ಬೆಂಗಳೂರು: ಯಾರ ತಂಟೆ ತಕರಾರಿಗೂ ಹೋಗದೆ ತಣ್ಣಗಿದ್ದ ಕುಟುಂಬವದು. ತಾವಾಯ್ತು ತಮ್ಮ ಪಾಡಾಯ್ತು ಅಂತಿದ್ದ ಫ್ಯಾಮಿಲಿ ಏಕಾಏಕಿ ಆತ್ಮಹತ್ಯೆ (Suicide) ಶರಣಾಗಿದೆ. ವೃದ್ಧ ತಾಯಿಯ ಜೊತೆ ಇಬ್ಬರು ಮಕ್ಕಳು ಖಾಸಗಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಒಂದರ ಬೆಡ್ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯ ಏಕಾಂಶ್ ಹೆಸರಿನ ಅಪಾರ್ಟ್ಮೆಂಟ್ನಲ್ಲಿ ನಿನ್ನೆ (ಡಿ.19) ನಡೆದಿದೆ. ವೃದ್ಧ ತಾಯಿಯ ಜೊತೆಗಿದ್ದ ಅನ್ ಮ್ಯಾರಿಡ್ ಮಕ್ಕಳಿಬ್ಬರು ಇದೇ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ವಾಸವಾಗಿದ್ದರು. 72 ವರ್ಷದ ಯಶೋಧ ಹಾಗೂ ಅವರಿಬ್ಬರು ಮಕ್ಕಳಾದ ಸುಮನ್ ಗುಪ್ತಾ (41) ಹಾಗೂ ನರೇಶ್ ಗುಪ್ತಾ(36) ಸಾವನಪ್ಪಿದ್ದಾರೆ. ಇನ್ನು ಮೃತದೇಹಗಳ ಬಳಿ ಗ್ಲಾಸ್ ಇದ್ದು, ವಿಷ ಸೇವಿಸಿ ಹಾಸಿಗೆಯಲ್ಲೇ ಕೊನೆಯುಸಿರೆಳೆದಿದ್ದರೆಂಬ ಶಂಕೆ ಮೂಡಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳಕ್ಕೆ ಧಾವಿಸಿ ನೋಡಿದಾಗ ಡೆತ್ ನೋಟ್ನ ಲಿಖಿತ ಪತ್ರ ಕೂಡ ದೊರೆತಿದೆ. ಆದರೆ ಡೆತ್ ನೋಟ್ನಲ್ಲಿ ಉಲ್ಲೇಖಿತ ಅಂಶಗಳು ಇನ್ನು ಹೊರ ಬಂದಿಲ್ಲ.
ಇದನ್ನೂ ಓದಿ: ಚಿಕ್ಕಮಗಳೂರು: ಕೆರೆ ದಾಟುವಾಗ ಆಯತಪ್ಪಿ ನೀರಿಗೆ ಬಿದ್ದು ತಾಯಿ ಮಗಳು ಸಾವು
ಇನ್ನು ಆತ್ಮಹತ್ಯೆ ಮಾಡಿಕೊಂಡ ನರೇಶ ಕಂಟ್ರ್ಯಾಕ್ಟರ್ ಆಗಿದ್ದ, ಹಣಕಾಸಿನ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ಮೂಡಿದೆ. ಜೊತೆಗೆ ವಯಸ್ಸಾದ ತಾಯಿ ಯಶೋಧಾ ಜೊತೆಗೆ ವಾಸವಿದ್ದ ನರೇಶ್ಗೆ ಮದುವೆಯಾಗಿರಲಿಲ್ಲ ಅದೇ ರೀತಿ ನಲವತ್ತು ದಾಟಿದರು ಸಹೋದರಿಗೂ ಸುಮನ್ರಿಗೂ ಸಹ ಮದುವೆಯಾಗಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಯಶೋಧಾ ಪತಿ ಕಾಲವಾಗಿದ್ದರು. ಆ ಬಳಿಕ ಮನೆಯವರೆಲ್ಲ ಹೆಚ್ಚು ನೊಂದಿದ್ದರು. ಅವರು ಬಳಸುತಿದ್ದ ವಸ್ತುಗಳನೆಲ್ಲ ಆಶ್ರಮಕ್ಕೆ ನೀಡಿದ ಕುಟುಂಬ ಬಳಿಕ ಮಹಾಲಕ್ಷ್ಮಿ ಲೇಔಟ್ನ ಫ್ಲ್ಯಾಟ್ಗೆ ಕಳೆದ ನಾಲ್ಕು ತಿಂಗಳ ಹಿಂದೆ ಬಂದಿದ್ದರು.
ಇನ್ನು ಯಶೋಧಾ ಗುಪ್ತಾರಿಗೆ ಸುಮನ್ ಗುಪ್ತಾ, ಅಪರ್ಣಾ ಗುಪ್ತಾ ಹಾಗೂ ನರೇಶ್ ಗುಪ್ತಾ ಎಂಬ ಮೂವರು ಮಕ್ಕಳಿದ್ದು, ಈ ಪೈಕಿ ಅಪರ್ಣಾ ಗುಪ್ತಾ ಮದುವೆಯಾಗಿ ರಾಜಾಜಿನಗರದಲ್ಲಿ ನೆಲೆಸಿದ್ದರು. ಶನಿವಾರ ಅಪರ್ಣಾಗೆ ಕರೆ ಮಾಡಿ ಇಡೀ ಮನೆಯವರು ಮಾತನಾಡಿದ್ದಾರೆ. ಆದರೆ ಅದಾದ ಬಳಿಕ ಯಾರೂ ಸಹ ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಅಪರ್ಣಾ ನೆನ್ನೆ ರಾತ್ರಿ ಮನೆ ಬಳಿ ಬಂದು ನೋಡಿದಾಗ ಮೂವರ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಲಾಂಗ್‌ನಿಂದ ಹಲ್ಲೆ
ಸದ್ಯ ಸಾವಿನ ಹಿಂದಿನ ಹಲವು ಅನುಮಾನ ಮೂಡಿದರು ನಿಖರ ಕಾರಣ ಇನ್ನು ನಿಗೂಢವಾಗಿದೆ. ಸದ್ಯ ಮೂವರ ಮೃತದೇಹಗಳ ಮರಣೊತ್ತರ ಪರಿಕ್ಷೆ ರಾಮಯ್ಯ ಆಸ್ಪತ್ರೆಯಲ್ಲಿ ಮುಕ್ತಾಯಗೊಂಡಿದ್ದು, ಕುಟುಂಬಸ್ಥರಿಗೆ ಹಸ್ತಾಂರಿಸಲಾಗಿದೆ. ಮತ್ತೊಂದೆಡೆ ಡೆತ್ ನೋಟ್ ಹಾಗೂ ಗ್ಲಾಸ್ ಎಫ್ಎಸ್ ಎಲ್ ಗೆ ರವಾನಿಸಲಾಗಿದೆ. ಸದ್ಯ ಮರಣೊತ್ತರ ಪರಿಕ್ಷಾ ವರದಿ, ಎಫ್ ಎಸ್ ಎಲ್ ವರದಿಗಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕಾದು ಕುಳಿತಿದ್ದಾರೆ.
ಈ ನಡುವೆ ಅಪರ್ಣ ನೀಡಿದ ದೂರಿನ ಅನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ IPC ಸೆಕ್ಷನ್ 306 ಅಡಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಹಲವರ ಹೆಸರು ಉಲ್ಲೇಖಿಸಿರೋ ದೂರುದಾರೇ, ಮೃತ ಸಹೋದರ ನರೇಶ್ನ ನಾಲ್ವರು ಸ್ನೇಹಿತರ ಹೆಸರು ಸಹ ಉಲ್ಲೇಖ ಮಾಡಿದ್ದಾರೆ. ಮೃತರು ಆತ್ಮಹತ್ಯೆ ಮಾಡಿಕೊಂಡ ದಿನ ಮನೆ ಬಳಿ ನಾಲ್ವರು ಹೊಗಿದ್ದರು. ಹೀಗಾಗಿ ಅವರ ಮೇಲೆ ಅನುಮಾನಗೊಂಡು ದೂರು ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ತನಿಖೆ ಪೊಲೀಸರು, ದೂರಿನಲ್ಲಿ ಉಲ್ಲೇಖಿಸಿರೋ ವ್ಯಕ್ತಿಗಳ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸದ್ಯ ಮೂವರ ಸಾವು ಆತ್ಮಹತ್ಯೆಯಾದರು ಆತ್ಮಹತ್ಯೆಯ ಹಿಂದಿನ ದಾರಿ ಇನ್ನು ನಿಗೂಢವಾಗಿದ್ದು, ಮತ್ತಷ್ಟು ಸಂಗತಿ ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Tue, 20 December 22