ರಾಮನಗರ: ಸಂಸದ ಡಿ.ಕೆ.ಸುರೇಶ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ತೀವ್ರತರ ಗಾಯವಾಗಿ ರಸ್ತೆಯಲ್ಲಿ ಬಿದ್ದಿದ್ದ ವಿಶೇಷಚೇತನ ವ್ಯಕ್ತಿಯೋರ್ವರನ್ನು ಆಸ್ಪತ್ರೆಗೆ ಸೇರಿಸಿ ಅಗತ್ಯ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರದ ಬಳಿ ರಾಮನಗರ ಜಿಲ್ಲೆ ಕನಕಪುರದ ಜಯರಾಮು ಎಂಬ ವ್ಯಕ್ತಿ ಗಾಯಗೊಂಡು ರಸ್ತೆಯಲ್ಲಿಯೇ ಬಿದ್ದಿದ್ದ. ಇದನ್ನು ಗಮನಿಸಿದ ಸಂಸದ ಡಿ.ಕೆ.ಸುರೇಶ್ ತಮ್ಮ ವಾಹನವನ್ನು ನಿಲ್ಲಿಸಿ ವ್ಯಕ್ತಿಯನ್ನು ಕಗ್ಗಲಿಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ರಸ್ತೆಯಲ್ಲಿ ಅಪಘಾತದಿಂದ ಗಾಯಗೊಂಡು ಬಿದ್ದಿದ್ದ ವಿಶೇಷಚೇತನ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಅಗತ್ಯ ವ್ಯವಸ್ಥೆ ಮಾಡಿದ ಸಂಸದ ಡಿ.ಕೆ.ಸುರೇಶ್ ಅವರ ಮಾನವೀಯತೆಗೆ ಶ್ಲಾಘನೆ ವ್ಯಕ್ತವಾಗಿದೆ.
ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಲ್ಲಿ ವಂಚನೆ
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಲ್ಲಿ ಕೊವಿಡ್ ಸೋಂಕಿತರಿಗೆ ವಂಚಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಜಯನಗರ ಠಾಣೆಯಲ್ಲಿ ಶಿವಲಿಂಗಯ್ಯ ಎಂಬ ವ್ಯಕ್ತಿಯ ಮೇಲೆ ದೂರು ದಾಖಲಿಸಲಾಗಿದೆ. ತೇಜಸ್ವಿ ಸೂರ್ಯ ಆಪ್ತ ಸಹಾಯಕ ಭಾನು ಪ್ರಕಾಶ್ ಪ್ರಕರಣ ದಾಖಲಿಸಿದ್ದು, ₹10 ಸಾವಿರ ನೀಡಿದರೆ ರೆಮ್ಡಿಸಿವಿರ್ ಔಷಧ ಕೊಡಿಸುವುದಾಗಿ ವಂಚಿಸಿ ಪ್ರಕರಣ ದಾಖಲಿಸಿದ್ದಾರೆ.
10 ಸಾವಿರ ನೀಡಿದರೆ 5 ರೆಮ್ಡೆಸಿವಿರ್ ಔಷಧ ಕೊಡಿಸುವುದಾಗಿ ಒದಗಿಸುವುದಾಗಿ ನಂಬಿಸಿ ವಂಚನೆ ನಡೆಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಚೇರಿ ಗಮನಕ್ಕೆ ಸೋಂಕಿತನ ಕಡೆಯವರು ತಂದಿದ್ದರು. ಸಂಸದ ತೇಜಸ್ವಿ ಸೂರ್ಯ ಕಚೇರಿಯಿಂದ ಕರೆ ಮಾಡಿದಾಗಲೂ ಆರೋಪಿ ತಾನು ಸಂಸದರ ಪಿಎ ಎಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕೊರೊನಾದಿಂದ ಉಂಟಾದ ಹೆಚ್ಚಿನ ಸಾವುಗಳು ಸೋಂಕು ದೃಢಪಟ್ಟ 10 ದಿನಗಳ ಬಳಿಕ ಸಂಭವಿಸಿದೆ; ಕೊವಿಡ್ 2ನೇ ಅಲೆಯ ವಿಶೇಷ ವರದಿ ಇಲ್ಲಿದೆ
ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ
(MP DK Suresh arrange treatment for specially abled person when he in accident)