾಯಾಂಗ ಬಡಾವಣೆಯ ನಿವಾಸಿಯಾಗಿರುವ ಬಿಬಿಎಂಪಿ ಕ್ಲಾಸ್ ಒನ್ ಕಂಟ್ರ್ಯಾಕ್ಟರ್, ಯಲಹಂಕ ಬಿಜೆಪಿ ಶಾಸಕರ ಬಾಮೈದರಾಗಿರುವ ರಾಮಮೂರ್ತಿ ಅವರು ಮೂರು ದಿನಗಳ ಹಿಂದೆ ಕೆಲಸದ ವಿಚಾರವಾಗಿ ಮನೆಗೆ ಬೀಗ ಜಡಿದು ಬೇರೆಡೆ ಹೋಗಿದ್ದರು. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಖದೀಮರು ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ಚಿನ್ನ, ಬೆಳ್ಳಿ, ವಜ್ರ, ಬೆಲೆ ಬಾಳುವ ವಾಚ್​ಗಳು, ಮನೆವಸ್ತುಗಳನ್ನೆಲ್ಲಾ ದೋಚಿದ್ದಾರೆ. ಮೂರು ದಿನದ ಬಳಿಕ ಇಂದು ಬೆಂಗಳೂರಿಗೆ ವಾಪಾಸ್ ಬಂದ ರಾಮಮೂರ್ತಿಯವರು ಮನೆಗೆ ಎಂಟ್ರಿಕೊಡುತ್ತಿದ್ದಂತೆ ಶಾಕ್ ಎದುರಾಗಿದೆ. ಸದ್ಯ ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಯಲಹಂಕ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು: ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ, ಆರೋಪಿಗಳು ಠಾಣೆಗೆ ಶರಣು

2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳ ಕಳ್ಳತನ

ಸಾಲು ಸಾಲು ರಜೆ, ಹಬ್ಬ ಹಿನ್ನೆಲೆ ಬ್ಯಾಂಕ್ ನಿಂದ ಮನೆಗೆ ಚಿನ್ನಾಭರಣ, ನಗದು, ಇತರೆ ವಸ್ತುಗಳನ್ನು ತಂದು ಇಟ್ಟಿದ್ದೆ ಎಂದು ರಾಮಮೂರ್ತಿಯವರು ತಿಳಿಸಿದ್ದಾರೆ. ಇನ್ನು 1 ಕೆ.ಜಿಗೂ ಹೆಚ್ಚು ಚಿನ್ನಾಭರಣ, 15 ಕೆ.ಜಿ ಬೆಳ್ಳಿ, ವಜ್ರ, 15 ಲಕ್ಷ ನಗದು, ಬೆಲೆ ಬಾಳುವ ಹುಬ್ಲೋಟ್, ರಾಡೋ ಸೇರಿ 15 ವಾಚ್ ಗಳು, ಬೆಲೆಬಾಳುವ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಅಂದಾಜಿನ ಪ್ರಕಾರ 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ಮನೆ ಮಾಲೀಕ ರಾಮಮೂರ್ತಿ ಅವರು ತಿಳಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ