ರಾಯಚೂರು: ಮದುವೆಗೆ ನಿರಾಕರಿಸಿದ ಪ್ರೇಯಸಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆ ನಡೆದ 33 ದಿನದ ಬಳಿಕ ಪಾಗಲ್ ಪ್ರೇಮಿ ಶವ ಪತ್ತೆ ಆಗಿದೆ. ಪ್ರೇಯಸಿ ಹತ್ಯೆಗೈದಿದ್ದ ಸ್ಥಳದಲ್ಲಿಯೇ ಪ್ರಿಯಕರನ ಶವ ಪತ್ತೆ ಆಗಿದೆ. ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಭೂಮಿಕಾ (15) ಎಂಬಾಕೆಯ ಕೊಲೆ ನಡೆದಿತ್ತು. ಫೆಬ್ರವರಿ 25 ರಂದು ಭೂಮಿಕಾ ರಮೇಶ್ ಹತ್ಯೆ ಮಾಡಿದ್ದ. ಭೂಮಿಕಾ ಹತ್ಯೆ ಬಳಿಕ ಪ್ರಿಯಕರ ರಮೇಶ್ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಭೂಮಿಕಾ ಹತ್ಯೆಯಾದ 2-3 ದಿನಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಭೂಮಿಕಾ ಕೊಲೆಯಾದ ಜಾಗದಲ್ಲಿ ರಮೇಶ್ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಪೊದೆಯಲ್ಲಿ ಬಿದ್ದಿದ್ದ ಮೃತದೇಹದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರಿಂದ ಇದೀಗ ಪರಿಶೀಲನೆ ನಡೆಸಲಾಗಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕತ್ತಲಲ್ಲಿ ಮಲಗಿದ್ದ ಬಾಲಕಿ ಮೇಲೆ ಟೆಂಪೊ ಹತ್ತಿಸಿದ್ದ ಚಾಲಕ
ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕತ್ತಲಲ್ಲಿ ಮಲಗಿದ್ದ ಬಾಲಕಿ ಮೇಲೆ ಟೆಂಪೊ ಹತ್ತಿಸಿಲಾಗಿದೆ. ಕೂಡಲೇ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾರೆ. ಟೆಂಪೊ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿ.ಟಿ.ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶಿವನ್ಯ (7) ಕುಟುಂಬಸ್ಥರು ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ. ಬೆಂಗಳೂರಿನ ಹುಸ್ಕೂರು ಜಾತ್ರೆಗೆ ಕುಟುಂಬಸ್ಥರು ಬಂದಿದ್ದರು. ಅಲಂಕಾರಿಕ ವಸ್ತುಗಳನ್ನ ಮಾರಲು ಜಾತ್ರೆಗೆ ಬಂದಿದ್ದರು. ಊರಿಗೆ ಹಿಂತಿರುಗಲು ಸಿಟಿ ಮಾರ್ಕೆಟ್ಗೆ ರಾತ್ರಿ ಬಂದಿದ್ದರು. ರಾತ್ರಿ ಬಸ್ ಸಿಗದೆ ತೆಂಗಿನ ಕಾಯಿ ಮಂಡಿ ಬಳಿ ಮಲಗಿದ್ದರು. ಕೆ.ಆರ್. ಮಾರ್ಕೆಟ್ಗೆ ಟೆಂಪೊದಲ್ಲಿ ಹೂವು ತಂದಿದ್ದ ಚಾಲಕ, ಅನ್ಲೋಡ್ ಮಾಡಿ ಟೆಂಪೊ ರಿವರ್ಸ್ ತೆಗೆದಿದ್ದ. ರಸ್ತೆ ಬದಿ ಮಲಗಿದ್ದ ಬಾಲಕಿಯನ್ನ ಗಮನಿಸದ ಚಾಲಕ, ಬಾಲಕಿಯನ್ನ ಗಮನಿಸದೆ ಬಾಲಕಿ ಮೇಲೆ ವಾಹನ ಹರಿದಿದೆ. ಬಾಲಕಿ ಜೋರಾಗಿ ಕಿರುಚುತ್ತಿದ್ದಂತೆ ಚಾಲಕ ಪರಾರಿಯಾಗಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಶಿವನ್ಯ (7) ಸಾವನ್ನಪ್ಪಿದ್ದಾರೆ. ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಗ, ಸೊಸೆಯಿಂದ ರಕ್ಷಣೆ ಕೊಡುವಂತೆ ತಾಯಿ ಮನವಿ
ಮಗ, ಸೊಸೆಯಿಂದ ರಕ್ಷಣೆ ಕೊಡುವಂತೆ ತಾಯಿ ಮನವಿ ಮಾಡಿದ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾವಿನಕೆರೆ ಎಂಬಲ್ಲಿ ನಡೆದಿದೆ. ತಿಪಟೂರು ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡಕೆರಿಗೆ ನಂಜಮ್ಮ ಎಂಬುವವರಿಂದ ಮನವಿ ಮಾಡಲಾಗಿದೆ. ಮಗ ಸತೀಶ್, ಸೊಸೆ ಪ್ರಮೀಳಾ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿ ಮಲಗುವುದಕ್ಕೆ ಬಿಡದೆ ಕಿರುಕುಳ ನೀಡುತ್ತಿದ್ದಾರೆ. ಕೊಲೆ ಮಾಡುವುದಕ್ಕೂ ಯತ್ನಿಸಿದ್ದಾರೆಂದು ತಾಯಿ ಆರೋಪ ಮಾಡಿದ್ದಾರೆ. ಸ್ಥಳೀಯ ಠಾಣೆಗೆ ದೂರು ನೀಡಿದರೂ ಪ್ರಯೋಜನವಿಲ್ಲ. ದಯವಿಟ್ಟು ನನ್ನ ಜೀವಕ್ಕೆ ರಕ್ಷಣೆ ಕೊಡಿ ಎಂದು ತಾಯಿ ಮನವಿ ಮಾಡಿದ್ದಾರೆ.
ಕಲಬುರಗಿ: ಇತ್ತ 10 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಕಿರುಕುಳ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಜೀವನ್ ಯಾಕಾಪುರ್ ಎಂಬಾತನಿಗೆ 2 ವರ್ಷ ಜೈಲು ಶಿಕ್ಷೆ, 20 ಸಾವಿರ ದಂಡ ವಿಧಿಸಿ ಕಲಬುರಗಿ ಜೆಎಂಎಫ್‌ಸಿ ನ್ಯಾಯಾಲಯದ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮಂಡ್ಯ: ಕೊಂಡೋತ್ಸವ ವೀಕ್ಷಣೆ ವೇಳೆ ಛಾವಣಿ ಕುಸಿತ; ಮಹಿಳೆ ಸಾವು, ಹಲವರಿಗೆ ಗಾಯ
ಇದನ್ನೂ ಓದಿ: SSLC ಪರೀಕ್ಷೆಗೆ ನೇಮಕಗೊಂಡಿದ್ದ ಮುಖ್ಯ ಶಿಕ್ಷಕ ಹೃದಯಾಘಾತದಿಂದ ಸಾವು
Published On - 8:39 am, Tue, 29 March 22